ʻಆ ದಿನಗಳು ತುಂಬಾ ಕಠಿಣವಾಗಿದ್ದವುʼ: ತಮ್ಮ ಕಷ್ಟದ ಅವಧಿಯನ್ನು ನೆನೆದ ಸೂರ್ಯಕುಮಾರ್ ಯಾದವ್!
ಭಾರತ ಟಿ20 ತಂಡದ ನಾಯಕತ್ವ ಹಾಗೂ ರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದುಕೊಂಡ ಬಳಿಕ ತಮಗಾದ ಅನುಭವವನ್ನು ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದ್ದಾರೆ. 2026ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಸೂರ್ಯಕುಮಾರ್ ಅವರನ್ನು ಭಾರತ ಟಿ20 ತಂಡದಿಂದ ಕೈ ಬಿಡಲಾಗಿತ್ತು. ಇವರ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತಾದರೂ ಕಳಪೆ ಫಾರ್ಮ್ನಿಂದ ಅವರನ್ನು ತಂಡದಿಂದ ಕೊಕ್ ನೀಡಲಾಗಿತ್ತು.
ಕಷ್ಟದ ದಿನಗಳನ್ನು ನೆನೆದ ಸೂರ್ಯಕುಮಾರ್ ಯಾದವ್. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗೆ ವೇದಿಕೆ ಸಜ್ಜಾಗುತ್ತಿದೆ. ಐಪಿಎಲ್ನ 20ನೇ ಆವೃತ್ತಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಎಲ್ಲರ ಕಣ್ಣಿದೆ. ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
2026ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಪ್ಲೇಆಫ್ ಹಂತಕ್ಕೇರಲು ಸಾಧ್ಯವಾಗಿರಲಿಲ್ಲ. ತಂಡದಲ್ಲಿ ಹಲವು ಸ್ಟಾರ್ ಆಟಗಾರರಿದ್ದರೂ ಇತ್ತೀಚಿನ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಹೊಸ ಆವೃತ್ತಿ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಅನುಭವಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್, ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತ ಟಿ20 ತಂಡದಿಂದಲೂ ಹೊರಗುಳಿದಿದ್ದಾರೆ. ಇದರ ನಡುವೆ ತಮ್ಮ ಇತ್ತೀಚಿನ ಕಠಿಣ ದಿನಗಳ ಬಗ್ಗೆ ಸೂರ್ಯಕುಮಾರ್ ಯಾದವ್ ಮನಬಿಚ್ಚಿ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್!
"ಟಿ20 ವಿಶ್ವಕಪ್ ಬಳಿಕದ ಸಮಯ ನನಗೆ ಸ್ವಲ್ಪ ಕಠಿಣವಾಗಿತ್ತು. ಈ ಸತ್ಯದಿಂದ ನಾನು ದೂರ ಸರಿಯಲು ಬಯಸುವುದಿಲ್ಲ. ನಮ್ಮೊಂದಿಗೆ ನಾವು ಪ್ರಾಮಾಣಿಕವಾಗಿರದಿದ್ದರೆ ಸಂತೋಷದ ಜೀವನ ನಡೆಸುವುದು ತುಂಬಾ ಕಷ್ಟ. ನಿಜ ಹೇಳಬೇಕೆಂದರೆ, ಇತ್ತೀಚಿನ ದಿನಗಳು ನನಗೆ ಬಹಳ ಕಠಿಣವಾಗಿದ್ದವು. ಆದರೆ ಅದೇ ಸಮಯದಲ್ಲಿ ಐಪಿಎಲ್ ನಡೆಯುತ್ತಿದ್ದ ಮೇ ತಿಂಗಳಲ್ಲಿ ನಾನು ಹೆಣ್ಣು ಮಗುವಿನ ತಂದೆಯಾದೆ. ಹೀಗಾಗಿ ನನ್ನ ಸಂಪೂರ್ಣ ಗಮನ ಮಗಳ ಕಡೆಗೆ ಬದಲಾಯಿತು. ಅವಳು ಜನಿಸಿದ ನಂತರದ ಕಳೆದ ಕೆಲವು ತಿಂಗಳುಗಳು ನನ್ನ ಪಾಲಿಗೆ ಅತ್ಯಂತ ಸುಂದರವಾಗಿವೆ," ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಕ್ರಿಕೆಟ್ನ ಆರಂಭಿಕ ದಿನಗಳನ್ನು ನೆನದ ಸೂರ್ಯ
ಐಪಿಎಲ್ ಮುಗಿದ ಮೊದಲ ಎರಡು ತಿಂಗಳುಗಳು ತಮಗೆ ಸಾಕಷ್ಟು ಕಠಿಣವಾಗಿದ್ದವು ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ. ಆದರೆ ತಮ್ಮ ಕ್ರಿಕೆಟ್ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಮತ್ತೆ ಆಟಕ್ಕೆ ಮರಳುವ ಪ್ರೇರಣೆ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ.
IND vs NZ: ಗಾಯಕ್ವಾಡ್, ಇಶಾನ್ ಇನ್; 4ನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
"ಐಪಿಎಲ್ ಮುಗಿದ ಮೊದಲ ಎರಡು ತಿಂಗಳುಗಳು ನನಗೆ ಕಷ್ಟಕರವಾಗಿದ್ದವು. ಆಗ ನನ್ನ ಹಿಂದಿನ ದಿನಗಳ ಬಗ್ಗೆ ಯೋಚಿಸಲು ನಿರ್ಧರಿಸಿದೆ. ನಾನು ಕ್ರಿಕೆಟ್ ಆರಂಭಿಸಿದ ದಿನಗಳು, ಮುಂಬೈ ಪರ ವಯೋಮಾನದ ಕ್ರಿಕೆಟ್ ಆಡಬೇಕು ಹಾಗೂ ಆ ಬಳಿಕ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಬೇಕು ಎಂದು ಕನಸು ಕಂಡಿದ್ದ ಸಮಯವನ್ನು ನೆನಪಿಸಿಕೊಂಡೆ. ಈ ಎಲ್ಲಾ ವಿಚಾರಗಳ ಬಗ್ಗೆ ನನ್ನ ಪತ್ನಿಯೊಂದಿಗೆ ಮಾತನಾಡಿದೆ. ಆಗ ನಾನು 15 ವರ್ಷದ ಹುಡುಗನಾಗಿದ್ದಾಗ ಮುಂಬೈ ಪರ ವಯೋಮಾನದ ಕ್ರಿಕೆಟ್ ಆಡಬೇಕೆಂಬ ಆಸೆ ಮತ್ತು ಆಟದ ಮೇಲಿದ್ದ ಪ್ರೀತಿ, ಉತ್ಸಾಹವನ್ನು ಮತ್ತೆ ಮರಳಿ ಪಡೆಯಬೇಕು ಎಂದು ಹೇಳಿದರು," ಎಂದು ಸೂರ್ಯಕುಮಾರ್ ಯಾದವ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.