ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ನ್ಯೂಜಿಲೆಂಡ್‌ ತಂಡದ ಗಾಯಾಳು ಆಡಂ ಮಿಲ್ನೆ ಸ್ಥಾನಕ್ಕೆ ಕೈಲ್‌ ಜೇಮಿಸನ್‌ ಸೇರ್ಪಡೆ!

ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯ ಪಂದ್ಯವೊಂದರಲ್ಲಿ ಗಾಯಕ್ಕೆ ತುತ್ತಾಗಿದ್ದ ವೇಗದ ಬೌಲರ್‌ ಆಡಂ ಮಿಲ್ನೆ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನಕ್ಕೆ ಮತ್ತೊಬ್ಬ ವೇಗದ ಬೌಲರ್‌ ಕೈಲ್‌ ಜೇಮಿಸನ್‌ ಸೇರ್ಪಡೆಯಾಗಿದ್ದಾರೆ. ಫೆಬ್ರವರಿ 7 ರಂದು ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ.

ಟಿ20 ವಿಶ್ವಕಪ್‌ ನ್ಯೂಜಿಲೆಂಡ್‌ ತಂಡಕ್ಕೆ ಕೈಲ್‌ ಜೇಮಿಸನ್‌ ಸೇರ್ಪಡೆ!

ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ತಂಡಕ್ಕೆ ಕೈಲ್‌ ಜೇಮಿಸನ್‌ ಸೇರ್ಪಡೆ. -

Profile
Ramesh Kote Jan 23, 2026 6:43 PM

ನವದೆಹಲಿ: ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್‌ ತಂಡದ ವೇಗದ ಬೌಲರ್‌ ಆಡಂ ಮಿಲ್ನೆ(Adam Milne) ಅವರು 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಿಂದ ಹೊರ ನಡೆದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯ ಪಂದ್ಯದ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇದೀಗ ಇವರ ಸ್ಥಾನಕ್ಕೆ ನ್ಯೂಜಿಲೆಂಡ್‌ ಟಿ20 ವಿಶ್ವಕಪ್‌ ಟೂರ್ನಿಯ ತಂಡಕ್ಕೆ ಕೈಲ್‌ ಜೇಮಿಸನ್‌ (Kyle jamieson) ಸೇರ್ಪಡೆಯಾಗಿದ್ದಾರೆ. ಫೆಬ್ರವರಿ 7 ರಂದು ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ.

ಆಡಂ ಮಿಲ್ನೆ ಅವರು ದಕ್ಷಿಣ ಆಫ್ರಿಕಾ ಟಿ2 ಟೂರ್ನಿಯ ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ತಂಡದ ಪರ ಆಡುತ್ತಿದ್ದಾರೆ. ಈ ವಾರ ಎಂಐ ಕೇಪ್‌ ವಿರುದ್ಧದ ಪಂದ್ಯದ ವೇಳೆ ಆಡಂ ಮಿಲ್ನೆ ಅವರು ಬೌಲಿಂಗ್‌ ವೇಳೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಅವರ ಗಾಯ ಗಂಭೀರವಾಗಿರುವ ಪತ್ತೆಯಾಗಿದೆ ಹಾಗಾಗಿ ಅವರು ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ.

IND vs NZ 2nd T20I: ನ್ಯೂಜಿಲೆಂಡ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ತಂಡ!

ಹೆಡ್‌ ಕೋಚ್‌ ರಾಬ್‌ ವಾಲ್ಟರ್‌ ಹೇಳಿದ್ದೇನು?

"ಆಡಮ್‌ಗಾಗಿ ನಾವೆಲ್ಲರೂ ದುಃಖಿತರಾಗಿದ್ದೇವೆ. ಅವರು ಟಿ20 ವಿಶ್ವಕಪ್‌ ಟೂರ್ನಿಗೆ ಸಿದ್ಧರಾಗಲು ತುಂಬಾ ಶ್ರಮಿಸಿದ್ದರು ಮತ್ತು ಈಸ್ಟರ್ನ್ ಕೇಪ್ ಸನ್‌ರೈಸರ್ಸ್‌ಗಾಗಿ ತಮ್ಮ ಎಂಟು ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು," ಎಂದು ಹೆಡ್‌ ಕೋಚ್‌ ರಾಬ್‌ ವಾಲ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಪ್ರಯಾಣ ಮೀಸಲು ಆಟಗಾರನಾಗಿದ್ದ ಕೈಲ್‌ ಜೇಮಿಸನ್‌ ಅವರನ್ನು ಇದೀಗ ಅಧಿಕೃತವಾಗಿ ನ್ಯುಜಿಲೆಂಡ್‌ ತಂಡಕ್ಕೆ ಸೇರಿಸಲಾಗಿದೆ. ಪ್ರಸ್ತುತ ಕೈಲ್‌ ಜೇಮಿಸನ್‌ ಅವರು ಭಾರತ ವಿರುದ್ಧದ ವೈಟ್‌ಬಾಲ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಅವರು ಚುಟುಕು ವಿಶ್ವಕಪ್‌ ನಿಮಿತ್ತ ಕಿವೀಸ್‌ ಪರ ಬೌಲಿಂಗ್‌ ನಡೆಸಲಿದ್ದಾರೆ.

ಶುಭಮನ್‌ ಗಿಲ್‌ ಕಿತ್ತಾಕಿ, ಭಾರತ ಏಕದಿನ ತಂಡದ ನಾಯಕತ್ವ ರೋಹಿತ್‌ ಶರ್ಮಾಗೆ ನೀಡಿ ಎಂದ ಮನೋಜ್‌ ತಿವಾರಿ!

ಭಾರತದಲ್ಲಿ ನಡೆಯುತ್ತಿರುವ ವೈಟ್-ಬಾಲ್ ಸರಣಿಯಲ್ಲಿ ಜೇಮೀಸನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. 2024 ಮತ್ತು 2025ರ ಮೊದಲಾರ್ಧದಲ್ಲಿ ಗಾಯಗಳಿಂದ ಬಳಲುತ್ತಿದ್ದ ಈ ಎತ್ತರದ ವೇಗದ ಬೌಲರ್, ಕಳೆದ ವರ್ಷದ ಕೊನೆಯಲ್ಲಿ ವೈಟ್-ಬಾಲ್ ಸ್ವರೂಪಕ್ಕೆ ಮರಳಿದ್ದರು. ಭಾರತದ ವಿರುದ್ಧದ ಕಳೆದ ಒಡಿಐ ಸರಣಿಯಲ್ಲಿ ಜೇಮೀಸನ್ ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ, ಬ್ಲ್ಯಾಕ್ ಕ್ಯಾಪ್ಸ್‌ನ ಐತಿಹಾಸಿಕ 2-1 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲನೇ ಟಿ20ಐ ಪಂದ್ಯದಲ್ಲಿ ಎರಡು ವಿಕೆಟ್‌ ಕಿತ್ತಿದ್ದ ಜೇಮಿಸನ್‌

ಕೈಲ್‌ ಜೇಮಿಸನ್‌ ಅವರು ನಾಗ್ಪುರದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಎರಡು ವಿಎಕಟ್‌ಗಳನ್ನು ಪಡೆದರೂ ತಮ್ಮ ನಾಲ್ಕು ಓವರ್‌ಗಳಿಗೆ 54 ರನ್‌ಗಳನ್ನು ನೀಡಿದ್ದರು. ಆದರೂ ರಾಬ್‌ ವಾಲ್ಟರ್‌ ಅವರು ಕೈಲ್‌ ಜೇಮಿಸನ್‌ ಅವರ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು, ಉಪಖಂಡದ ಪರಿಸ್ಥಿತಿಗಳಲ್ಲಿ ಕೊಡುಗೆ ನೀಡಲು ಅವರ ಅನುಭವ ಮತ್ತು ಸನ್ನದ್ಧತೆಯನ್ನು ಎತ್ತಿ ತೋರಿಸಿದರು. ಮಿಲ್ನೆ ಅನುಪಸ್ಥಿತಿಯ ಹೊರತಾಗಿಯೂ, ಜೇಮಿಸನ್ ಸೇರ್ಪಡೆಯು ಈಗಾಗಲೇ ಬಲಿಷ್ಠವಾಗಿರುವ ನ್ಯೂಜಿಲೆಂಡ್ ವೇಗದ ದಾಳಿಗೆ ಇನ್ನಷ್ಟು ಬಲವನ್ನು ನೀಡುತ್ತದೆ.