ಅಹಮದಾಬಾದ್: ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್ (T20 World Cup 2026) ಗೆದ್ದ ಬಳಿಕ ಸಂಜು ಸ್ಯಾಮ್ಸನ್ (sanju Samson) ಅವರ ಆಟ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಂಯೋಜನೆಯಿಂದ ಕೂಡಿತ್ತು ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (Anil Kumble) ಬಣ್ಣಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದ ಬಳಿಕ ಸ್ಯಾಮ್ಸನ್, ದಾಖಲೆಯ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು ಮತ್ತು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯ ಆರಂಭಿಕ ಹಂತದಲ್ಲಿ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್, ನಾಕೌಟ್ ಹಂತದಲ್ಲಿ ಸತತ ಮೂರು ಅರ್ಧಶತಕಗಳನ್ನು ಗಳಿಸುವ ಮೂಲಕ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.
ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್-8ರ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿದ ಬಳಿಕ ಸಂಜು ಸ್ಯಾಮ್ಸನ್ ಅವರ ಅದ್ಭುತ ಫಾರ್ಮ್ ಆರಂಭವಾಯಿತು. ಇದಾದ ಬಳಿಕ ಅವರು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ತಲಾ 89 ರನ್ ಗಳಿಸಿದರು. ಇದರೊಂದಿಗೆ ಒಂದೇ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಎರಡರಲ್ಲೂ ಅರ್ಧಶತಕ ಗಳಿಸಿದ ಎರಡನೇ ಭಾರತೀಯ ಆಟಗಾರರಾಗಿ (ವಿರಾಟ್ ಕೊಹ್ಲಿ ನಂತರ) ಸ್ಯಾಮ್ಸನ್ ದಾಖಲೆ ಬರೆದರು. ಇದೇ ವೇಳೆ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಸಾಧಿಸಿದ ಆಟಗಾರರಾಗಿ ಅವರು ಹೊಸ ದಾಖಲೆಯನ್ನು ಕೂಡ ಬರೆದರು.
ʻಮೊಹಮ್ಮದ್ ಆಮಿರ್‌ರ ಮತ್ತೊಂದು ಭವಿಷ್ಯ ಸುಳ್ಳುʼ: ಭಾರತದ ಜಯದ ಬಗ್ಗೆ ಪಾಕ್ ಮಾಜಿ ವೇಗಿ ಪ್ರತಿಕ್ರಿಯೆ!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ಸಂಯೋಜನೆ ಸಂಜು ಸ್ಯಾಮ್ಸನ್
ಐದು ಇನಿಂಗ್ಸ್‌ಗಳಲ್ಲಿ ಸ್ಯಾಮ್ಸನ್ ಒಟ್ಟು 321 ರನ್ ಗಳಿಸಿ, ಏಕೈಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದರು. ಪ್ರಮುಖ ಕ್ಷಣಗಳಲ್ಲಿ ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿಯಂತೆ ಸಮರ್ಥವಾಗಿ ಬ್ಯಾಟ್ ಮಾಡಿ, ಪವರ್‌ಪ್ಲೇ ವೇಳೆ ರೋಹಿತ್ ಶರ್ಮಾ ಶೈಲಿಯಲ್ಲಿ ಬೌಲರ್‌ಗಳ ಮೇಲೆ ದಾಳಿ ನಡೆಸಿದರು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
T20 World Cup: ಬ್ಯಾಟಿಂಗ್ ಸಕ್ಸಸ್‌ಗೆ ಸಚಿನ್ ತೆಂಡೂಲ್ಕರ್ ಕಾರಣ ಎಂದ ಸಂಜು ಸ್ಯಾಮ್ಸನ್!
“2024ರ ವಿಶ್ವಕಪ್ ಟೂರ್ನಿಯನ್ನು ನೋಡಿದರೆ, ಅಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದರು. ಇಬ್ಬರೂ ಮಹಾನ್ ಆಟಗಾರರು; ಅವರನ್ನು ಬದಲಾಯಿಸುವುದು ತುಂಬಾ ಕಷ್ಟ. ನನ್ನ ಅಭಿಪ್ರಾಯದಲ್ಲಿ ಸಂಜು ಸ್ಯಾಮ್ಸನ್ ಒಂದು ರೀತಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಮಿಶ್ರಣದಂತಿದ್ದಾರೆ. ಅಗತ್ಯವಾದ ಸಂದರ್ಭದಲ್ಲಿ ವಿಕೆಟ್ ಕಳೆದುಕೊಳ್ಳದೆ, ಆಟವನ್ನು ಯೋಜಿತವಾಗಿ ಕಟ್ಟಿಕೊಂಡು ಸಾಗಿಸುವ ಕೊಹ್ಲಿಯ ಶೈಲಿಯೂ ಅವರಲ್ಲಿದೆ. ಮತ್ತೊಂದೆಡೆ, ಪವರ್‌ಪ್ಲೇ ವೇಳೆ ವೇಗವಾಗಿ ರನ್ ಗಳಿಸಲು ಬೇಕಾದಾಗ ರೋಹಿತ್ ಶರ್ಮಾ ಶೈಲಿಯಲ್ಲಿ ಬೌಲರ್‌ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವೂ ಸ್ಯಾಮ್ಸನ್ ಅವರಲ್ಲಿದೆ,” ಎಂದು ಅನಿಲ್ ಕುಂಬ್ಳೆ ಇಎಸ್‌ಪಿಎನ್ ಕ್ರಿಕ್‌ಇನ್ಪೋ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ʻನಿಮ್ಮಿಂದ ನಿಜವಾಗಿಯೂ ಖುಷಿಯಾಗಿದೆ ಚೆಟಾʼ": ಸಂಜು ಸ್ಯಾಮ್ಸನ್‌ಗೆ ಕಿಂಗ್ ಕೊಹ್ಲಿ ವಿಶೇಷ ಸಂದೇಶ!
ಸಂಜು ಆಟಕ್ಕೆ ಫಾಫ್ ಡು ಪ್ಲೆಸಿಸ್ ಮೆಚ್ಚುಗೆ
ಟೂರ್ನಿಯ ಅವಧಿಯಲ್ಲಿ ಸಂಜು ಸ್ಯಾಮ್ಸನ್ ಅವರ ಆಟದ ಯೋಜನೆಯನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಗುಣಗಾಣ ಮಾಡಿದ್ದಾರೆ. ಪ್ರತಿ ಇನಿಂಗ್ಸ್‌ನಲ್ಲೂ ಸ್ಯಾಮ್ಸನ್ ತಮ್ಮ ಆಟದ ಮಂತ್ರಕ್ಕೆ ನಿಷ್ಠೆಯಿಂದ ಅಂಟಿಕೊಂಡಿದ್ದರು ಎಂದು ಅವರು ಹೇಳಿದರು.
“ನೀವು ನೋಡಿದರೆ, ಇದು ಉತ್ತಮ ಫಾರ್ಮ್‌ನಲ್ಲಿರುವ ಆಟಗಾರ. ಆತ ತನ್ನ ಆಟದ ಶೈಲಿಗೆ ಸಂಪೂರ್ಣವಾಗಿ ನಿಷ್ಠೆಯಿಂದ ಆಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಹಿಂದಿನ ಇನಿಂಗ್ಸ್‌ನ್ನೇ ಮತ್ತೆ ನೋಡುತ್ತಿರುವಂತೆ ಅನ್ನಿಸುತ್ತದೆ. ಇದು ಸಂಪೂರ್ಣವಾಗಿ ಆಟದ ಯೋಜನೆಯ ಪ್ರದರ್ಶನ,” ಎಂದು ಡು ಪ್ಲೆಸಿಸ್ ಅಭಿಪ್ರಾಯಪಟ್ಟರು.