ʻನಿಮ್ಮಿಂದ ನಿಜವಾಗಿಯೂ ಖುಷಿಯಾಗಿದೆ ಚೆಟಾʼ": ಸಂಜು ಸ್ಯಾಮ್ಸನ್‌ಗೆ ಕಿಂಗ್ ಕೊಹ್ಲಿ ವಿಶೇಷ ಸಂದೇಶ!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್‌ಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮಿಂದ ತುಂಬಾ ಖುಷಿಯಾಗಿದೆ ಚೆಟಾ ಎಂದು ಕಿಂಗ್ ಕೊಹ್ಲಿ ಬರೆದುಕೊಂಡಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ. -
ಅಹಮದಾಬಾದ್: ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಫೈನಲ್‌ನಲ್ಲಿ ಸಾಧಿಸಿದ ಐತಿಹಾಸಿಕ ಜಯವು ವಿಶ್ವದಾದ್ಯಂತ ಸಂಭ್ರಮಕ್ಕೆ ಕಾರಣವಾಯಿತು. ಈ ಜಯಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದವರಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಕೂಡ ಒಬ್ಬರು. ಸಾಮಾಜಿಕ ಮಾಧ್ಯಮದ ಮೂಲಕ ಭಾರತೀಯ ತಂಡವನ್ನು ಅಭಿನಂದಿಸಿದ ಅವರು, ವಿಶೇಷವಾಗಿ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಗುಣಗಾನ ಮಾಡಿದರು. ಸೂಪರ್-8 ರಿಂದ ನಾಕ್‌ಔಟ್ ಅವಧಿಯಲ್ಲಿ ಸ್ಯಾಮ್ಸನ್ ತೋರಿದ ಅದ್ಭುತ ಪ್ರದರ್ಶನಗಳು ಭಾರತ ತಂಡ ಮೂರನೇ ಬಾರಿ ಚುಟುಕು ವಿಶ್ವಕಪ್ ಗೆಲ್ಲವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಅಂತರದಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 255 ರನ್‌ಗಳನ್ನು ಕಲೆಹಾಕಿದರು. ಇದು ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತವಾಗಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಗಳಿಸಿದ ಅರ್ಧಶತಕಗಳು ಭಾರತದ ದೊಡ್ಡ ಮೊತ್ತಕ್ಕೆ ಕಾರಣವಾಗಿದ್ದು, ನಂತರ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರ ತಿರುಗಿಸಿದರು.
IND vs NZ: 89 ರನ್ ಸಿಡಿಸಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಸಂಜು ಸ್ಯಾಮ್ಸನ್!
ಆದರೆ ಕೇವಲ 46 ಎಸೆತಗಳಲ್ಲಿ 89 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರ ಅದ್ಭುತ ಇನಿಂಗ್ಸ್ ಹೆಚ್ಚಿನ ಗಮನ ಸೆಳೆಯಿತು. ಕೇರಳದ ಈ ಬ್ಯಾಟರ್ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿ ಇತಿಹಾಸ ನಿರ್ಮಿಸಿದರು. ಆ ಮೂಲಕ ಮಾರ್ಲನ್ ಸ್ಯಾಮುಯೆಲ್ಸ್ ಮತ್ತು ಕೇನ್ ವಿಲಿಯಮ್ಸನ್ ಅವರ ಹಿಂದಿನ ದಾಖಲೆಗಳನ್ನು ಅವರು ಮುರಿದರು.
ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಒಟ್ಟು 321 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್‌ಗಳ ದಾಖಲೆಯನ್ನು ಕೂಡ ಸಂಜು ಮುರಿದರು. ಈ ದಾಖಲೆಯನ್ನು ವಿರಾಟ್ ಕೊಹ್ಲಿ 2014ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ 319 ರನ್ ಗಳಿಸುವ ಮೂಲಕ ಸ್ಥಾಪಿಸಿದ್ದರು.
3️⃣2️⃣1️⃣ RUNS 🔥
— BCCI (@BCCI) March 8, 2026
3️⃣ FIFTIES 👏
8️⃣0️⃣.2️⃣5️⃣ AVERAGE ✨
A performance for the ages from SANJU SAMSON 🫡#TeamIndia | #T20WorldCup | #MenInBlue | #Final | #INDvNZ | @IamSanjuSamson pic.twitter.com/oUDtppO3Mv
ಸಂಜು ಸ್ಯಾಮ್ಸನ್‌ಗೆ ಕೊಹ್ಲಿ ಭಾವನಾತ್ಮಕ ಸಂದೇಶ
ಇದರ ಜೊತೆಗೆ, ಟಿ20 ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೂರನೇ ಬ್ಯಾಟರ್ ಎಂಬ ಸಾಧನೆಯನ್ನು ಸ್ಯಾಮ್ಸನ್ ಮಾಡಿದರು. ಈ ಪಟ್ಟಿಯಲ್ಲಿ ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಶಾಹಿದ್ ಅಫ್ರಿದಿ ಇದ್ದಾರೆ.
ತನ್ನದೇ ದಾಖಲೆಯನ್ನು ಸ್ಯಾಮ್ಸನ್ ಮುರಿದಿದ್ದರೂ, ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವನ್ನು ಕೇರಳ ಮೂಲದ ಆಟಗಾರನಿಗೆ ರವಾನಿಸಿದ್ದಾರೆ.
Virat Kohli's Instagram story for Sanju Samson. 🥹❤️ pic.twitter.com/1bvrG6sXpI
— Mufaddal Vohra (@mufaddal_vohra) March 8, 2026
"ಅತ್ಯಂತ ಅರ್ಹರಾದ ಟೂರ್ನಿ ಶ್ರೇಷ್ಠ ಆಟಗಾರ ಸಂಜು ಸ್ಯಾಮ್ಸನ್ ಅವರಿಂದ ಅದ್ಭುತ ಟೂರ್ನಿಯನ್ನು ಕಂಡೆವು. ಅತ್ಯಂತ ಅಗತ್ಯವಾದ ಸಮಯದಲ್ಲಿ ನೀವು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದೀರಿ. ನಿನಗಾಗಿ ನನಗೆ ತುಂಬಾ ಸಂತೋಷವಾಗಿದೆ ಚೆಟಾ,” ಎಂದು ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ಭಾರತ ತಂಡವನ್ನು ಶ್ಲಾಘಿಸಿದ ಕಿಂಗ್ ಕೊಹ್ಲಿ
ಭಾರತ ತಂಡದ ಭಯಮುಕ್ತ ಕ್ರಿಕೆಟ್ ಶೈಲಿ ಮತ್ತು ಟೂರ್ನಿಯ ಪ್ರಮುಖ ಕ್ಷಣಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಶ್ಲಾಘಿಸಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಕೊಹ್ಲಿ, ಭಾರತ ತಂಡದ 2024ರ ಐಸಿಸಿ ಟಿ20 ವಿಶ್ವಕಪ್ ಜಯದ ನಂತರ, ಹೊಸ ತಲೆಮಾರಿನ ಆಟಗಾರರು ಈ ಫಾರ್ಮ್ಯಾಟ್‌ನಲ್ಲಿ ಭಾರತದ ಪರಂಪರೆಯನ್ನು ಮುಂದುವರಿಸುತ್ತಿರುವುದನ್ನು ಮೈದಾನದ ಬದಿಯಲ್ಲಿ ವೀಕ್ಷಿಸಿದ್ದರು.
Champions ⭐️⭐️⭐️ Phenomenal win for Team India in Ahmedabad. Absolutely no match for the explosive cricket played by us throughout the tournament. Brilliant character shown by the boys to keep fighting in tough situations and become world champions once again. Congratulations to…
— Virat Kohli (@imVkohli) March 8, 2026
“ಚಾಂಪಿಯನ್ಸ್. ಅಹಮದಾಬಾದ್‌ನಲ್ಲಿ ಭಾರತ ತಂಡದ ಅದ್ಭುತ ಜಯ. ಟೂರ್ನಿಯ ಅವಧಿಯಲ್ಲಿ ನಮ್ಮ ತಂಡದ ಸ್ಫೋಟಕ ಕ್ರಿಕೆಟ್ ಎದುರು, ಯಾವುದೇ ತಂಡ ಬಲಿಷ್ಠ ಎದುರಾಳಿಯಾಗಲಿಲ್ಲ. ಕಠಿಣ ಪರಿಸ್ಥಿತಿಗಳಲ್ಲಿ ಹೋರಾಡಿ ಮತ್ತೆ ವಿಶ್ವ ಚಾಂಪಿಯನ್ಸ್ ಆಗಲು ಹುಡುಗರು ಅತ್ಯುತ್ತಮ ನಾಯಕತ್ವ ಮತ್ತು ಧೈರ್ಯ ತೋರಿಸಿದ್ದಾರೆ. ಈ ಸಾಧನೆಗೆ ಎಲ್ಲಾ ಆಟಗಾರರು ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಸದಸ್ಯರಿಗೆ ಅಭಿನಂದನೆಗಳು. ಜಯ ಹಿಂದ್,” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.