ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ದಕ್ಷಿಣ ಆಫ್ರಿಕಾ ತಂಡಕ್ಕೆ ಟ್ರಿಸ್ಟನ್‌ ಸ್ಟಬ್ಸ್‌, ರಯಾನ್‌ ರಿಕೆಲ್ಟನ್‌ಗೆ ಸ್ಥಾನ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಟೋನಿ ಡಿ ಜಾರ್ಜಿ ಹಾಗೂ ಡೊನೊವನ್‌ ಫೆರೇರಾ ಅವರು ಗಾಯಕ್ಕೆ ತುತ್ತಾಗಿದ್ದು, ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ರಯಾನ್‌ ರಿಕೆಲ್ಟನ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಅವರನ್ನು ಸೇರಿಸಲಾಗಿದೆ.

2026ರ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾಗೆ ಹಿನ್ನಡೆ!

ಟಿ20 ವಿಶ್ವಕಪ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಟಬ್ಸ್‌, ರಿಕೆಲ್ಟನ್‌. -

Profile
Ramesh Kote Jan 22, 2026 10:45 PM

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ (South Africa) ಟಿ20 ವಿಶ್ವಕಪ್ (ICC T20I World Cup 2026) ತಂಡದಲ್ಲಿ ರಯಾನ್ ರಿಕಲ್ಟನ್ (Ryan Rickelton) ಮತ್ತು ಟ್ರಿಸ್ಟನ್ ಸ್ಟಬ್ಸ್ (Tristan Stubbs) ಅವರನ್ನು ಸೇರಿಸಿಕೊಳ್ಳಲಾಗಿದೆ. ಇಬ್ಬರೂ ಆಟಗಾರರು ಆರಂಭದಲ್ಲಿ 15 ಸದಸ್ಯರ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಟೋನಿ ಡಿ ಜಾರ್ಜಿ ಮತ್ತು ಡೊನೊವನ್ ಫೆರೇರಾ ಅವರು ಗಾಯಕ್ಕೆ ತುತ್ತಾಗಿ ಬದಲಿಯಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಭಾರತ ಪ್ರವಾಸದ ಸಮಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಟೋನಿ ಡಿ ಜಾರ್ಜಿ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿದ್ದರು. ಎಸ್‌ಎ20 ಟೂರ್ನಿಯಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಆಡುವಾಗ ಇವರು ಗಾಯಗೊಂಡಿದ್ದರು.

ಟಿ20 ವಿಶ್ವಕಪ್ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ದಕ್ಷಿಣ ಆಫ್ರಿಕಾದ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯಿಂದಲೂ ಇಬ್ಬರೂ ಆಟಗಾರರನ್ನು ಹೊರಗಿಡಲಾಗಿದೆ. ಜನವರಿ 27 ಮತ್ತು ಜನವರಿ 31 ರ ನಡುವೆ ಎರಡೂ ತಂಡಗಳ ನಡುವೆ ಮೂರು ಟಿ20 ಪಂದ್ಯಗಳು ನಡೆಯಲಿವೆ. ಪ್ರಸ್ತುತ ಎಸ್‌ಎ 20 ಋತುವಿನಲ್ಲಿ ಎಂಐ ಕೇಪ್ ಟೌನ್ ಪರ ರಿಕಲ್ಟನ್ ಒಂಬತ್ತು ಇನಿಂಗ್ಸ್‌ಗಳಲ್ಲಿ 337 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಸೇರಿವೆ.

IND vs NZ: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಟ್ರಿಸ್ಟನ್‌ ಸ್ಟಬ್ಸ್ ದಕ್ಷಿಣ ಆಫ್ರಿಕಾ ಪರ ಇದುವರೆಗೂ 42 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 27ರ ಸರಾಸರಿ ಮತ್ತು 132 ಸ್ಟ್ರೈಕ್ ರೇಟ್‌ನಲ್ಲಿ 822 ರನ್ ಗಳಿಸಿದ್ದಾರೆ. ಅವರು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ರಿಕಲ್ಟನ್ ದಕ್ಷಿಣ ಆಫ್ರಿಕಾ ಪರ 18 ಟಿ20ಐ ಪಂದ್ಯಗಳಲ್ಲಿ 381 ರನ್ ಗಳಿಸಿದ್ದಾರೆ.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಬಾಂಗ್ಲಾದೇಶ ಔಟ್‌? ಬಾಂಗ್ಲಾ ಸ್ಥಾನಕ್ಕೆ ಸ್ಕಾಟ್ಲೆಂಡ್!

ಡೇವಿಡ್ ಮಿಲ್ಲರ್‌ಗೂ ಗಾಯ

ಕಳೆದ ವರ್ಷದ ರನ್ನರ್-ಅಪ್ ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಟೂರ್ನಿಗೂ ಮುನ್ನ ಮುಂಚಿತವಾಗಿ ಡೇವಿಡ್ ಮಿಲ್ಲರ್ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಗಾಯದಿಂದಾಗಿ ಅವರನ್ನು SA20 ಪ್ಲೇಆಫ್‌ಗಳಿಂದ ಹೊರಗುಳಿದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಿಲ್ಲರ್ ಸ್ಥಾನದಲ್ಲಿ ರೂಬಿನ್ ಹರ್ಮನ್ ಅವರನ್ನು ಸೇರಿಸಲಾಗಿದೆ. "ಮಿಲ್ಲರ್ ಪಾರ್ಲ್ ರಾಯಲ್ಸ್ ಪರ ಆಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದಿಲ್ಲ. ಟಿ20 ವಿಶ್ವಕಪ್‌ ಟೂರ್ನಿಗೂ ಮಿಲ್ಲರ್ ಲಭ್ಯತೆಯು ಫಿಟ್‌ನೆಸ್ ಪರೀಕ್ಷೆಯ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ," ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2026ರ ಐಸಿಸಿ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ: ಏಡೆನ್‌ ಮಾರ್ಕ್ರಮ್‌ (ನಾಯಕ), ಕಾರ್ಬಿನ್‌ ಬಾಷ್‌, ಡೆವಾಲ್ಡ್‌ ಬ್ರೆವಿಸ್‌, ಕ್ವಿಂಟನ್‌ ಡಿ ಕಾಕ್‌, ಮಾರ್ಕೊ ಯೆನ್ಸನ್‌, ಜಾರ್ಜ್‌ ಲಿಂಡೆ, ಕೇಶವ್‌ ಮಾಹಾರಾಜ್‌, ಕ್ವೇನಾ ಎಂಫಾಕಾ, ಡೇವಿಡ್‌ ಮಿಲ್ಲರ್‌ (ಫಿಟ್‌ನೆಸ್‌ ಟೆಸ್ಟ್‌), ಲುಂಗಿ ಎನ್ಗಿಡಿ, ಎನ್ರಿಕ್‌ ನೊರ್ಕಿಯಾ, ಕಗಿಸೊ ರಬಾಡ, ರಯಾನ್‌ ರಿಕೆಲ್ಟನ್‌, ಜೇಸನ್‌ ಸ್ಮಿತ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌