ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿಗೆ (WPL 2026 Mega Auction) ವೇದಿಕೆ ಸಜ್ಜಾಗಿದೆ. ನವೆಂಬರ್ 27ರಂದು ನಡೆಯಲಿರುವ ಈ ಮೆಗಾ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಐದು ಫ್ರಾಂಚೈಸಿಗಳು ಹರಾಜಿನ ನಿಯಮದಂತೆ 50 ಭಾರತೀಯ ಆಟಗಾರ್ತಿಯರು ಮತ್ತು 23 ವಿದೇಶಿಯರು ಸೇರಿದಂತೆ 73 ಮಂದಿ ಆಟಗಾರ್ತಿಯರನ್ನು ಖರೀದಿಸಲು ಎದುರು ನೋಡುತ್ತಿವೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್‌ನಲ್ಲಿ ತೀವ್ರ ಪೈಪೋಟಿ ಉಂಟಾಗಬಹುದು.
ಭಾರತ ಮಹಿಳಾ ತಂಡ (India women team) ವಿಶ್ವಕಪ್ ಮುಡಿಗೇರಿಸಿಕೊಂಡ ಹಿನ್ನೆಲೆ ಫ್ರಾಂಚೈಸಿಗಳ ಕಣ್ಣು ಸ್ವದೇಶಿ ಆಟಗಾರರ ಮೇಲೆ ಇದೆ. ವಿಶ್ವಕಪ್ ಗೆಲುವಿನ ಬಳಿಕ ಯುಪಿ ವಾರಿಯರ್ಸ್ ಬಿಡುಗಡೆ ಮಾಡಿದ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆಲ್‌ರೌಂಡರ್ ದೀಪ್ತಿ ಶರ್ಮಾ (Deepthi Sharma) ಅವರ ಸ್ಥಿರತೆಗೆ ಫ್ರಾಂಚೈಸಿಗಳ ನಡುವೆ ಪೈಪೋಟಿಯ ಬಿಡ್ ಉಂಟಾಗುವ ಸಾಧ್ಯತೆಯಿದೆ.
IPL 2026: ಐಪಿಎಲ್ ಮಿನಿ ಹರಾಜಿನಲ್ಲಿ ಆಂಡ್ರೆ ರಸೆಲ್ ಮೇಲೆ ಕಣ್ಣಿರುವ 3 ತಂಡಗಳು!
ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಬಲ್ಲ ಅಗ್ರ 10 ಆಟಗಾರ್ತಿಯರು
ಹರ್ಲೀನ್ ಡಿಯೋಲ್: ಇವರು ಕಳೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು. ಆಕ್ರಮಣಕಾರಿ ಬಲಗೈ ಬ್ಯಾಟರ್ ಮತ್ತು ಸ್ಪಿನ್ ಬೌಲಿಂಗ್ ಹೊಂದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುವ ಇವರು ಕಳೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜಯಂಟ್ಸ್ ತಂಡದ ಭಾಗವಾಗಿದ್ದರು.
ರೇಣುಕಾ ಸಿಂಗ್: ಕಳೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಭಾರತ ತಂಡದ ವೇಗಿ ರೇಣುಕಾ ಸಿಂಗ್ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆಯಿದೆ.
IND vs SA: ʻಹೆಡ್ ಕೋಚ್ ಹುದ್ದೆಯಿಂದ ಕಿತ್ತಾಕಿʼ-ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಲಾರಾ ವೋಲ್ವಾರ್ಡ್ಟ್: ಕಳೆದ ಬಾರಿ ಗುಜರಾತ್ ಜಯಂಟ್ಸ್ ತಂಡದ ಪರ ಸ್ಟಾರ್ ಆಟಗಾರ್ತಿಯಾಗಿ ಮಿಂಚಿದ್ದ ಲಾರಾ ವೋಲ್ವಾರ್ಡ್ಟ್ ದಕ್ಷಿಣ ಆಫ್ರಿಕಾ ತಂಡದ ನಾಯಕಿಯಾಗಿ ವಿಶ್ವಕಪ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು. 30 ಲಕ್ಷ ರೂ ಮೂಲ ಬೆಲೆ ಹೊಂದಿದ್ದಾರೆ.
ಸೋಫಿ ಎಕ್ಲೆಸ್ಟೋನ್: ಇಂಗ್ಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಎಕ್ಲೆಸ್ಟೋನ್ ಕಳೆದ ಸೀಸನ್‌ನಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ತಂಡದಿಂದ ರಿಲೀಸ್ ಆಗಿರುವ ಅವರು 50 ಲಕ್ಷ ರೂ ಮೂಲ ಬೆಲೆ ಹೊಂದಿದ್ದಾರೆ.
ಸೋಫಿ ಡಿವೈನ್: ನ್ಯೂಜಿಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಸೋಫಿಯಾ ಡಿವೈನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅವರನ್ನು ಈ ಬಾರಿ ಆರ್ಸಿಬಿ ರಿಟೈನ್ ಮಾಡಿಕೊಂಡಿಲ್ಲ. 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ ಅವರು ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿದ್ದಾರೆ.
ಅಮೇಲಿಯಾ ಕೆರ್: ವುಮೆನ್ಸ್ ಪ್ರೀಮಿಯರ್ ಲೀಗ್ ಹಾಲಿ ಚಾಂಪಿಯನ್ಸ್ ಮುಂಬೈ ತಂಡದ ಸ್ಟಾರ್ ಆಟಗಾರ್ತಿ ಅಮೇಲಿಯಾ ಕೆರ್ 50 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ
ಸ್ನೇಹಾ ರಾಣಾ: 2025ರ ಕಳೆದ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಭಾರತ ತಂಡದ ಆಲ್‌ರೌಂಡರ್, ಸ್ನೇಹಾ ರಾಣಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ರಾಣಾ ದೇಶಿ ಕ್ರಿಕೆಟ್‌ನಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಾರೆ.
ಅಲಿಸಾ ಹೀಲಿ: ಕಳೆದ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ಅವರನ್ನು ಯುಪಿ ವಾರಿಯರ್ಸ್ ರಿಟೈನ್ ಮಾಡಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಅವರು ಮೊದಲ ಸುತ್ತಿನಲ್ಲೇ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೆಗ್ ಲ್ಯಾನಿಂಗ್: ಮಹಿಳಾ ಬಿಗ್‌ಬಾಶ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಮೆಗ್ ಲ್ಯಾನಿಂಗ್, ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.
IND vs SA: ʻಭಾರತ ತಂಡ 201ಕ್ಕೆ ಆಲೌಟ್ʼ-ಬ್ಯಾಟ್ಸ್‌ಮನ್‌ಗಳ ಬಗ್ಗೆ ಬೇಸರ ಹೊರಹಾಕಿದ ರವಿಶಾಸ್ತ್ರಿ!
ಕ್ರಾಂತಿ ಗೌಡ: 2025ರ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಅವರು, ದೇಶಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಾರೆ. 2025ರ ಮಹಿಳಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ಯುಪಿ ವಾರಿಯರ್ಸ್ ತಂಡ 14.5 ಕೋಟಿ ರೂಗಳೊಂದಿಗೆ ಹರಾಜಿನಲ್ಲಿ ಭಾಗಿಯಾಗುವ ಅತೀ ಹೆಚ್ಚು ಮೊತ್ತ ಹೊಂದಿರುವ ಫ್ರಾಂಚೈಸಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 5.7 ಕೋಟಿಯೊಂದಿಗೆ ಅತೀ ಕಡಿಮೆ ಹಣ ಹೊಂದಿದೆ.
ಮೊದಲ ಸುತ್ತಿನಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಆಟಗಾರ್ತಿಯರು
ಹರಾಜಿನಲ್ಲಿ ಭಾಗವಹಿಸುವ 277 ಆಟಗಾರ್ತಿಯರ ಪೈಕಿ ಅಲಿಸ್ಸಾ ಹೀಲಿ, ಸೋಫಿ ಡಿವೈನ್, ಸೋಫಿ ಎಕ್ಲೆಸ್ಟೋನ್, ಅಮೆಲಿಯಾ ಕೆರ್, ಮೆಗ್ ಲ್ಯಾನಿಂಗ್, ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಲಾರಾ ವೋಲ್ವಾರ್ಡ್ ಈ ಎಂಟು ಜನ ಆಟಗಾರ್ತಿಯರು ಮೊದಲ ಸುತ್ತಿನ ಹರಾಜಿನಲ್ಲಿ ಕಾಣಿಸಿಕೊಳ್ಳದ್ದಾರೆ. ಈ ಆಟಗಾರ್ತಿಯರಿಗೆ ಫ್ರಾಂಚೈಸಿಗಳ ನಡುವೆ ಪೈಪೋಟಿಯ ಬಿಡ್ಡಿಂಗ್ ನಿರೀಕ್ಷಿಸಬಹುದು.