IND vs SA: ʻಹೆಡ್ ಕೋಚ್ ಹುದ್ದೆಯಿಂದ ಕಿತ್ತಾಕಿʼ-ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ!
Fans Slams Gautam Gambhir: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿದ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ್ ಅವರನ್ನು ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ತೆಗೆಯಬೇಕೆಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಕಿಡಿ. -
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಟೆಸ್ಟ್ (IND vs SA) ಸರಣಿಯನ್ನು 0-2 ಅಂತರದಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿದ ಬೆನ್ನಲ್ಲೆ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ತರಬೇತುದಾರ ಹುದ್ದೆಯಿಂದ ಕೆಳಗೆ ಇಳಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸಂಣಿಯನ್ನು ಕಳೆದುಕೊಂಡಿತು. ಆ ಮೂಲಕ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹರಿಣ ಪಡೆ (South Africa) ಟೆಸ್ಟ್ ಸರಣಿಯನ್ನು ಸಾಧನೆ ಮಾಡಿತು.
ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಭಾರತ ತಂಡಕ್ಕೆ ಹೆಡ್ ಕೋಚ್ ನೇಮಕಗೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಭಾರತ ತಂಡ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಆದರೆ, ಇವರ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶವನ್ನು ತೋರುವಲ್ಲಿ ವಿಫಲವಾಗಿದೆ. ಮೊದಲಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಸೋತಿದ್ದ ಭಾರತ ತಂಡ, ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಆದರೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಇದೀಗ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
IND vs SA: ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿಯ ಸೋಲಿಗೆ ಕಾರಣರಾದ ಐದು ಆಟಗಾರರು!
ಅದರಲ್ಲಿಯೂ ವಿಶೇಷವಾಗಿ ಗೌತಮ್ ಗಂಭೀರ್ ಹೆಡ್ ಕೋಚ್ ಆದ ಬಳಿಕ ಆರ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ಇನ್ನೂ ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ, ಅವರು ಹಠಾತ್ ವಿದಾಯ ಎಲ್ಲರಿಗೂ ಶಾಕ್ ನೀಡಿತ್ತು. ಇದೀಗ ಭಾರತ ತಂಡ, ಟೆಸ್ಟ್ ಸರಣಿಯಲ್ಲಿನ ಸೋಲಿನಿಂದ ಎಲ್ಲರೂ ಇದೀಗ ಗೌತಮ್ ಗಂಭೀರ್ ಅವರನ್ನು ದೂರುತ್ತಿದ್ದಾರೆ.
IND vs SA: ʻನೆಪ ಹೇಳಬೇಡಿ, ಉತ್ತರ ಕೊಡಿʼ-ಗೌತಮ್ ಗಂಭೀರ್ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ!
ಹೆಡ್ ಕೋಚ್ ಹುದ್ದೆಯಿಂದ ಗಂಭೀರ್‌ರನ್ನು ತೆಗೆಯಿರಿ
"ಗೌತಮ್ ಗಂಭೀರ್ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಸುದ್ದಿಗೋಷ್ಠಿ. ಏನು ಮಾಡಬೇಕೆಂದು ನೀವು ನಿಮ್ಮ ಎಲ್ಲಾ ಜ್ಞಾನವನ್ನು ನೀಡಿದ್ದೀರಿ ಆದರೆ ನೀವು ತರಬೇತುದಾರ, ನೀವು ವೇಳಾಪಟ್ಟಿಯನ್ನು ದೂಷಿಸಿದ್ದೀರಿ-ಆಸ್ಟ್ರೇಲಿಯಾದಲ್ಲಿ ಅಪ್ರಸ್ತುತ ಟಿ20ಐ ಸರಣಿಯಲ್ಲಿ ನೀವು ಟೆಸ್ಟ್ ಆಟಗಾರರನ್ನು ಏಕೆ ಆಯ್ಕೆ ಮಾಡಿದ್ದೀರಿ? ಈ ಜ್ಞಾನವನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ನೀಡಬೇಕಿತ್ತೇ? ಕರುಣಾಜನಕ ಮತ್ತು ನಾಚಿಕೆಗೇಡಿನ ಸಂಗತಿ," ಎಂದು ಒಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
Gautam Gambhir with the worst ever press conference. Gave all gyaan on what needs to be done but you are the coach , you blamed schedule - why did you pick test players in an irrelevant T2Oi series in Australia? Yeh gyaan dressing room mai dena tha?
— The Reverse Sweep (@trspodcastt) November 26, 2025
Pathetic & Shameful #INDvSA…
ಮತ್ತೊಬ್ಬ ಅಭಿಮಾನಿ, "ಅವಮಾನಕರ ವೈಟ್‌ವಾಶ್ ನಂತರ ಪತ್ರಿಕಾಗೋಷ್ಠಿಗಾಗಿ ಗೌತಮ್ ಗಂಭೀರ್ ಅವರನ್ನು ವಜಾಗೊಳಿಸುವುದು ಅರ್ಹವಾಗಿತ್ತು," ಎಂದು ದೂರಿದ್ದಾರೆ.
See how shamelessly Gautam Gambhir said "I’m same guy who got results in England, won the Champions Trophy and Asia Cup”. 😭🙏 pic.twitter.com/Tu5BCctcZj
— ` (@arrestshubman) November 26, 2025
"ಇಂಗ್ಲೆಂಡ್‌ನಲ್ಲಿ ಫಲಿತಾಂಶಗಳನ್ನು ಪಡೆದ, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದ ಅದೇ ವ್ಯಕ್ತಿ ನಾನು," ಎಂದು ಗೌತಮ್ ಗಂಭೀರ್ ಎಷ್ಟು ನಾಚಿಕೆಯಿಲ್ಲದೆ ಹೇಳಿದರು ನೋಡಿ," ಎಂದು ಮತ್ತೊಬ್ಬ ಅಭಿಮಾನಿ ವ್ಯಂಗ್ಯವಾಡಿದ್ದಾರೆ.
Hello Gautam Gambhir, call Ravi Shastri. He will tell you how to win this Test from here. pic.twitter.com/jouBPafe0p
— Selfless⁴⁵ (@SelflessCricket) November 25, 2025
"ಹಲೋ ಗೌತಮ್ ಗಂಭೀರ್, ಇಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆಂದು ರವಿ ಶಾಸ್ತ್ರಿಗೆ ಕರೆ ಮಾಡಿ ತಿಳಿದುಕೊಳ್ಳಿ," ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
Gautam Gambhir when Indian cricket fans finally giving him credit for Team India's performance.
— MAHIYANK™ (@Mahiyank_78) November 26, 2025
pic.twitter.com/baeLQbzscV
ಗೌತಮ್ ಗಂಭೀರ್ ಪ್ರತಿಕ್ರಿಯೆ
"ಹೆಡ್ ಕೋಚ್ ಹುದ್ದೆಯ ಸರಿಯಾದ ವ್ಯಕ್ತಿ ನೀವೆಂಬುದನ್ನು ಸ್ವೀಕರಿಸುತ್ತೀರಾ? ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮ್ ಗಂಭೀರ್, "
"ನನ್ನ ಭವಿಷ್ಯವನ್ನು ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟದ್ದು. ಆದರೆ ಇಂಗ್ಲೆಂಡ್‌ನಲ್ಲಿ ನಿಮಗೆ ಫಲಿತಾಂಶಗಳನ್ನು ತಂದುಕೊಟ್ಟ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತರಬೇತುದಾರನಾಗಿದ್ದ ಅದೇ ವ್ಯಕ್ತಿ ನಾನು" ಎಂದು ಅವರು ಇಂಗ್ಲೆಂಡ್‌ನಲ್ಲಿ ಭಾರತದ ರಕ್ಷಣಾತ್ಮಕ 2-2 ಡ್ರಾ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜಯವನ್ನು ಉಲ್ಲೇಖಿಸುತ್ತಾ ಹೇಳಿದರು. "ಆಪಾದನೆ ಎಲ್ಲರ ಮೇಲಿದೆ ಮತ್ತು ನನ್ನಿಂದಲೇ ಪ್ರಾರಂಭವಾಗುತ್ತದೆ," ಎಂದು ಅವರು ಒಪ್ಪಿಕೊಂಡಿದ್ದಾರೆ.