ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಂಬಾಬ್ವೆ ವಿರುದ್ಧ ಮೂರನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ ವನಿತೆಯರು!

ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವೈಷ್ಣವಿ ಶರ್ಮಾ ಐದು ವಿಕೆಟ್ ಪಡೆದು ಮಿಂಚಿದರು. ಪ್ರತಿಕಾ ರಾವಲ್ ಅಜೇಯ 59 ಮತ್ತು ಶಫಾಲಿ ವರ್ಮಾ ಅಜೇಯ 51 ರನ್ ಗಳಿಸಿ ಭಾರತಕ್ಕೆ ಎಂಟು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಭಾರತ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ.

ಜಿಂಬಾಬ್ವೆ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

ಜಿಂಬಾಬ್ವೆ ಎದುರು ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ. -

Profile
Ramesh Kote Oct 28, 2026 9:36 PM

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು (INDW vs ZIMW) 3-0 ಅಂತರದಿಂದ ಗೆದ್ದು ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಬುಧವಾರ ವಡೋದರಾದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಯುವ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ (Vaishnavi Sharma) ಐದು ವಿಕೆಟ್‌ಗಳನ್ನು ಕಬಳಿಸಿದರೆ, ಪ್ರತಿಕಾ ರಾವಲ್ ಮತ್ತು ಶಫಾಲಿ ವರ್ಮಾ ಅಜೇಯ ಅರ್ಧಶತಕಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡ, ಭಾರತದ ಬೌಲರ್‌ಗಳ ಶಿಸ್ತಿನ ದಾಳಿಗೆ ತತ್ತರಿಸಿತು. 39.5 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ವೈಷ್ಣವಿ ಶರ್ಮಾ, 10 ಓವರ್‌ಗಳಲ್ಲಿ 39 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಐದು ವಿಕೆಟ್ ಸಾಧನೆಯಾಗಿದೆ.

ʻನ್ಯೂಜಿಲೆಂಡ್‌ನಲ್ಲಿ ಕೊನೆಯ ಬಾರಿ ರೋಹಿತ್‌, ಕೊಹ್ಲಿಯನ್ನು ಎದುರಿಸುತ್ತೇನೆʼ:ಕೈಲ್‌ ಜೇಮಿಸನ್‌!

ಜಿಂಬಾಬ್ವೆ ಪರ ಮೋಡೆಸ್ಟರ್ ಮುಪಾಚಿಕ್ವಾ 48 ಎಸೆತಗಳಲ್ಲಿ 37 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕಿ ಜೋಸೆಫಿನ್ ನ್ಕೊಮೊ 35 ರನ್ ಗಳಿಸಿದರು. ಆದರೆ, ಉಳಿದ ಬ್ಯಾಟರ್‌ಗಳು ದೊಡ್ಡ ಜೊತೆಯಾಟ ಕಟ್ಟುವಲ್ಲಿ ವಿಫಲರಾದರು. ಸಯಾಲಿ ಸತ್ಘರೆ ಮತ್ತು ಕ್ರಾಂತಿ ಗೌಡ್ ತಲಾ ಎರಡು ವಿಕೆಟ್ ಪಡೆದು ವೈಷ್ಣವಿಗೆ ಉತ್ತಮ ಸಾಥ್ ನೀಡಿದರು.

ಪ್ರತೀಕಾ ರಾವಲ್, ಶಫಾಲಿ ವರ್ಮಾ ಅರ್ಧಶತಕದ ಅಬ್ಬರ

132 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಯಸ್ತಿಕಾ ಭಾಟಿಯಾ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಹರ್ಲೀನ್ ಡಿಯೋಲ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ನಂತರ ಜೊತೆಯಾದ ಪ್ರತೀಕಾ ರಾವಲ್ ಮತ್ತು ಶಫಾಲಿ ವರ್ಮಾ ಜಿಂಬಾಬ್ವೆ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.

ʻತಮ್ಮ ಓಪನಿಂಗ್‌ ಸ್ಥಾನವನ್ನು ತ್ಯಾಗ ಮಾಡಿದ್ದಾರೆʼ: ಸಂಜು ಸ್ಯಾಮ್ಸನ್‌ ನಿಸ್ವಾರ್ಥ ಮನೋಭಾವವನ್ನು ಶ್ಲಾಘಿಸಿದ ಅಭಿಷೇಕ್‌ ಶರ್ಮಾ!

ಪ್ರತಿಕಾ ರಾವಲ್ 56 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರೆ, ಶಫಾಲಿ ವರ್ಮಾ ಕೇವಲ 26 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿದರು. ಈ ಜೋಡಿಯ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 17 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ಗುರಿ ತಲುಪಿತು. ಭಾರತ 33 ಓವರ್‌ಗಳು ಬಾಕಿ ಇರುವಾಗಲೇ ಪಂದ್ಯ ಗೆದ್ದು ಸರಣಿಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.