ಸೆಂಚುರಿ ಮೂಲಕ ಏಕದಿನ ಕ್ರಿಕೆಟ್‌ಗೆ ವಿದಾಯದ ಸುಳಿವು ಕೊಟ್ರಾ? : ವಿರಾಟ್ ಕೊಹ್ಲಿ ಬಗ್ಗೆ ಅಶ್ವಿನ್ ಶಾಕಿಂಗ್ ಹೇಳಿಕೆ!
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಶತಕ ಸಿಡಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ರಾಂಚಿ ಮತ್ತು ರಾಯ್ಪುರದಲ್ಲಿ ಸತತ ಎರಡು ಶತಕ ಬಾರಿಸಿ ಸಂಭ್ರಮಿಸಿದ ರೀತಿ ನೋಡಿದರೆ ಅವರ ಏಕದಿನ ಕ್ರಿಕೆಟ್ ನಿವೃತ್ತಿಗೆ ಮತ್ತು ಈ ಸಂಭ್ರಮಾಚರಣೆಗೆ ಏನಾದರೂ ಸಂಬಂಧವಿದೆಯಾ? ಎಂದು ಅಶ್ವಿನ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಆರ್ ಅಶ್ವಿನ್. -
ಮುಂಬೈ: ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿರುವ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಅವರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಪ್ರಸ್ತುತ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕ ಬಾರಿಸಿದ್ದಾರೆ. ರಾಯ್‌ಪುರದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಶತಕ ಬಾರಿಸಿ ಜಿಂಕೆ ಜಿಗಿದಂತೆ ಜಿಗಿದು ಸಂಭ್ರಮಿಸಿದ್ದರು, ಇದೀಗ ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin), ಕೊಹ್ಲಿಯವರು ಶತಕ ಸಿಡಿಸಿದ ಬಳಿಕ ಅವರ ಆಚರಣೆಯನ್ನು ನೋಡಿದರೆ ಅವರ ಏಕದಿನ ಕ್ರಿಕೆಟ್ ನಿವೃತ್ತಿಗೂ ಈ ಆಚರಣೆಗೂ ಸಂಬಂಧವಿದೆಯಾ? ಎಂದು ಹೇಳುವ ಮೂಲಕ ಕೊಹ್ಲಿಯವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನ ಆಶ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಆರ್ ಅಶ್ವಿನ್, "ವಿರಾಟ್ ಏಕೆ ಹಾಗೆ ಆಚರಿಸುತ್ತಿದ್ದಾರೆ? ಅವರು ಏನು ಯೋಚಿಸುತ್ತಿದ್ದಾರೆ ಮತ್ತು ಅವರು ಏನನ್ನು ಅನುಭವಿಸಿದ್ದಾರೆ? ವಿರಾಟ್ ಟೆಸ್ಟ್ ಕ್ರಿಕೆಟ್ ಅನ್ನು ತೊರೆದರು ಎಂಬುದನ್ನು ನಾವು ಮರೆಯಬಾರದು. ಎರಡೂ ಘಟನೆಗಳು ಏಕಕಾಲದಲ್ಲಿ ಕಂಡುಬಂದವು. ಅವರು ಟೆಸ್ಟ್ ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದರು ಮತ್ತು ಯಾವಾಗಲೂ ಆಡಲು ಬಯಸುತ್ತಿದ್ದರು, ಆದರೆ ಪರಿಸ್ಥಿತಿ ಅವರನ್ನು ಹಿಂದೆ ಸರಿಯುವಂತೆ ಮಾಡಿತು. ಅವರ ಸುತ್ತಲೂ ಮಾತುಗಳು ಮತ್ತು ಟೆಸ್ಟ್‌ಗಳಲ್ಲಿ ಅವರ ರನ್‌ಗಳ ಕೊರತೆಯ ಬಗ್ಗೆ ಪ್ರಶ್ನೆಗಳು ಇದ್ದವು ಮತ್ತು ಅವರು ಏನು ಎದುರಿಸುತ್ತಿದ್ದಾರೆಂದು ನಮಗೆ ನಿಜವಾಗಿಯೂ ತಿಳಿದಿಲ್ಲ. ಯಾವುದೇ ಸಾಮರ್ಥ್ಯದಲ್ಲಿ ಕ್ರೀಡೆಯನ್ನು ತೊರೆಯುವುದು ಒಂದು ಪ್ರಮುಖ ನಿರ್ಧಾರ," ಎಂದು ಹೇಳಿದ್ದಾರೆ.
IND vs SA: ಕೊಹ್ಲಿ, ಗಾಯಕ್ವಾಡ್ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಬಿಸಿಸಿಐ ಕಾರಣ: ಆರ್ ಅಶ್ವಿನ್
ಒಂದು ವರ್ಷದ ಹಿಂದೆ ಭಾರತೀಯ ಕ್ರಿಕೆಟ್ ಮಂಡಳಿ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಆಟಗಾರ ದೇಶಿ ಕ್ರಿಕೆಟ್‌ನಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ರಣಜಿ ಟ್ರೋಫಿ ಆಡಿದ್ದರು. ಸುಮಾರು 10 ವರ್ಷಗಳಿಗಿಂತಲೂ ಹೆಚ್ಚು ಸಮಯ ದೇಶಿ ಕ್ರಿಕೆಟ್‌ನಿಂದ ಹೊರಗುಳಿದಿದ್ದಇಬ್ಬರೂ ಆಟಗಾರರು ಅಂತಿಮವಾಗಿ ರೆಡ್ ಬಾಲ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಈ ಇಬ್ಬರೂ ನಿವೃತ್ತಿಯ ಬಗ್ಗೆ ಯಾವುದೇ ಸುಳಿವು ನೀಡದೆ, ಹಠಾತ್ ವಿದಾಯ ಹೇಳಿದ ಕಾರಣ ಇಬ್ಬರು ಆಟಗಾರರನ್ನು ನಿವೃತ್ತಿಯ ಸುಳಿಗೆ ತಳ್ಳಲಾಗಿದೆ ಎಂದು ಅನೇಕರು ಭಾವಿಸಿದ್ದರು.
ಅಂತಾರಾಷ್ಟ್ರೀಯ ಅನುಭವವಿದ್ದರೂ ದೇಶಿ ಕ್ರಿಕೆಟ್‌ನಲ್ಲಿ ತನ್ನ ಸಾಮಾರ್ಥ್ಯ ಸಾಬೀತು ಪಡಿಸುವಂತೆ ಬಿಸಿಸಿಐ ಹೇಳಿರುವುದು ಅವರಿಗೆ ತೋರಿದ ಅಗೌರವವಾಗಿರಬಹುದು. ಪ್ರತಿ ಬಾರಿಯೂ ಅವರು ಶತಕ ಸಿಡಿಸಿದಾಗಲೂ, ಅವರಲ್ಲಿ ಆಕ್ರೋಶ ಇರುತ್ತದೆ. ಇದಕ್ಕೆ ಬಿಸಿಸಿಐ ಮಾಡಿದ ಈ ನಿಯಮವೇ ಮುಖ್ಯ ಕಾರಣವಿರಬಹುದೆಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್ ಮಾರ್ಕ್ರಮ್!
ಕೊಹ್ಲಿಯವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಹಿಂದಿರುವ ಕಾರಣವನ್ನು ವಿವರಿಸಿದ ಆರ್ ಅಶ್ವಿನ್, "ಜನರು ತಮ್ಮ ಕೌಶಲ ಮತ್ತು ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅವರು ಇನ್ನೂ ಏನು ಸಮರ್ಥರು ಎಂಬುದನ್ನು ಎಲ್ಲರಿಗೂ ತೋರಿಸಬೇಕೆಂದು ಅವರು ಭಾವಿಸಿದ್ದಾರೆ ಎಂದು ಅವರು ವೈಯಕ್ತಿಕವಾಗಿ ಭಾವಿಸಿರಬೇಕು. ಕೆಲವೊಮ್ಮೆ, ನಿಮ್ಮನ್ನು ಸಾಬೀತುಪಡಿಸಲು ನೀವು ಹತಾಶರಾದಾಗ, ನೀವು ಹೊರಬರಬಹುದು. ಆದರೆ ನೀವು ನನ್ನನ್ನು ಅನುಮಾನಿಸಿದರೆ, ನನ್ನ ಸಾಮಾರ್ಥ್ಯಕ್ಕೆ ಇದೇ ಸಾಕ್ಷಿ. ಎಂದು ಅವರು ಹೇಳುತ್ತಿರುವಂತೆ ತೋರುತ್ತಿದೆ. ಅವರು ಮಾನಸಿಕಾವಾಗಿ ದೃಢವಾಗಿರುವಂತೆ ಕಾಣುತ್ತಿದ್ದಾರೆ," ಎಂದು ಅಶ್ವಿನ್ ಹೇಳಿದ್ದಾರೆ.
2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿಯವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 77ರ ಸರಾಸರಿಯಲ್ಲಿ 311 ರನ್ ಕಲೆಹಾಕಿದ್ದಾರೆ. ಡಿಸೆಂಬರ್ 6ರಂದು ವೈಜಾಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯವನ್ನು ಆಡಲಿದ್ದು, ಅವರ ಭರ್ಜರಿ ಫಾರ್ಮ್ ಮುಂದುವರಿಸಲಿದ್ದಾರೆ.