ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ವೈಭವ್‌ ಸೂರ್ಯವಂಶಿ ನೀರು ತೆಗೆದುಕೊಂಡು ಹೋದರೆ ತಪ್ಪೇನು? ಆರ್‌ ಅಶ್ವಿನ್‌ ಗರಂ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 776 ರನ್‌ಗಳನ್ನು ಕಲೆ ಹಾಕಿದ ವೈಭವ್‌ ಸೂರ್ಯವಂಶಿ ಅವರು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳಲ್ಲಿ ಅವರು ವಾಟರ್‌ ಬಾಯ್‌ ಆಗಿದ್ದರು. ಈ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವೈಭವ್‌ ನೀರು ತೆಗೆದುಕೊಂಡು ಹೋದರೆ ತಪ್ಪೇನು? ಅಶ್ವಿನ್‌ ಪ್ರಶ್ನೆ!

ಟೀಕಾಕಾರರಿಗೆ ತಿರುಗೇಟು ನೀಡಿದ ಆರ್‌ ಅಶ್ವಿನ್‌. -

Profile
Ramesh Kote Jun 30, 2026 6:55 PM

ನವದೆಹಲಿ: ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ (Vaibhav Sooryavanshi) ವಿಶ್ರಾಂತಿ ನೀಡುವುದು ತಪ್ಪಲ್ಲ ಎಂಬ ಹೇಳಿಕೆಯಿಂದ ಟೀಕೆಗಳನ್ನು ಎದುರಿಸಿದ ನಂತರ, ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಮುನ್ನ ಮಾತನಾಡಿದ ಅಶ್ವಿನ್, 15 ವರ್ಷದ ಆಟಗಾರ, ಹಿರಿಯ ಭಾರತೀಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಇದ್ದು, ಅನುಭವವನ್ನು ಪಡೆಯುವುದು ಅಥವಾ ಅವರಿಗೆ ನೀರು/ಡ್ರಿಂಕ್ಸ್ ನೀಡುವುದು ಏನು ತಪ್ಪು ಎಂದು ಪ್ರಶ್ನಿಸಿದರು.

ಅದ್ಭುತವಾದ ಐಪಿಎಲ್ ಸೀಸನ್ ಬಳಿಕವೂ ವೈಭವ್ ಸೂರ್ಯವಂಶಿಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಅವಕಾಶ ನೀಡಲಾಗಿರಲಿಲ್ಲ. ಐಪಿಎಲ್ ನಂತರ ಶ್ರೀಲಂಕಾದಲ್ಲಿ ನಡೆದಿದ್ದ ಮೂರು ರಾಷ್ಟ್ರಗಳ ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡದ ಪರ ಆಡಿದ ಅವರು, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದರು.

ಐರ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡದೇ ಇದ್ದಾಗ ರವಿಚಂದ್ರನ್ ಅಶ್ವಿನ್ ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಪಂದ್ಯವನ್ನು ಹೊರಗಿನಿಂದ ನೋಡುವುದು, ತಂಡದ ವಾತಾವರಣಕ್ಕೆ ಹೊಂದಿಕೊಳ್ಳುವುದು ಮತ್ತು ಅನುಭವ ಪಡೆಯುವುದಕ್ಕೂ ಮಹತ್ವವಿದೆ ಎಂದು ಅವರು ಒತ್ತಿ ಹೇಳಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್‌ ಸ್ಟೋಕ್ಸ್‌ಗೆ ಸಂದೇಶ ರವಾನಿಸಿದ ಸಚಿನ್‌ ತೆಂಡೂಲ್ಕರ್‌!

"ಹೊರಗಿನಿಂದ ಕುಳಿತು ಪಂದ್ಯವನ್ನು ನೋಡುವುದಕ್ಕೂ ಮೌಲ್ಯವಿದೆ. ಅವರು ತಂಡಕ್ಕೆ ಸಹಾಯ ಮಾಡಲಿ, ಅಗತ್ಯವಿದ್ದರೆ ನೀರು ತಂದುಕೊಡಲಿ. ಆ ಅನುಭವದಿಂದ ಬಹಳಷ್ಟು ಕಲಿಯಬಹುದು," ಎಂದು ಅಶ್ವಿನ್ ತಮ್ಮ ಯೂಟ್ಯೂಬ್‌ ವಿಡಿಯೋದಲ್ಲಿ ತಿಳಿಸಿದ್ದರು.

"ಒಬ್ಬ ಶ್ರೇಷ್ಠ ಆಟಗಾರ ಒಂದು ದಿನದಲ್ಲೇ ರೂಪುಗೊಳ್ಳುವುದಿಲ್ಲ. ಸಚಿನ್ ತೆಂಡೂಲ್ಕರ್ ಅವರ ಸಂದರ್ಭದಲ್ಲಿದ್ದಂತೆ, ವೈಭವ್ ಆಡಲು ಆರಂಭಿಸಿದ ನಂತರ, ಅವರನ್ನು ಮತ್ತೆ ಕೈಬಿಡದ ಪರಿಸ್ಥಿತಿಯೂ ಬರಬಹುದು," ಎಂದೂ ಅವರು ಹೇಳಿದ್ದಾರೆ.

"ಆದರೆ ಅವರು ಆರಂಭದಲ್ಲಿ ಪ್ಲೇಯಿಂಗ್ XI ಹೊರಗಡೆ ಸ್ವಲ್ಪ ಸಮಯ ಕಳೆದರೆ, ಅವರಿಗೆ ಸಹಾನುಭೂತಿ ಮತ್ತು ತಂಡದ ಪರಿಸರದ ಬಗ್ಗೆ ಉತ್ತಮವಾಗಿ ಅರ್ಥವಾಗುತ್ತದೆ. ಅವರ ಮುಂದೆ ದೀರ್ಘ ಮತ್ತು ಪ್ರಕಾಶಮಾನವಾದ ವೃತ್ತಿಜೀವನವಿದೆ. ಹೊರಗಡೆ ಕುಳಿತುಕೊಳ್ಳುವುದೂ ಸಹ ಒಂದು ಪಾತ್ರವೇ ಆಗಿದೆ," ಎಂದು ಅಶ್ವಿನ್ ಸರಣಿಯ ಮೊದಲ ಟಿ20ಐ ಪಂದ್ಯದ ಬಳಿಕ ತಿಳಿಸಿದ್ದರು.

IND vs ENG: ಟಿ20ಐ ಸರಣಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಬಗ್ಗೆ ಅಂಬಾಟಿ ರಾಯುಡು ದೊಡ್ಡ ಹೇಳಿಕೆ!

ಟೀಕಾಕಾರರಿಗೆ ತಿರುಗೇಟು ನೀಡಿದ ಅಶ್ವಿನ್‌

ಅಶ್ವಿನ್ ಅವರ ಹೇಳಿಕೆಗಳ ಬಳಿಕ ಅವರಿಗೆ ಸಾಕಷ್ಟು ಟೀಕೆಗಳು ಎದುರಾಗಿದ್ದು, ಫಾರ್ಮ್‌ನಲ್ಲಿ ಇದ್ದರೂ ಒಬ್ಬ ‘ಜನೆರೇಶನಲ್ ಟ್ಯಾಲೆಂಟ್’ ಅನ್ನು ತಂಡದಲ್ಲಿ ಸೇರಿಸಿಕೊಂಡು ಆಡಿಸದಿದ್ದರೆ ಅದರ ಉದ್ದೇಶವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಶ್ವಿನ್, ಹಿರಿಯ ಆಟಗಾರರಿಗೆ ನೀರು ಕೊಡುವುದನ್ನು ನಕಾರಾತ್ಮಕವಾಗಿ ನೋಡಲಾಗುತ್ತಿರುವುದೇ ಏಕೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

“ನಾವು ವೈಭವ್ ಸೂರ್ಯವಂಶಿಗೆ ಸಮಯ ನೀಡಬೇಕು, ಅವರು ಐಪಿಎಲ್‌ ಟೂರ್ನಿಯಲ್ಲಿ ಆಡಿದ ರೀತಿಯನ್ನು ನೋಡಿದರೆ, ಅವರಿಗೆ ಕೆಲ ಹಂತದಲ್ಲಿ ಅವಕಾಶ ಕೊಡಲೇಬೇಕು. ಅವರು ತುಂಬಾ ವಿಶೇಷ ಆಟಗಾರ,” ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.