ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯಾ ಕಪ್‌ ಗೆಲ್ಲಲು ಎದುರು ನೋಡುತ್ತಿರುವ ಭಾರತ ತಂಡಕ್ಕೆ ಅಫ್ಘಾನಿಸ್ತಾನದ ಭೀತಿ!

ಬಹುನಿರೀಕ್ಷಿತ 2025ರ ಏಷ್ಯಾಕಪ್‌ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಕಠಿಣ ತಯಾರಿ ನಡೆಸುತ್ತಿದೆ. ಇದರ ನಡುವೆ ಏಷ್ಯಾ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ ತಂಡಕ್ಕೆ ಅಫ್ಘಾನಿಸ್ತಾನ ತಂಡ ಭೀತಿ ಎದುರಾಗಿದೆ. ಹೇಗೆಂದು ಇಲ್ಲಿ ವಿವರಿಸಲಾಗಿದೆ.

ಏಷ್ಯಾ ಕಪ್‌ ಗೆಲ್ಲಲು ಎದುರು ನೋಡುತ್ತಿರುವ ಭಾರತಕ್ಕೆ ಆಫ್ಘನ್‌ ಭೀತಿ!

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಅಫ್ಘಾನಿಸ್ತಾನದ ಭೀತಿ. -

Profile Ramesh Kote Sep 3, 2025 7:35 PM

ನವದೆಹಲಿ: ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡ (India) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಮತ್ತೊಂದು ಕಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ತಂಡ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದರೆ, ಮತ್ತೊಂದು ಕಡೆ ಸದ್ದಿಲ್ಲದೆ ಅಫ್ಘಾನಿಸ್ತಾನ ತಂಡ ಕೂಡ ಎಲ್ಲಾ ತಂಡಗಳಿಗೆ ಭೀತಿ ಹುಟ್ಟಿಸಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಯುಎಇ ಕಂಡೀಷನ್ಸ್‌ನಲ್ಲಿ ಅಫ್ಘಾನಿಸ್ತಾನ ತಂಡ ಸಾಕಷ್ಟು ಪಂದ್ಯಗಳನ್ನುಆಡಿದೆ. ಹಾಗಾಗಿ ಎಲ್ಲಾ ತಂಡಗಳಿಗೆ ಹೋಲಿಕೆ ಮಾಡಿದರೆ, ಇಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ ತಂಡ ಎನಿಸಿಕೊಂಡಿದೆ. ಅಫ್ಘಾನಿಸ್ತಾನ ತಂಡ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಹಾಂಕಾಂಗ್‌ ತಂಡಗಳ ಜೊತೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅಫ್ಘಾನಿಸ್ತಾನ ಈ ಗುಂಪಿನಿಂದ ಸೂಪರ್‌ 4 ಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದೆ.

ಸ್ಪಿನ್‌ ಸ್ನೇಹಿ ಕಂಡೀಷನ್ಸ್‌ನಲ್ಲಿ ಆಡಿದಾಗ ಅಫ್ಘಾನಿಸ್ತಾನ ತಂಡ ಟೂರ್ನಿಯಲ್ಲಿ ಪ್ರಾಬಲ್ಯವನ್ನು ಸಾಧಿಸಲಿದೆ. ಭಾರತದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಫ್ಘನ್‌ ತಂಡ ಪ್ರಾಬಲ್ಯ ಮೆರೆಯಲಿದೆ. ಈ ವೇಳೆ ಇಂಗ್ಲೆಂಡ್‌, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳನ್ನು ಮಣಿಸಿತ್ತು ಹಾಗೂ ಆಸ್ಟ್ರೇಲಿಯಾ ವಿರುದ್ದವೂ ಬಹುತೇಕ ಗೆಲುವಿನ ಹಾದಿಯಲ್ಲಿತ್ತು. ಆದರೆ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕಾಂಗಿಯಾಗಿ ಆಡಿ ಆಸೀಸ್‌ಗೆ ಗೆಲುವು ತಂದುಕೊಟ್ಟಿದ್ದರು. ನಂತರ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನವನ್ನು ತೋರಿತ್ತು. ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಆಫ್ಘನ್‌ ಮುಂದಿನ ಸುತ್ತಿಗೆ ಪ್ರವೇಶ ಮಾಡಿತ್ತು. ಅದರಲ್ಲಿಯೂ ವಿಶೇಷವಾಗಿ ಟಿ20 ಸ್ವರೂಪದಲ್ಲಿ ಅಫ್ಘಾನಿಸ್ತಾನ ತಂಡ ಅತ್ಯಂತ ಬಲಿಷ್ಠವಾಗಿದೆ.

Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್‌ ಪಾಂಡ್ಯ!

ಏಷ್ಯಾ ಕಪ್‌ ಟೂರ್ನಿಗೆ ಅಫ್ಘಾನಿಸ್ತಾನ ತಂಡ

ಏಷ್ಯಾ ಕಪ್‌ ಟೂರ್ನಿಗೆ ರಶೀದ್‌ ಖಾನ್‌ ಒಳಗೊಂಡ ಅಫ್ಘಾನಿಸ್ತಾನ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಇಬ್ರಾಹಿಂ ಝರ್ಡಾನ್‌, ರಹಮಾನುಲ್ಲಾ ಗುರ್ಬಾಝ್‌, ಮೊಹಮ್ಮದ್‌ ನಬಿ ಹಾಗೂ ಗುಲ್ಬದ್ದಿನ್‌ ನೈಬ್‌ ಅವರು ತಮ್ಮ ಮ್ಯಾಚ್‌ ವಿನ್ನಿಂಗ್‌ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಫಝಲಕ್‌ ಫಾರೂಕಿ, ನವೀನ್‌ ಉಲ್‌ ಹಕ್‌ ಹಾಗೂ ಅಝಮತ್‌ವುಲ್‌ ಒಮರ್ಜಾಯ್‌ ಅತ್ಯುತ್ತಮ ಬೌಲಿಂಗ್‌ ಗುಣಮಟ್ಟವನ್ನು ಹೊಂದಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ರಶೀದ್‌ ಖಾನ್‌, ನೂರ್‌ ಅಹ್ಮದ್‌,ಮುಜೀಬ್‌ ಉರ್‌ ರೆಹಮಾನ್‌ ಹಾಗೂ ಅಲ್ಲಾ ಘಾಝಂಫರ್‌ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದಾರೆ.

Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್‌ ಪಠಾಣ್‌!

ಭಾರತಕ್ಕೆ ಆಫ್ಘನ್‌ ಭೀತಿ

ಭಾರತ ತಂಡದಂತೆ ಅಫಘಾನಿಸ್ತಾನ ತಂಡ ಕೂಡ ಬಲಿಷ್ಠವಾಗಿದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ, ಭಾರತ ತಂಡವನ್ನು ಮಣಿಸಬಹುದು. ಅದರಲ್ಲಿಯೂ ಯುಎಇ ಕಂಡೀಷನ್ಸ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವವನ್ನು ಆಫ್ಘನ್‌ ಹೊಂದಿದೆ. ಅಲ್ಲದೆ ಭಾರತಕ್ಕೆ ಹೋಲಿಸಿದರೆ, ಯುಎಇಯಲ್ಲಿ ಆಫ್ಘನ್‌ ಅತಿ ಹೆಚ್ಚು ಪಂದ್ಯಗಳನ್ನು ಆಡಿದೆ. ಅಲ್ಲದೆ ವಿಶ್ವದಾದ್ಯಂತ ಅಫ್ಘಾನಿಸ್ತಾನ ಆಟಗಾರರು ಫ್ರಾಂಚೈಸಿ ಲೀಗ್‌ಗಳಲ್ಲಿ ನಿಯಮಿತವಾಗಿ ಆಡುವುದರಿಂದ ಚುಟುಕು ಕ್ರಿಕೆಟ್‌ನಲ್ಲಿ ಅದ್ಭುತ ಪರಿಪಕ್ವತೆಯನ್ನು ಹೊಂದಿದ್ದಾರೆ. ಇದನ್ನು ಗಮಿಸಿದರೆ, ಭಾರತ ತಂಡಕ್ಕೆ ಅಫಘಾನಿಸ್ತಾನ ತಂಡದ ಭೀತಿ ಇದೆ ಎಂದು ಹೇಳಬಹುದು.

Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್‌ ಹಿಡಿದ ಟಾಪ್‌-5 ಆಟಗಾರರು

ಅಫ್ಘಾನಿಸ್ತಾನ ತಂಡ: ರಶೀದ್‌ ಖಾನ್‌ (ನಾಯಕ), ರೆಹಮಾನುಲ್ಲಾ ಗರ್ಬಝ್‌ (ವಿ.ಕೀ), ಇಬ್ರಾಹಿಂ ಝರ್ಡಾನ್‌, ಡಾರ್ವಿಷ್‌ ರಸೋಲಿ, ಸೆಡಿಖುಲ್ಲಾ ಅಟಲ್‌, ಅಝಮತ್‌ವುಲ್ಲಾ ಒಮರ್ಜಾಯ್‌, ಕರಿಮ್‌ ಜನತ್‌, ಮೊಹಮ್ಮದ್‌ ನಬಿ, ಗುಲ್ಬಿದ್ದಿನ್‌ ನೂಬ್‌, ಶರಫುದ್ದಿನ್‌ ಅಶ್ರಫ್‌, ಮೊಹಮ್ಮದ್‌ ಇಶಾಕ್‌, ಮುಜೀಬ್‌ ಉರ್‌ ರೆಹಮಾನ್‌, ಅಲ್ಲಾ ಘಾಜಂಫರ್‌, ನೂರ್‌ ಅಹ್ಮದ್‌, ಫರೀದ್‌ ಅಹ್ಮದ್‌, ಅಬ್ದುಲ್ಲಾ ಅಹ್ಮದ್‌ಝಾಯ್‌, ಫಝಲಕ್‌ ಫಾರೂಕಿ