Women ODI World Cup 2025: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ವನಿತೆಯರ ತಂಡ ಪ್ರಕಟ!
ಮುಂಬರುವ 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಸ್ಟ್ 19 ರಂದು ಪ್ರಕಟಿಸಿದೆ. ಎಂದಿನಂದ ಭಾರತ ವನಿತೆಯರ ತಂಡವನ್ನು ಹರ್ಮನ್‌ಪ್ರೀತ್ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನಾ ಅವರು ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ.

ಮುಂಬೈ: ಮುಂಬರುವ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women ODI World Cup 2025) ಟೂರ್ನಿಗೆ 15 ಸದಸ್ಯರ ಭಾರತ ಮಹಿಳಾ ತಂಡವನ್ನು (India Women’s Squad) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಪ್ರಕಟಿಸಿದೆ. ಎಂದಿನಂತೆ ಭಾರತ ಮಹಿಳಾ ತಂಡವನ್ನು ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮುನ್ನಡೆಸಲಿದ್ದಾರೆ. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ ಅವರು ಉಪ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಸೆಪ್ಟಂಬರ್ 30 ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲನೇ ಪಂದ್ಯವನ್ನು ಆಡುವ ಮೂಲಕ ಭಾರತ ಮಹಿಳಾ ತಂಡ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಈ ಟೂರ್ನಿಯ ಮೊದಲನೇ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನಿಗದಿಪಡಿಸಲಾಗಿತ್ತು. ಆದರೆ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಪ್ ಗೆದ್ದಿತ್ತು. ಆರ್‌ಸಿಬಿ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ಇದರ ಪರಿಣಾಮ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಕರಣ ಸಂಬಂಧ ತನಿಕೆ ನಡೆಸುತ್ತಿದೆ. ಹಾಗಾಗಿ ಮಹಿಳಾ ವಿಶ್ವಕಪ್ ಪಂದ್ಯ ಬೆಂಗಳೂರಿನಲ್ಲಿ ನಡೆಯುವುದು ಅನುಮಾನ.
ENGW vs INDW: ಐತಿಹಾಸಿಕ ಟಿ20 ಸರಣಿ ಗೆದ್ದ ಭಾರತ ಮಹಿಳಾ ತಂಡ
ಮಹಿಳಾ ಏಕದಿನ ವಿಶ್ವಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಗೆ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಅಲಭ್ಯರಾಗಿದ್ದಾರೆ.
ಹರ್ಮನ್‌ಪ್ರೀತ್ ಪಡೆ ತವರಿನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳನ್ನು ಸೋಲಿಸಿ, ಇತ್ತೀಚೆಗೆ ತವರಿನಿಂದ ಹೊರಗೆ ನಡೆದಿದ್ದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 2-1 ಅಂತರದಿಂದ ಸೋಲಿಸಿತ್ತು. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಭಾರತ ತಂಡ ಟ್ರೋಫಿಯನ್ನು ಗೆದ್ದುಕೊಂಡಿತು. ಆತಿಥೇಯ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ತಮ್ಮ 50 ಓವರ್‌ಗಳ ತಂಡವನ್ನು ಬಲಪಡಿಸಿಕೊಂಡಿದೆ. ಆದಾಗ್ಯೂ, ಭಾರತದ ಅಂತಿಮ ಪೂರ್ವಾಭ್ಯಾಸ ಸೆಪ್ಟೆಂಬರ್ 14 ಮತ್ತು 20 ರ ನಡುವೆ ಮುಲ್ಲನ್‌ಪುರ ಮತ್ತು ದೆಹಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಯ ಸಮಯದಲ್ಲಿ ನಡೆಯಲಿದೆ.
A power packed #TeamIndia squad for the ICC Women's Cricket World Cup 2025 💪
— BCCI Women (@BCCIWomen) August 19, 2025
Harmanpreet Kaur to lead the 15 member squad 🙌🙌#WomenInBlue | #CWC25 pic.twitter.com/WPXA3AoKOR
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಮಹಿಳಾ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನಾ (ಉಪ ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿ.ಕೀ), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಸ್ತಿಕಾ ಭಾಟಿಯಾ, ಸ್ನೇಹಾ ರಾಣಾ
🚨 𝗜𝗻𝗱𝗶𝗮'𝘀 𝘀𝗾𝘂𝗮𝗱 𝗳𝗼𝗿 𝗢𝗗𝗜 𝘀𝗲𝗿𝗶𝗲𝘀 𝗮𝗴𝗮𝗶𝗻𝘀𝘁 𝗔𝘂𝘀𝘁𝗿𝗮𝗹𝗶𝗮 𝗮𝗻𝗻𝗼𝘂𝗻𝗰𝗲𝗱
— BCCI Women (@BCCIWomen) August 19, 2025
Harmanpreet Kaur (C), Smriti Mandhana (VC), Pratika Rawal, Harleen Deol, Deepti Sharma, Jemimah Rodrigues, Renuka Singh Thakur, Arundhati Reddy, Richa Ghosh (WK), Kranti…
ಆಸ್ಟ್ರೇಲಿಯಾ ಸರಣಿಗೆ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ ( ನಾಯಕ), ಸ್ಮೃತಿ ಮಂಧಾನಾ (ಉಪ ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿ.ಕೀ), ಕ್ರಾಂತಿ ಗೌಡ್, ಸಯಾಲಿ ಸತ್‌ಘರೆ, ರಾಧಾ ಯಾದವ್, ಶ್ರೀಚರಣಿ, ಯಾಸ್ತಿಕಾ ಭಾಟಿಯಾ (ವಿ.ಕೀ), ಸ್ನೇಹಾ ರಾಣಾ