Shafali verma: ಭಾರತದ ಎದುರು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸೋಲಿಗೆ ಈ ಆಟಗಾರ್ತಿ ಕಾರಣ ಎಂದ ಲಾರಾ ವಾಲ್ವಾರ್ಡ್ಟ್!
ಲಾರಾ ವಾಲ್ವಾರ್ಡ್ಟ್ ಅವರ ಹೋರಾಟದ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ವಿರುದ್ಧ 52 ರನ್‌ಗಳ ಸೋಲು ಅನುಭವಿಸಿತು. ಆ ಮೂಲಕ ಚೊಚ್ಚಲ ವಿಶ್ವಕಪ್ ಗೆಲ್ಲುವ ದಕ್ಷಿಣ ಆಫ್ರಿಕಾದ ಕನಸು ಭಗ್ನವಾಯಿತು. ಪಂದ್ಯದ ಬಳಿಕ ಫೈನಲ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಯಾವುದೆಂದು ಲಾರಾ ವಾಲ್ವಾರ್ಡ್ಟ್ ಬಹಿರಂಗಪಡಿಸಿದ್ದಾರೆ.
ಶಫಾಲಿ ವರ್ಮಾ ಬೌಲಿಂಗ್ ಸ್ಪೆಲ್‌ಗೆ ನಾವು ತಯಾರಿ ನಡೆಸಿರಲಿಲ್ಲ ಎಂದ ಲಾರಾ. -
ಮುಂಬೈ: ಭಾರತ ವಿರುದ್ದದ 202ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women ODI World Cup 2025) ಟೂರ್ನಿಯ ಫೈನಲ್‌ನಲ್ಲಿ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ (Shafali verma) ಅನಿರೀಕ್ಷಿತ ಸ್ಪೆಲ್‌ಗೆ ನಾವು ತಯಾರಿ ನಡೆಸಿರಲಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವಾಲ್ವಾರ್ಡ್ಟ್ (Laura Wolvaardt) ಬಹಿರಂಗಪಡಿಸಿದ್ದಾರೆ. ಭಾನುವಾರ ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಲಾರಾ ವಾಲ್ವಾರ್ಡ್ಟ್ ಅವರ ಕಠಿಣ ಹೋರಾಟದ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 52 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ಚೊಚ್ಚಲ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಏಕೆಂದರೆ ಮಳೆ ಬಂದಿದ್ದರಿಂದ ಅಲ್ಲಿನ ಕಂಡೀಷನ್ಸ್ ಬ್ಯಾಟಿಂಗ್‌ಗೆ ಸ್ವಲ್ಪ ಕಠಿಣವಾಗಿತ್ತು. ಈ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 78 ಎಸೆತಗಳಲ್ಲಿ 87 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 298 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ಶಫಾಲಿ ವರ್ಮಾ ಆಲ್‌ರೌಂಡರ್ ಆಟ; ಭಾರತ ವನಿತೆಯರಿಗೆ ಚೊಚ್ಚಲ ವಿಶ್ವಕಪ್ ಕಿರೀಟ!
ಎರಡು ಕೀ ಆಟಗಾರ್ತಿಯರನ್ನು ಔಟ್ ಮಾಡಿದ್ದ ಶಫಾಲಿ
299 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದ ಬಳಿಕ 51ಕ್ಕೆ ಒಂದು ವಿಕೆಟ್ ಹಾಗೂ 62 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಬಳಿಕ ಲಾರಾ ವಾಲ್ವಾರ್ಡ್ಟ್ ಹಾಗೂ ಸುನ್ ಲುಸ್ ಅವರು ಮೂರನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ದೊಡ್ಡ ಜೊತೆಯಾಟದ ಮುನ್ಸೂಚನೆಯನ್ನು ನೀಡಿದ್ದರು. ಈ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಈ ಜೊತೆಯಾಟವನ್ನು ಬ್ರೇಕ್ ಮಾಡಲು ಸಾಕಷ್ಟು ಬೌಲಿಂಗ್ ಬದಲಾವಣೆಯನ್ನು ಮಾಡಿದ್ದರು. ಆದರೆ, ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಈ ವೇಳೆ ಪಾರ್ಟ್ ಟೈಮ್ ಸ್ಪಿನ್ನರ್ ಶಫಾಲಿ ವರ್ಮಾ ಅವರು ಬೌಲಿಂಗ್ ಬಂದು ತಕ್ಷಣ ಸುನ್ ಲುಸ್ ಅವರನ್ನು ಔಟ್ ಮಾಡಿ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಬಳಿಕ ಮುಂದಿನ ಓವರ್‌ನಲ್ಲಿ ಕೀ ಆಟಗಾರ್ತಿ ಮಾರಿಜಾನ್ ಕಾಪ್ ಅವರನ್ನು ಔಟ್ ಮಾಡಿದರು.
📸 Picture Perfect 😍
— BCCI Women (@BCCIWomen) November 2, 2025
Following the tradition with much more joy and jubilation 🥳🏆#TeamIndia | #WomenInBlue | #CWC25 | #INDvSA | #Champions pic.twitter.com/1bxnio6kTo
ಶಫಾಲಿ ವರ್ಮಾರಿಂದ ಬೌಲಿಂಗ್ ನಿರೀಕ್ಷೆ ಮಾಡಿರಲಿಲ್ಲ
ಪೋಸ್ಟ್ ಮ್ಯಾಚ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾರಾ ವಾಲ್ವಾರ್ಡ್ಟ್, "ಇವತ್ತು (ಭಾನುವಾರ) ಅವರು ಬೌಲ್ ಮಾಡಲಿದ್ದಾರೆಂದು ನಾವು ನಿರೀಕ್ಷೆ ಮಾಡಿರಲಿಲ್ಲ, ಹಾಗಾಗಿ ನಮಗೆ ಇದು ಅಚ್ಚರಿಯನ್ನು ಮೂಡಿಸಿತ್ತು. ಅವರು ಕೈನ ಮುಂಭಾಗದಿಂದ ಬೌಲ್ ಮಾಡಿದ್ದರು ಹಾಗೂ ಇದು ತುಂಬಾ ನಿಧಾನಗತಿಯಿಂದ ಕೂಡಿತ್ತು. ಇದರಿಂದ ಅವರು ಎರಡು ವಿಕೆಟ್ ಕಿತ್ತಿದ್ದರು. ವಿಶ್ವಕಪ್ ಫೈನಲ್‌ನಂತಹ ಪಂದ್ಯಗಳಲ್ಲಿ ನೀವು ಪಾರ್ಟ್ ಟೈಮ್ ಬೌಲರ್‌ಗಳಿಗೆ ಎಂದಿಗೂ ವಿಕೆಟ್ ಒಪ್ಪಿಸಬಾರದು. ಆದರೆ, ಅವರು ನಮ್ಮ ಪ್ರಮುಖ ಆಟಗಾರ್ತಿಯರನ್ನು ಔಟ್ ಮಾಡಿದ್ದಾರೆಂದು ನಮಗೆ ಬೇಸರವಾಗಿದೆ," ಎಂದು ಹೇಳಿದ್ದಾರೆ.
Rohit Sharma: ಮಹಿಳಾ ತಂಡದ ವಿಶ್ವಕಪ್ ಗೆಲುವು ಕಂಡು ರೋಹಿತ್ ಶರ್ಮ ಭಾವುಕ
"ತದ ನಂತರ ನಾವು ಎಚ್ಚೆತ್ತುಕೊಂಡೆವು ಹಾಗೂ ನಾವು ಅವರಿಗೆ ವಿಕೆಟ್‌ಗಳನ್ನು ನೀಡಲಿಲ್ಲ. ಅವರು ತುಂಬಾ ಚೆನ್ನಾಗಿ ಬೌಲ್ ಮಾಡಿದ್ದಾರೆ. ಇದು ನಿರಾಶಾದಾಯಕ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅದು ನಿಜವಾಗಿಯೂ ನೀವು ಯೋಜಿಸುವ ವ್ಯಕ್ತಿಯಲ್ಲ. ಆದರೆ, ಅವರು ನಿಜಕ್ಕೂ ಅತ್ಯುತ್ತಮವಾಗಿ ಬೌಲ್ ಮಾಡಿದ್ದಾರೆ," ಎಂದು ಲಾರಾ ವಾಲ್ವಾರ್ಡ್ಟ್ ತಿಳಿಸಿದ್ದಾರೆ.