Rohit Sharma: ಮಹಿಳಾ ತಂಡದ ವಿಶ್ವಕಪ್ ಗೆಲುವು ಕಂಡು ರೋಹಿತ್ ಶರ್ಮ ಭಾವುಕ
Women's ODI World Cup: ನವಿ ಮುಂಬೈನ ಆರ್.ಡಿ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತು.
-
Abhilash BC
Nov 3, 2025 12:04 PM
ನವಿ ಮುಂಬೈ: ಭಾರತ ಮಹಿಳಾ ತಂಡವು ಚೊಚ್ಚಲ ವಿಶ್ವಕಪ್(Women's ODI World Cup) ಕಿರೀಟವನ್ನು ಮುಡಿಗೇರಿಸಿಕೊಂಡ ಐತಿಹಾಸಿಕ ಕ್ಷಣವನ್ನು ಕಂಡು ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಭಾವುಕರಾದರು. ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ರೋಹಿತ್, ಭಾರತ ತಂಡ ಗೆಲ್ಲುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಭಾವುಕರಾದರು. ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1978ರಿಂದ ವಿಶ್ವಕಪ್ ಆಡುತ್ತಿರುವ ಭಾರತ ಮಹಿಳಾ ತಂಡ ಬರೋಬ್ಬರಿ 47 ವರ್ಷಗಳ ಬಳಿಕ ತನ್ನ ಚೊಚ್ಚಲ ಐಸಿಸಿ ಕಿರೀಟ ಗೆದ್ದುಕೊಂಡಿತು. 2005 ಮತ್ತು 2017ರಲ್ಲಿ ಫೈನಲ್‌ಗೇರಿರೂ ತಂಡಕ್ಕೆ ಟ್ರೋಫಿ ಗೆಲ್ಲುವ ಭಾಗ್ಯ ಇರಲಿಲ್ಲ. ಆದರೆ ಮೂರನೇ ಪ್ರಯತ್ನದಲ್ಲಿ ಸಕಾರಗೊಂಡಿದೆ. ಈ ಸಾಧನೆ ಮುಂದೆ ಭಾರತೀಯ ಮಹಿಳಾ ಕ್ರಿಕೆಟ್ ಅನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಖಚಿತ.
ಚಾಂಪಿಯನ್ ಮಹಿಳಾ ತಂಡಕ್ಕೆ ಮೆಚ್ಚುಗೆ
ವಿಶ್ವಕಪ್ ಮುಡಿಗೇರಿಸಿ ಇಡೀ ದೇಶಕ್ಕೇ ಹೆಮ್ಮೆ ತಂದ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ದೇಶದ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಸುಂದರ್ ಪಿಚೈ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಶುಭ ಕೋರಿದ್ದಾರೆ.
ಮೋದಿ ಅವರು ತಂಡಕ್ಕೆ ಶುಭ ಕೋರಿ, ‘ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ವನಿತೆಯರ ಅತ್ಯದ್ಭುತ ಗೆಲುವು ಇದಾಗಿದೆ. ಫೈನಲ್ ಪಂದ್ಯದಲ್ಲಿ ಭಾರತೀಯ ತಂಡದ ಆಟವು ಅತ್ಯದ್ಭುತ ಕೌಶಲ ಹಾಗೂ ಆತ್ಮವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ತಂಡವಾಗಿ ತೋರಿದ ಸಾಹಸ ಮತ್ತು ವರ್ಲ್ಡ್‌ಕಪ್ ಉದ್ದಕ್ಕೂ ತೋರಿದ ದೃಢತೆಗೆ ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು, ಭವಿಷ್ಯದಲ್ಲಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇನ್ನಷ್ಟು ಸ್ಫೂರ್ತಿಯನ್ನು ತರಲಿದೆ’ ಎಂದಿದ್ದಾರೆ.
ಇದನ್ನೂ ಓದಿ Women's World Cup final: 3 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ!
‘ಅತ್ಯಂತ ಕುತೂಹಲಭರಿತ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್ ಅದಾಗಿತ್ತು. 1983ರ ಹಾಗೂ 2011ರ ವಿಶ್ವಕಪ್‌ನ ಫೈನಲ್ ಪಂದ್ಯಗಳ ನೆನಪುಗಳು ಹಾದುಹೋದವು. ಅಭಿನಂದನೆಗಳು ಟೀಂ ಇಂಡಿಯಾ, ನಿಮ್ಮ ಈ ಗೆಲುವು ಇಡೀ ತಲೆಮಾರಿಗೆ ಸ್ಫೂರ್ತಿಯನ್ನು ತರಲಿದೆ. ದಕ್ಷಿಣ ಆಫ್ರಿಕಾ ತಂಡದ್ದೂ ಉತ್ತಮ ಪ್ರದರ್ಶನ’ ಎಂದು ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಟ್ವೀಟ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.