ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

World Legends Pro T20 League: ಗುರುಗ್ರಾಮ್‌ ಥಂಡರ್ಸ್‌ ವಿರುದ್ಧ ಪುಣೆ ಪ್ಯಾಂಥರ್ಸ್‌ಗೆ 4 ವಿಕೆಟ್‌ ಜಯ!

ಪ್ರಸ್ತುತ ನಡೆಯುತ್ತಿರುವ 2026ರ ವಿಶ್ವ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗುರುಗ್ರಾಮ್‌ ಥಂಡರ್ಸ್‌ ವಿರುದ್ಧ ಪುಣೆ ಪ್ಯಾಂಥರ್ಸ್‌ ತಂಡ ನಾಲ್ಕು ವಿಕೆಟ್‌ಗಳ ಗೆಲುವು ಪಡೆಯುತು. ಆ ಮೂಲಕ ಈ ಟೂರ್ನಿಯಲ್ಲಿ ಪುಣೆ ತಂಡ ಶುಭಾರಂಭ ಕಂಡಿದೆ. 68 ರನ್‌ ಸಿಡಿಸಿದ ಮಾರ್ಟಿನ್‌ ಗಪ್ಟಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗುರುಗ್ರಾಮ್‌ ಥಂಡರ್ಸ್‌ ವಿರುದ್ಧ ಪುಣೆ ಪ್ಯಾಂಥರ್ಸ್‌ಗೆ 4 ವಿಕೆಟ್‌ ಜಯ.

ಗೋವಾ: ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ (World Legends Pro T20 League) ಎರಡನೇ ಪಂದ್ಯದಲ್ಲಿ ಶೇನ್ ವಾಟ್ಸನ್ (Shane Watson) ನೇತೃತ್ವದ ಪುಣೆ ಪ್ಯಾಂಥರ್ಸ್ (Pune Panthers) ಮತ್ತು ತಿಸಾರಾ ಪೆರೇರಾ ನೇತೃತ್ವದ ಗುರುಗ್ರಾಮ್ ಥಂಡರ್ಸ್ ತಂಡಗಳು ಮುಖಾಮುಖಿಯಾದವು. ಜಾಗತಿಕ ತಾರೆಯರು, ಭಾರತೀಯ ಐಕಾನ್‌ಗಳು ಹಾಗೂ ಮಾಜಿ ವಿಶ್ವಕಪ್ ವಿಜೇತರನ್ನು ಒಳಗೊಂಡ ಈ ಹೈ-ಇಂಟೆನ್ಸಿಟಿ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಅವರ ಸ್ಫೋಟಕ ಬ್ಯಾಟಿಂಗ್‌ (28 ಎಸೆತಗಳಲ್ಲಿ 68 ರನ್) ಪುಣೆ ಪ್ಯಾಂಥರ್ಸ್‌ಗೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟಿತು.

ಟೂರ್ನಿಯ ಆರಂಭದಲ್ಲೇ ಪ್ರಬಲ ಸಂದೇಶ ನೀಡಲು ಉತ್ಸುಕವಾಗಿದ್ದ ಗುರುಗ್ರಾಮ್ ಥಂಡರ್ಸ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಸ್ ಟೇಲರ್ ಅವರ ಸ್ಥಿರ ಹಾಗೂ ಭದ್ರ ಇನಿಂಗ್ಸ್‌ ಆಧಾರವಾಗಿ ಈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್‌ಗಳನ್ನು ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ಪುಣೆ ಪ್ಯಾಂಥರ್ಸ್ ಆರಂಭದಲ್ಲೇ ಶೇನ್ ವಾಟ್ಸನ್ ವಿಕೆಟ್ ಕಳೆದುಕೊಂಡರೂ, ಮಾರ್ಟಿನ್ ಗಪ್ಟಿಲ್ 68 ರನ್‌ಗಳ ನೆರವಿನಿಂದ ನಾಲ್ಕು ವಿಕೆಟ್‌ಗಳಿಂದ ಗೆದ್ದು ಬೀಗಿತು.

DCW vs GGTW: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗುಜರಾತ್‌ ಜಯಂಟ್ಸ್‌ಗೆ 3 ರನ್‌ ರೋಚಕ ಜಯ!

ಈ ಬಗ್ಗೆ ಮಾತನಾಡಿದ ಮಾರ್ಟಿನ್‌ ಗಪ್ಟಿಲ್ "ಆರಂಭದಲ್ಲೇ ಟೋನ್ ಸೆಟ್ ಮಾಡುವುದು ಮುಖ್ಯವಾಗಿತ್ತು. ವಿಕೆಟ್‌ಗಳು ಬಿದ್ದರೆ ಚೇಸ್ ಕಠಿಣವಾಗಬಹುದು, ಆದರೆ ನಾವು ರನ್‌ರೇಟ್‌ಗಿಂತ ಮುನ್ನಡೆಯಲ್ಲೇ ಇದ್ದೆವು ಹಾಗು ಪರಿಚಿತ ಮುಖಗಳ ವಿರುದ್ಧ ಆಡಿದ್ದು ಖುಷಿ ನೀಡಿತು," ಎಂದರು.

ಮಧ್ಯದ ಓವರ್‌ಗಳಲ್ಲಿ ಪುಣೆ ಪ್ಯಾಂಥರ್ಸ್ ಕೆಲ ವಿಕೆಟ್‌ಗಳನ್ನು ಕಳೆದುಕೊಂಡರೂ, ಅಫ್ಘಾನ್ ಆಲ್‌ರೌಂಡರ್ ಸಯ್ಯದ್ ಶಿರ್ಜಾದ್ ಶಿನ್ವಾರಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವಿ ಪ್ರದರ್ಶನ ನೀಡಿದರು. ಮೊದಲಿಗೆ ಬೌಲಿಂಗ್‌ನಲ್ಲಿ ಗುರುಗ್ರಾಮ್‌ನ ಇಬ್ಬರು ಆರಂಭಿಕರನ್ನು ಔಟ್ ಮಾಡಿ ಎರಡು ವಿಕೆಟ್‌ಗಳನ್ನು ಪಡೆದ ಅವರು, ನಂತರ ಬ್ಯಾಟಿಂಗ್‌ನಲ್ಲಿ 10 ಎಸೆತಗಳಲ್ಲಿ ವೇಗದ 21 ರನ್ ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು.

ವಿರಾಟ್‌ ಕೊಹ್ಲಿ ಅಲ್ಲ; ಭಾರತ ವೈಟ್‌ಬಾಲ್‌ ಕ್ರಿಕೆಟ್‌ ಸಕ್ಸಸ್‌ಗೆ ಈ ಆಟಗಾರನೇ ಕಾರಣ ಎಂದ ರಾಹುಲ್‌ ದ್ರಾವಿಡ್!

ಗಪ್ಟಿಲ್ ಅವರ ಸ್ಫೋಟಕ ಬ್ಯಾಟಿಂಗ್ ಚೇಸ್‌ನ ಚಾಲಕಶಕ್ತಿಯಾಗಿ ಉಳಿದಿದ್ದು, 28 ಎಸೆತಗಳಲ್ಲಿ 68 ರನ್ ಗಳಿಸುವ ಮೂಲಕ ರನ್‌ರೇಟ್‌ನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟರು. ಅವರ ಆಕ್ರಮಣಕಾರಿ ಆಟದ ನೆರವಿನಿಂದ ಪುಣೆ ಪ್ಯಾಂಥರ್ಸ್ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತು.

ಸಂಕ್ಷಿಪ್ತ ಸ್ಕೋರ್

ಗುರುಗ್ರಾಮ್ ಥಂಡರ್ಸ್: 159/5 (20 ಓವರ್‌ಗಳು)

* ರಾಸ್ ಟೇಲರ್ – 41 (36)

* ಮೊಹಮ್ಮದ್ ಫೈಝ್ ಖಾನ್ – 35 (27)

* ಸಾಮಿಯುಲ್ಲಾ ಶಿನ್ವಾರಿ – 3 ಓವರ್‌ಗಳಲ್ಲಿ 42/2

ಪುಣೆ ಪ್ಯಾಂಥರ್ಸ್: 160/6 (17 ಓವರ್‌ಗಳು)

* ಮಾರ್ಟಿನ್ ಗಪ್ಟಿಲ್ – 68 (28)

* ಸಾಮಿಯುಲ್ಲಾ ಶಿನ್ವಾರಿ – 21 (8)

* ಸ್ಟುವರ್ಟ್ ಬ್ರಾಡ್ – 2 ಓವರ್‌ಗಳಲ್ಲಿ 11/1