ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

DCW vs GGTW: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗುಜರಾತ್‌ ಜಯಂಟ್ಸ್‌ಗೆ 3 ರನ್‌ ರೋಚಕ ಜಯ!

DCW vs GGTW Match Highlights: ಕೊನೆಯ ಎಸೆತದವರೆಗೂ ನಡೆದಿದ್ದ ಕಠಿಣ ಹೋರಾಟದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗುಜರಾತ್‌ ಜಯಂಟ್ಸ್‌ ಮಹಿಳಾ ತಂಡ, 3 ರನ್‌ ರೋಚಕ ಗೆಲುವು ದಾಖಲಿಸಿತು. ಒಟ್ಟು 8 ಅಂಕಗಳನ್ನು ಕಲೆ ಹಾಕಿದ ಗುಜರಾತ್‌, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗುಜರಾತ್‌ ಜಯಂಟ್ಸ್‌ಗೆ ರೋಚಕ ಜಯ!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುಜರಾತ್‌ ಜಯಂಟ್ಸ್‌ ತಂಡಕ್ಕೆ ಜಯ. -

Profile
Ramesh Kote Jan 27, 2026 11:26 PM

ವಡೋದರ: ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯನ್ನು ಕೆರಳಿಸಿದ್ದ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯ 17ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಗುಜರಾತ್‌ ಜಯಂಟ್ಸ್‌ (DCW vs GGTW) ತಂಡ 3 ರನ್‌ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಆಶ್ಲೆ ಗಾರ್ಡ್ನರ್‌ ನಾಯಕತ್ವದ ಗುಜರಾತ್‌ ತಂಡ, ಪಾಯಿಂಟ್ಸ್‌ ಟೇಬಲ್‌ನಲ್ಲಿ 8 ಅಂಕಗಳ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ನಿಕಿ ಪ್ರಸಾದ್‌ ಹಾಗೂ ಸ್ನೇಹ ರಾಣಾ ಅವರ ಕಠಿಣ ಹೋರಾಟದ ಬಲದಿಂದ ಗೆಲುವಿನ ಸನಿಹ ಬಂದರೂ, ಸೋಫಿ ಡಿವೈನ್‌ (Sophie Devine) ಅವರ ಬುದ್ದಿವಂತಿಕೆಯ ಬೌಲಿಂಗ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ಸೋಲು ಅನುಭವಿಸಬೇಕಾಯಿತು.

ಮಂಗಳವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಗುಜರಾತ್‌ ಜಯಂಟ್ಸ್‌ ನೀಡಿದ್ದ 175 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಗ್ರ ಆರು ಮಂದಿ ಬ್ಯಾಟರ್‌ಗಳು ವಿಫಲರಾದರು. ರಾಜೇಶ್ವರಿ ಗಾಯಕ್ವಾಡ್‌, ಸೋಫಿ ಡಿವೈನ್‌ ಅವರು ಕ್ರಮವಾಗಿ 3 ಮತ್ತು 4 ವಿಕೆಟ್‌ ಕಿತ್ತು ಡೆಲ್ಲಿಯನ್ನು ಕಟ್ಟಿ ಹಾಕಿದ್ದರು. ಒಂದು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, 100 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಮೂಲಕ ಡೆಲ್ಲಿ ಸೋಲುವುದು ಬಹುತೇಕ ಖಚಿತ ಎಂದೇ ಈ ಹಂತದಲ್ಲಿ ಭಾವಿಸಲಾಗಿತ್ತು.

ವಿರಾಟ್‌ ಕೊಹ್ಲಿ ಅಲ್ಲ; ಭಾರತ ವೈಟ್‌ಬಾಲ್‌ ಕ್ರಿಕೆಟ್‌ ಸಕ್ಸಸ್‌ಗೆ ಈ ಆಟಗಾರನೇ ಕಾರಣ ಎಂದ ರಾಹುಲ್‌ ದ್ರಾವಿಡ್!

20ನೇ ಓವರ್‌ನಲ್ಲಿ ಸೋಫಿ ಮ್ಯಾಜಿಕ್‌

ಆದರೆ, ನಿಕಿ ಪ್ರಸಾದ್‌ ಹಾಗೂ ಸ್ನೇಹ ರಾಣಾ ಅವರು ಏಳನೇ ವಿಕೆಟ್‌ಗೆ 31 ಎಸೆತಗಳಲ್ಲಿ 70 ರನ್‌ ಗಳಿಸಿ ಡೆಲ್ಲಿಯನ್ನು ಗೆಲುವಿನ ಸನಿಹ ತಂದಿದ್ದರು. ನಿಕಿ 47 ರನ್‌ ಹಾಗೂ ಸ್ನೇಹ ರಾಣಾ 29 ರನ್‌ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು. ಕೊನೆಯ ಎರಡು ಓವರ್‌ಗಳಿಗೆ ಡೆಲ್ಲಿಗೆ 29 ರನ್‌ ಅಗತ್ಯವಿತ್ತು. ಈ ವೇಳೆ ಆಶ್ಲೇ ಗಾರ್ಡ್ನರ್‌ ಅವರ ಓವರ್‌ನಲ್ಲಿ ಸ್ನೇಹಾ ಮತ್ತು ನಿಕಿ 23 ರನ್‌ ಗಳಿಸಿದರು. ಆ ಮೂಲಕ ಕೊನೆಯ ಓವರ್‌ನಲ್ಲಿ 9 ರನ್‌ ಅಗತ್ಯವಿದ್ದಾಗ, ಸೋಪಿ ಡಿವೈನ್‌ ಬುದ್ದಿವಂತಿಕೆಯಿಂದ ಬೌಲ್‌ ಮಾಡಿ ಕೇವಲ 5 ರನ್‌ ನೀಡಿ ಎರಡು ವಿಕೆಟ್‌ ಕಿತ್ತರು. ಆ ಮೂಲಕ ಗುಜರಾತ್‌ಗೆ ಗೆಲುವು ಖಚಿತ ಪಡಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ರಿಗೆ ಭಾಜನರಾದರು.



174 ರನ್‌ ಗಳಿಸಿದ ಗುಜರಾತ್‌ ಜಯಂಟ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಜಯಂಟ್ಸ್‌ ತಂಡ, ಬೆಥ್‌ ಮೂನಿ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 174 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 175 ರನ್‌ಗಳ ಗುರಿಯನ್ನು ನೀಡಿತ್ತು. ಅನುಷ್ಕಾ ಶರ್ಮಾ 39 ರನ್‌ಗಳನ್ನು ಬಾರಿಸಿದ್ದರು. ಕೊನೆಯಲ್ಲಿ ತನುಜಾ ಕಾನ್ವರ್‌ 21 ರನ್‌ಗಳ ಕೊಡುಗೆಯನ್ನು ನೀಡಿದ್ದರು.



ಗುಜರಾತ್‌ ಜಯಂಟ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಆರಂಭಿಕ ಬ್ಯಾಟರ್‌ ಬೆಥ್‌ ಮೂನಿ. ಅವರು ಇನಿಂಗ್ಸ್‌ ಆರಂಭಿಸಿ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದರು. ಆದರೆ, ಮತ್ತೊಂದು ತುದಿಯಲ್ಲಿ 39 ರನ್‌ ಗಳಸಿದ್ದ ಅನುಷ್ಕಾ ಶರ್ಮಾ ಒಂದು ಅವಧಿಯಲ್ಲಿ ಬೆಥ್‌ ಮೂನಿಗೆ ಸಾಥ್‌ ನೀಡಿದ್ದರು. ಈ ಇಬ್ಬರೂ ಎರಡನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟವನ್ನು ಆಡಿದ್ದರು. 17ನೇ ಓವರ್‌ ತನಕ ಬ್ಯಾಟ್‌ ಮಾಡಿದ ಬೆಥ್‌ ಮೂನಿ 46 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಸಿಡಿಸಿದ್ದರು.



ಶ್ರೀಚರಣಿ 4 ವಿಕೆಟ್‌ ಸಾಧನೆ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ಇವರು ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ 31 ರನ್‌ ನೀಡಿ 4 ವಿಕೆಟ್‌ ಸಾಧನೆ ಮಾಡಿದರು. ಚಿನ್ನೆಲೆ ಹೆನ್ರಿ ಎರಡು ವಿಕೆಟ್‌ ಪಡೆದರು. ಮಾರಿಜಾನ್‌ ಕಪ್‌, ನಂದಿನಿ ಶರ್ಮಾ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್‌ ಪಡೆದರು.