ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kendall Jenner: ಬೀಚ್‌ನಲ್ಲಿ ನಗ್ನವಾಗಿಯೇ ಫೋಟೋಗೆ ಪೋಸ್‌ ಕೊಟ್ಟ ಮಾಡೆಲ್‌!

Model Poses Nude On Beach: ಖ್ಯಾತ ಮಾಡೆಲ್ ಮತ್ತು ರಿಯಾಲಿಟಿ ಸ್ಟಾರ್ ಕೆಂಡಲ್ ಜೆನ್ನರ್ ಬೋಲ್ಡ್ ಫೋಟೋ ಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಫ್ಯಾಷನ್ ಐಕಾನ್ ಮತ್ತು ಉದ್ಯಮಿ ಆಗಿರುವ ಅವರು 'ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯನ್ಸ್' ರಿಯಾಲಿಟಿ ಟಿವಿ ಶೋ ಮೂಲಕ ಹೆಚ್ಚು ಹೆಸರು ಗಳಿಸಿದರು. ಸದ್ಯ ಅವರು ನವೆಂಬರ್ 3 ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ..

ಬೀಚ್‌ನಲ್ಲಿ ನಗ್ನವಾಗಿ ಪೋಸ್ ನೀಡಿದ ಮಾಡೆಲ್‌!

ಬೀಚ್‌ನಲ್ಲಿ ನಗ್ನವಾಗಿ ಫೋಟೋಶೂಟ್‌ ಮಾಡಿಸಿದ ಮಾಡೆಲ್ ಕೆಂಡಾಲ್ ಜೆನ್ನರ್ -

Profile Pushpa Kumari Nov 6, 2025 3:07 PM

ಖ್ಯಾತ ಮಾಡೆಲ್ ಮತ್ತು ರಿಯಾಲಿಟಿ ಸ್ಟಾರ್ ಕೆಂಡಲ್ ಜೆನ್ನರ್ (Kendall Jenner) ಬೋಲ್ಡ್ ಫೋಟೋ ಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ಫ್ಯಾಷನ್ ಐಕಾನ್ ಮತ್ತು ಉದ್ಯಮಿ ಆಗಿರುವ ಅವರು 'ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯನ್ಸ್' ರಿಯಾಲಿಟಿ ಟಿವಿ ಶೋ ಮೂಲಕ ಹೆಚ್ಚು ಹೆಸರು ಗಳಿಸಿದರು. ಸದ್ಯ ಅವರು ನವೆಂಬರ್ 3 ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಮಸ್ತ್ ಎಂಜಾಯ್ ಮಾಡಿ ರುವ ಅವರು ನಗ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.. ಕೆಂಡಾಲ್ ತಮ್ಮ ವೈಯಕ್ತಿಕ ಹುಟ್ಟುಹಬ್ಬದ ಆಚರಣೆಯ ಹಲವಾರು ಫೋಟೋ ಹಾಗೂ ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿವೆ.

ಕೆಂಡಾಲ್ ಜೆನ್ನರ್ ಈ ಭಾರಿಯ ಬರ್ತೆಡೇ ಖುಷಿಯಲ್ಲಿ ನಗ್ನವಾಗಿ ಫೋಟೋ ಶೂಟ್ ಮಾಡಿಸಿ ದ್ದಾರೆ. ಸುಂದರ ಬೀಚ್‌ನ ಸ್ಥಳದಲ್ಲಿ ಬೋಲ್ಡ್ ಪೋಸ್ ನೀಡಿದ್ದಾರೆ. ಕೆಂಡಾಲ್ ಸಮುದ್ರ ತೀರದಲ್ಲಿ ಸೂರ್ಯನ ಬೆಳಕನ್ನು ಆನಂದಿಸುತ್ತಾ, ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯುತ್ತಿರುವ ದೃಶ್ಯಗಳು ವೈರಲ್ ಆದ ವಿಡಿಯೊ ಹಾಗೂ ಫೋಟೋ ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ತನ್ನ 30 ಹುಟ್ಟುಹಬ್ಬವನ್ನು ಬೀಚ್ ನಲ್ಲಿ ಸೆಲೆಬ್ರೆಟ್ ಮಾಡಿರುವ ಕೆಂಡಾಲ್ ರಾತ್ರಿಯಲ್ಲಿ ಬೀಚ್‌ನಲ್ಲಿ "ಹ್ಯಾಪಿ ಬರ್ತ್‌ಡೇ ಕೆಂಡಾಲ್" ಎಂದು ಬರೆದಿರುವ ದೊಡ್ಡ ಬೆಳ್ಳಿ ಬಲೂನ್‌ಗಳ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ.

ಇನ್ನೊಂದು ವೈರಲ್ ಚಿತ್ರದಲ್ಲಿ, ಅವರು ಕಪ್ಪು ಬಿಕಿನಿಯಲ್ಲಿ ಪೋಸ್ ನೀಡುತ್ತಿರುವುದು ಕಂಡು ಬರುತ್ತದೆ. ಈ ಹುಟ್ಟುಹಬ್ಬದ ಆಚರಣೆಯಲ್ಲಿ ಅವರ ಆಪ್ತರು ಕೂಡ ಭಾಗಿಯಾಗಿದ್ದರು. ಕರ್ದಾಶಿ ಯಾನ್-ಜೆನ್ನರ್ ಕುಟುಂಬದವ ರಾದ ಕ್ರಿಸ್ ಜೆನ್ನರ್, ಕಿಮ್ ಕರ್ದಾಶಿಯಾನ್, ಖ್ಲೋಯಿ ಕರ್ದಾಶಿ ಯಾನ್, ಕೈಲಿ ಜೆನ್ನರ್ ಮತ್ತು ಮಾಡೆಲ್ ಹೇಲಿ ಬೀಬರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದನ್ನು ಓದಿ:Gathavibhava Movie: ಸಿಂಪಲ್ ಸುನಿ ʼಗತವೈಭವʼ ದಲ್ಲಿ ದುಷ್ಯಂತ್ ಸಿನಿವೈಭವ

ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಅಭಿಮಾನಿ ಯೊಬ್ಬರು ವೆರೀ ಹಾಟೆಸ್ಟ್ ಮಾಡೆಲ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೆಂಡಾಲ್ ಅವರು ರಿಯಾಲಿಟಿ ಶೋ 'ಕೀಪಿಂಗ್ ಅಪ್ ವಿಥ್ ದಿ ಕರ್ದಾಶಿಯಾನ್ಸ್' ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡವರು. ಅವರು ಫ್ಯಾಷನ್ ಉದ್ಯಮದಲ್ಲಿ ತಮ್ಮ ಕೆಲಸದಿಂದ ಹೆಸರುವಾಸಿಯಾಗಿದ್ದು, ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಾಡೆಲ್‌ಗಳಲ್ಲಿ ಒಬ್ಬರು ಎಂದು ಪ್ರಸಿದ್ಧಿ ಕೂಡ ಪಡೆದಿದ್ದಾರೆ.