Taj Mahal: ತಾಜ್ ಮಹಲ್‌ನಲ್ಲಿ ಭಾರೀ ಬೆಂಕಿ ಅನಾಹುತ; ವೈರಲ್ ವಿಡಿಯೋದ ಅಸಲಿಯತ್ತೇನು?
ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ಇದನ್ನು ಪರಿಶೀಲನೆ ನಡೆಸಿದಾಗ ಇದು ಫೇಕ್ ವಿಡಿಯೋ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ -
Vishakha Bhat
Nov 6, 2025 1:58 PM
ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ (Taj Mahal) ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ಈ Al- ರಚಿತ ವೀಡಿಯೊವನ್ನು ಆಸ್ಟ್ರೇಲಿಯಾದ ನಟ ಆಡ್ರಿಯನ್ ಜೀ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದರೆ ಈಗ ಅದನ್ನು ವಿರೂಪಗೊಳಿಸಿ ಹಲವಾರು (Viral Video) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಸೆಪ್ಟೆಂಬರ್ 29 ರಂದು ಪೋಸ್ಟ್ ಮಾಡಲಾದ ವೀಡಿಯೊವನ್ನುಇದು ವರೆಗೆ 8 ಸಾವಿರ ಜನರು ಹಂಚಿಕೊಂಡಿದ್ದಾರೆ, 37 ಸಾವಿರ ಜನರು ಲೈಕ್ ನೀಡಿದ್ದಾರೆ. 3300 ಜನರು ಕಾಮೆಂಟ್ ಮಾಡಿದ್ದಾರೆ. ತಾಜ್ ಮಹಲ್‌ನಲ್ಲಿ ಸಂಭವಿಸಿದ ಬೆಂಕಿಯನ್ನು ವೀಡಿಯೊದಲ್ಲಿ ಹಲವು ಕೋನಗಳಿಂದ ತೋರಿಸಲಾಗಿದೆ. ಮೊದಲ ನೋಟದಲ್ಲೇ ಇದು ಕುತೂಹಲ ಮೂಡಿಸುತ್ತದೆ. ಆಪ್ಯಾ ಅಪ್ಪಾ ಹಿಂದೂಸ್ತಾನ್‌ನ ತನಿಖೆಯಲ್ಲಿ, ವೀಡಿಯೊ ಕೃತಕ ಬುದ್ದಿಮತ್ತೆಯಿಂದ ರಚಿಸಿದ್ದು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Viral Video: "ನೀವು ಶ್ರೇಷ್ಠರಂತೆ ನಟಿಸುವುದು ಬೇಡ"; ಭಾರತೀಯ ವ್ಯಕ್ತಿ ಮೇಲೆ ಜನಾಂಗೀಯ ದಾಳಿ, ವಿಡಿಯೋ ವೈರಲ್
ಅಕ್ಟೋಬರ್ ಎರಡನೇ ವಾರದಂದು, ತಾಜ್‌ಮಹಲ್‌ನ ದಕ್ಷಿಣ ದ್ವಾರದ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿತ್ತು. ಬೆಳಿಗ್ಗೆ ಸುಮಾರು 8 ಗಂಟೆಗೆ ತಾಜ್‌ಮಹಲ್ ಬಳಿ ಟೊರೆಂಟ್ ಪವರ್‌ನ ಎಲ್‌ಟಿ ಲೈನ್‌ನಲ್ಲಿ ಸ್ಪಾರ್ಕ್ ಉಂಟಾಗಿ, ಪ್ಲಾಸ್ಟಿಕ್ ಜಾಯಿಂಟರ್‌ಗೆ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಆ ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಟೊರೆಂಟ್ ಪವರ್‌ಗೆ ಮಾಹಿತಿ ನೀಡಿದರು. ಟೊರೆಂಟ್ ಪವರ್‌ನ ತಂಡ ಸ್ಥಳಕ್ಕೆ ಧಾವಿಸಿ, ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ, ತಕ್ಷಣವೇ ದುರಸ್ತಿ ಕಾರ್ಯ ಕೈಗೊಂಡಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಘಟನೆಯಿಂದ ತಾಜ್ ಮಹಲ್ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ.
ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಮತ್ತೊಮ್ಮೆ ದೇಶದಲ್ಲಿಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸ್ಮಾರಕವಾಗಿದೆ. 2024ರಿಂದ 25ರಲ್ಲಿ6 ಲಕ್ಷ ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು 69 ಲಕ್ಷ ಪ್ರವಾಸಿಗರು ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಭಾರತೀಯ ಪುರಾತತ್ವ ಸಮೀಕ್ಷೆ ರಕ್ಷಣೆಯಲ್ಲಿರುವ ಹಾಗೂ ಟಿಕೆಟ್ ಪಡೆದು ಭೇಟಿ ನೀಡುವ 145 ಸ್ಮಾರಕಗಳ ಪೈಕಿ ಶೇ.12ರಷ್ಟು ಪ್ರವಾಸಿಗರು ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ.