ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಸ್ಮರಣೀಯ ಕ್ಷಣವನ್ನು ಬಹಿರಂಗಪಡಿಸಿದ ಅಮಿತ್‌ ಮಿಶ್ರಾ!

ಭಾರತದ ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾ ಅವರು ಸೆಪ್ಟಂಬರ್‌ 4ರಂದು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಸ್ಮರಣೀಯ ಕ್ಷಣವನ್ನು ಬಹಿರಂಗಪಡಿಸಿದ್ದಾರೆ. ಅಂದ ಹಾಗೆ 2008ರಲ್ಲಿ ಇವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ವೃತ್ತಿ ಜೀವನದ ಸ್ಮರಣೀಯ ಕ್ಷಣವನ್ನು ನೆನೆದ ಅಮಿತ್‌ ಮಿಶ್ರಾ!

ತಮ್ಮ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ಕ್ಷಣವನ್ನು ಆರಿಸಿದ ಅಮಿತ್‌ ಮಿಶ್ರಾ. -

Profile Ramesh Kote Sep 4, 2025 6:20 PM

ನವದೆಹಲಿ: ಸೆಪ್ಟಂಬರ್‌ 4 ರಂದು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಹಿರಿಯ ಸ್ಪಿನ್ನರ್‌ ಅಮಿತ್‌ ಮಿಶ್ರಾ (Amit Mishra) ಅವರು ತಮ್ಮ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ಕ್ಷಣವನ್ನು ಬಹಿರಂಗಪಡಿಸಿದ್ದಾರೆ. 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ (IND vs AUS) ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ತನ್ನ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎಂದು ಹೇಳಿದ್ದಾರೆ. ಅಂದು ಅನಿಲ್‌ ಕುಂಬ್ಳೆ (Anil Kumble) ಗಾಯದಿಂದ ಹೊರ ನಡೆದ ಬಳಿಕ ಅವರ ಸ್ಥಾನಕ್ಕೆ ಅಮಿತ್‌ ಮಿಶ್ರಾ ತಂಡಕ್ಕೆ ಬಂದಿದ್ದರು. ಆ ಮೂಲಕ ತಮ್ಮ ಮೊದಲನೇ ಪಂದ್ಯದಲ್ಲಿಯೇ ಅವರು 106 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಆ ಮೂಲಕ ಭಾರತ ತಂಡದ 320 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು.

ಐಎಎನ್‌ಎಸ್‌ ಜತೆ ಮಾತನಾಡಿದ ಅಮಿತ್‌ ಮಿಶ್ರಾ, "ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸ್ಮರಣೀಯ ಕ್ಷಣಗಳು ಇವೆ ಆದರೆ, ಮೊಹಾಲಿಯಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು ಅತ್ಯಂತ ವಿಶೇಷ ಕ್ಷಣವಾಗಿದೆ. ಆಗ ಅನಿಲ್‌ ಭಾಯ್‌ ಗಾಯಕ್ಕೆ ತುತ್ತಾಗಿದ್ದರು ಹಾಗೂ ಆ ವೇಳೆ ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು. ಏಕೆಂದರೆ ಅನಿಲ್‌ ಭಾಯ್‌ ದೀರ್ಘಾವಧಿಯಿಂದ ಟೆಸ್ಟ್‌ ತಂಡದಲ್ಲಿ ಯಾವ ರೀತಿ ಪ್ರಾಬಲ್ಯ ಸಾಧಿಸಿದ್ದಾರೆ, ಅದೇ ರೀತಿ ನೀವು ಕೂಡ ಉತ್ತಮ ಪ್ರದರ್ಶನ ತೋರುತ್ತೀರಾ? ಎಂದು ನನ್ನನ್ನು ಕೇಳಿದ್ದರು," ಎಂದು ಸ್ಮರಿಸಿಕೊಂಡಿದ್ದಾರೆ.

Amit Mishra: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಮಿತ್ ಮಿಶ್ರಾ

"ಪಂದ್ಯದ ದಿನ ಬೆಳಗ್ಗೆ ನನಗೆ ಅನಿಲ್‌ ಭಾಯ್‌, ನೀವು ಆಡುತ್ತಿದ್ದೀರಿ ಎಂದು ನನಗೆ ಹೇಳಿದ್ದರು. ಇದು ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ನೀವು ಉತ್ತಮ ಪ್ರದರ್ಶನವನ್ನು ತೋರಬೇಕೆಂದು ಅವರು ವೃತ್ತಿಪರವಾಗಿ ನನ್ನನ್ನು ಹುರಿದುಂಬಿಸಿದ್ದರು. ಅದರಂತೆ ನಾನು ಪದಾರ್ಪಣೆ ಪಂದ್ಯದಲ್ಲಿ ಐದು ವಿಕೆಟ್‌ ಸಾಧನೆ ಸೇರಿದಂತೆ 7 ವಿಕೆಟ್‌ಗಳನ್ನು ಕಬಳಿಸಿದ್ದೆ. ನನ್ನ ವೃತ್ತಿ ಜೀವನದ ಅತ್ಯಂತ ಪ್ರಮುಖ ಸ್ಮರಣೀಯ ಕ್ಷಣವಾಗಿದೆ," ಎಂದು ಮಾಜಿ ಲೆಗ್‌ ಸ್ಪಿನ್ನರ್‌ ತಿಳಿಸಿದ್ದಾರೆ.

IPL 2025: ಎಂಎಸ್‌ ಧೋನಿಯ ನಿಜ ಸ್ವರೂಪವನ್ನು ರಿವೀಲ್‌ ಮಾಡಿದ ಡೆವಾಲ್ಡ್‌ ಬ್ರೆವಿಸ್‌!

ಮೂರೂ ಹ್ಯಾಟ್ರಿಕ್‌ ಕೂಡ ನನ್ನ ಪಾಲಿಗೆ ವಿಶೇಷ

"ಐಪಿಎಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್ ಪಡೆಯುವುದು ಸುಲಭದ ಕೆಲಸವಲ್ಲ, ಆದ್ದರಿಂದ ಈ ಮೂರೂ ನನಗೆ ತುಂಬಾ ವಿಶೇಷ. ಆ ದಾಖಲೆ ಇನ್ನೂ ಹಾಗೆಯೇ ಇದೆ ಮತ್ತು ಕಳೆದ ಎರಡು ವರ್ಷಗಳಿಂದ ನನ್ನ ಗಾಯಗಳಿಂದಾಗಿ ಹೆಚ್ಚು ಆಡದಿದ್ದರೂ, ಐಪಿಎಲ್‌ನಲ್ಲಿ ನಾನು ಇನ್ನೂ ಟಾಪ್ ಟೆನ್ ವಿಕೆಟ್ ಪಡೆದವರ ಪಟ್ಟಿಯಲ್ಲಿರುವುದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ," ಎಂದಿದ್ದಾರೆ.

"ವೃತ್ತಿಜೀವನದಲ್ಲಿ ಹ್ಯಾಟ್ರಿಕ್‌ಗಳು ಹೆಚ್ಚಾಗಿ ಸಂಭವಿಸುವುದಿಲ್ಲ, ಆದ್ದರಿಂದ ನಾನು ಮೂರು ವಿಭಿನ್ನ ಐಪಿಎಲ್ ತಂಡಗಳಿಗಾಗಿ ತೆಗೆದುಕೊಂಡ ಎಲ್ಲಾ ಹ್ಯಾಟ್ರಿಕ್‌ಗಳು ನನಗೆ ತುಂಬಾ ವಿಶೇಷವಾದವು. ಆದರೆ ಐಪಿಎಲ್‌ನಲ್ಲಿ ನನ್ನ ಮೊದಲ ಹ್ಯಾಟ್ರಿಕ್ ಬಹಳ ಅನುಕೂಲಕರವಾಗಿದೆ ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ, ಏಕೆಂದರೆ ಅದು ಭಾರತೀಯ ತಂಡಕ್ಕೆ ಮರಳಲು ನನಗೆ ಸಹಾಯ ಮಾಡಿತ್ತು," ಎಂದು ಅಮಿತ್ ಮಿಶ್ರಾ ತಿಳಿಸಿದ್ದಾರೆ.