ಏಕದಿನ ವಿಶ್ವಕಪ್ ನಿಮಿತ್ತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ದೀಪ್ ದಾಸ್‌ಗುಪ್ತಾ!
ಭಾರತೀಯ ಕ್ರಿಕೆಟ್‌ನ ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಈಗಾಗಲೇ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ಈ ಇಬ್ಬರೂ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕೆಂದು ದೀಪ್ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ.

-

ನವದೆಹಲಿ: ಭಾರತೀಯ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ (Rohit sharma) ಅವರು ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿದಿದ್ದಾರೆ. ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದೀಪ್ ದಾಸ್‌ಗುಪ್ತಾ (Deep Dasgupta) ಅವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಏಕದಿನ ವಿಶ್ವಕಪ್ ನಿಮಿತ್ತ ಈ ಇಬ್ಬರೂ ಆಟಗಾರರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ದೇಶಿ ಕ್ರಿಕೆಟ್ ಆಡಬೇಕೆಂದು ಸೂಚನೆ ನೀಡಿದ್ದಾರೆ.
ರೆವ್‌ಸ್ಪೋರ್ಟ್ಸ್ ಸಂಭಾಷಣೆಯಲ್ಲಿ ಮಾತನಾಡಿದ ದೀಪ್ ದಾಸ್‌ಗುಪ್ತಾ, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಕೇವಲ 8-9 ಏಕದಿನ ಪಂದ್ಯಗಳು ಬಾಕಿ ಇವೆ. ಹಾಗಾಗಿ ಅವರು ವಿಜಯ್ ಹಝಾರೆ ಟ್ರೋಫಿ ಹಾಗೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ದೇಶಿ ಕ್ರಿಕೆಟ್ ಆಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ ರಾಹುಲ್ ಚಹರ್!
"ಉದಾಹರಣಗೆ ಇಂಡಿಯನ್ ಪ್ರೀಮಿಯರ್ ಲೀಗ್ ಎರಡು ತಿಂಗಳು ನಡೆಯಲಿದೆ. ನಂತರ 7-8 ಅಥವಾ 8-9 ಏಕದಿನ ಪಂದ್ಯಗಳು ಇರಲಿವೆ. ಇದರ ನಡುವೆ 50 ಓವರ್‌ಗಳ ವಿಜಯ್ ಹಝಾರೆ ಟ್ರೋಫಿ ಟೂರ್ನಿ ಇದೆ. ನಂತರ ಇವರು ಬೇಕೆಂದರೆ, ಇಂಗ್ಲೆಂಡ್‌ಗೆ ಹೋಗಿ 50 ಓವರ್‌ಗಳ ದೇಶಿ ಕ್ರಿಕೆಟ್ ಆಡಬೇಕು. ಆದ್ದರಿಂದ ನೀವು ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಆಯ್ಕೆಗಳಿವೆ, ಅದು ಉನ್ನತ ಮಟ್ಟದಲ್ಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಲ್ಲದಿರಬಹುದು, ಆದರೆ ನಿಮಗೆ ಇನ್ನೂ ಅವಕಾಶವಿದೆ," ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.
"ಇದು ಸಾಧ್ಯವಾಗಲಿದೆ ಎಂಬುದು ನನಗೆ ಗೊತ್ತಿಲ್ಲ, ಬಹುಶಃ ಅವರು ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾಗೆ ತೆರಳಿ 50 ಓವರ್‌ಗಳ ಪಂದ್ಯಗಳನ್ನು ಆಡಬಹುದು. ಹೌದು, ಇಂಗ್ಲೆಂಡ್‌ನಲ್ಲಿಯೂ ಆಡಲು ಅವರಿಗೆ ಮತ್ತೊಂದು ಆಯ್ಕೆ ಇದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಆಡಬೇಕೆಂದರೆ, ಯಾವ ನಿಯಮಗಳು ಇವೆ ಎಂಬುದು ನನಗೆ ಗೊತ್ತಿಲ್ಲ. ಅವರು ಆಡಬೇಕೆಂಬ ಹಸಿವು ಇದ್ದರೆ, ಖಂಡಿತವಾಗಿಯೂ ಆಯ್ಕೆಗಳನ್ನು ಹುಡುಕಲಿದ್ದಾರೆ," ಎಂದು ಅವರು ಸೇರಿಸಿದ್ದಾರೆ.
Asia Cup 2025: ಇಂದು ಟೀಮ್ ಇಂಡಿಯಾ ಆಟಗಾರರ ದುಬೈ ಪ್ರಯಾಣ
ಅವರನ್ನು ಯಾರನ್ನೂ ನಿಲ್ಲಿಸಲು ಸಾಧ್ಯವಿಲ್ಲ: ದೀಪ್ ದಾಸ್‌ಗುಪ್ತಾ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 50 ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಯೇ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ದೀಪ್ ದಾಸ್‌ಗುಪ್ತಾ ಅವರು, ಈ ಇಬ್ಬರೂ ದಿಗ್ಗಜನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಯಾರಿಗೂ ಆ ಹಕ್ಕು ಇಲ್ಲ. ನಾವು ಅವರಿಗೆ ಪ್ರಾರಂಭಿಸಲು ಎಂದಿಗೂ ಹೇಳಿಲ್ಲ, ಆದ್ದರಿಂದ ಯಾವಾಗ ನಿಲ್ಲಿಸಬೇಕೆಂದು ಹೇಳಲು ನಾವು ಯಾರೂ ಅಲ್ಲ. ಅವರು ನಿಲ್ಲಿಸಬೇಕೆಂದಾಗ ನಿಲ್ಲಿಸುತ್ತಾರೆ. ಅದು ಸಂಪೂರ್ಣವಾಗಿ ಅವರಿಗೆ ಬಿಟ್ಟ ವಿಚಾರ," ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.