IPL 2025: ʻಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿದರೆ ಸ್ಟೇಡಿಯಂಗೆ ಬರುತ್ತೇನೆʼ-ಫ್ಯಾನ್ಸ್‌ಗೆ ಎಬಿಡಿ ಭರವಸೆ!
ABD promised to travel to India: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ಗೆ ಪ್ರವೇಶ ಮಾಡಿದರೆ, ಭಾರತಕ್ಕೆ ಬರುತ್ತೇನೆಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಭರವಸೆ ನೀಡಿದ್ದಾರೆ.

ಆರ್‌ಸಿಬಿ ಫ್ಯಾನ್ಸ್ ಸಿಹಿ ಸುದ್ದಿ ನೀಡಿದ ಎಬಿಡಿ.

ಬೆಂಗಳೂರು: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಿಗ್ಗಜ ಎಬಿ ಡಿ ವಿಲಿಯರ್ಸ್ (AB De Villiers) ಭಾರತೀಯ ಅಭಿಮಾನಿಗಳಿಗೆ ಭರವಸೆಯೊಂದನ್ನು ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಆರ್‌ಸಿಬಿ ತಂಡ ಫೈನಲ್‌ಗೆ ಪ್ರವೇಶಿಸಿದರೆ ರಜತ್ ಪಾಟಿದಾರ್ ನಾಯಕತ್ವದ ತಂಡಕ್ಕೆ ಹಾಗೂ ವಿರಾಟ್ ಕೊಹ್ಲಿಗೆ ಬೆಂಬಲ ನೀಡಲು ಭಾರತಕ್ಕೆ ಪ್ರಯಾಣ ಬೆಳೆಸುತ್ತೇನೆಂದು ಅವರು ಹೇಳಿದ್ದಾರೆ. ಆರ್‌ಸಿಬಿ ತಂಡ ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 16 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇಆಫ್ಸ್ ತಲುಪುವ ಸನಿಹದಲ್ಲಿದೆ. ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮಳೆ ಕಾಟ ನೀಡಿತ್ತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್, "ಒಂದು ವೇಳೆ ಆರ್‌ಸಿಬಿ ತಂಡ ಫೈನಲ್‌ಗೆ ಪ್ರವೇಶ ಮಾಡಿದರೆ, ನಾನು ಸ್ಟೇಡಿಯಂನಲ್ಲಿ ಇರುತ್ತೇನೆ. ವಿರಾಟ್ ಕೊಹ್ಲಿಯ ಜೊತೆ ಐಪಿಎಲ್ ಟ್ರೋಫಿಯನ್ನು ಎತ್ತುವುದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೊಂದಿಲ್ಲ. ಕಪ್ ಎತ್ತಲು ನಾನು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದೇನೆ," ಎಂದು ಹೇಳಿದ್ದಾರೆ.
IPL 2025: ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಅವರ ಸ್ನೇಹದ ಬಗ್ಗೆ ಸಾಕಷ್ಟು ಮಾತನಾಡಲಾಗಿದೆ. ಆದರೆ, ವಿರಾಟ್ ಕೊಹ್ಲಿಯನ್ನು ನೋಡಿದ ಆರಂಭಿಕ ದಿನಗಳನ್ನು ಎಬಿಡಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಕೊಹ್ಲಿ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ ಹಾಗೂ ಅವರ ವಿರುದ್ದ ಆಡುವುದನ್ನು ಇಷ್ಟಪಡುತ್ತಿರಲಿಲ್ಲ ಎಂಬ ಅಚ್ಚರಿ ಸಂಗತಿಯನ್ನು ಎಬಿಡಿ ರಿವೀಲ್ ಮಾಡಿದ್ದಾರೆ. ಆದರೆ, ಅವರ ಬಗ್ಗೆ ಹೆಚ್ಚು ತಿಳಿದಾಗ, ಅವರು ನನಗೆ ತುಂಬಾ ಇಷ್ಟವಾಗಿದ್ದರು ಎಂದು ಹೇಳಿಕೊಂಡಿದ್ದಾರೆ.
"ವಿರಾಟ್ ನನ್ನ ಕ್ರಿಕೆಟ್ ಸಹೋದರರಲ್ಲಿ ಒಬ್ಬರಿದ್ದರಂತೆ, ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡ ಬಳಿಕ ನನಗೆ ನಿಜವಾಗಿಯೂ ಇಷ್ಟವಾದ ವ್ಯಕ್ತಿಯಾದರು. ಅವರ ವಿರುದ್ಧ ಆಡುವುದು ನಿಜಕ್ಕೂ ನೋವಿನ ಸಂಗತಿಯಾಗಿತ್ತು. ನಾನು ಕೊಹ್ಲಿ ಬಗ್ಗೆ ಜಾಸ್ತಿ ತಿಳಿದುಕೊಳ್ಳುವ ಮೊದಲು, ನನಗೆ ಅವರು ಅಷ್ಟೊಂದು ಇಷ್ಟವಾಗಲಿಲ್ಲ ಏಕೆಂದರೆ, ಅವರು ತುಂಬಾ ಒಳ್ಳೆಯವರು ಮತ್ತು ಸ್ಪರ್ಧಾತ್ಮಕವಾಗಿದ್ದರು. ಸ್ಪರ್ಧಾತ್ಮಕ ಸ್ವಭಾವದಲ್ಲಿ ಅವರು ನನ್ನಂತೆಯೇ ಇದ್ದರು," ಎಂದು ತಿಳಿಸಿದ್ದಾರೆ.
Ab De Villiers coming to Indian for Playoffs and he'll be there with the boys at Chinnaswamy🤩#IPL2025 #ViratKohli𓃵 #RCBvKKR #RCBVSKKR #virat #RCB #IPL2025 #Bengaluru pic.twitter.com/lbT5Bf1bzI
— Asma bano (@Asmabano317344) May 17, 2025
2021ರಲ್ಲಿ ವಿದಾಯ ಹೇಳಿದ್ದ ಎಬಿಡಿ
ಎಬಿ ಡಿ ವಿಲಿಯರ್ಸ್ ಅವರು ಒಂದು ದಶಕಕ್ಕೂ ಅಧಿಕ ಸಮಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರು ದೀರ್ಘಾವಧಿ ಆರ್‌ಸಿಬಿಗೆ ಕೀ ಬ್ಯಾಟ್ಸ್‌ಮನ್‌ಗಳಾಗಿದ್ದರು. 2016ರಲ್ಲಿ ಈ ಜೋಡಿಯ ಅಮೋಘ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಸೋಲುವ ಮೂಲಕ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.
ಆದರೆ, ಎಬಿಡಿ ಅವರು ಐಪಿಎಲ್ ಇತಿಹಾಸದ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದ ಹಾಗೆ ಅವರು, ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಆಡಿದ 184 ಪಂದ್ಯಗಳಿಂದ 39.7ರ ಸರಾಸರಿ ಮತ್ತು 151.7ರ ಸ್ಟ್ರೈಕ್ ರೇಟ್‌ನಲ್ಲಿ 5162 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳು ಹಾಗೂ 40 ಅರ್ಧಶತಕಗಳನ್ನು ಬಾರಿಸಿದ್ದಾರೆ. 133* ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 2021ರ ಅಂತ್ಯದಲ್ಲಿ ಎಬಿಡಿ ತಮ್ಮ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.