ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

Virat Kohli needs 9000 Runs: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಆರ್‌ಸಿಬಿ ಪರ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಮತ್ತೊಂದು ಕಿಂಗ್‌ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯ ಸನಿಹದಲ್ಲಿದ್ದಾರೆ.

ಆರ್‌ಸಿಬಿ ಪರ 9000 ರನ್‌ ಪೂರೈಸಲು ವಿರಾಟ್‌ ಕೊಹ್ಲಿಗೆ 67 ರನ್‌ ಅಗತ್ಯ!

9000 ರನ್‌ಗಳ ಸನಿಹದಲ್ಲಿ ವಿರಾಟ್‌ ಕೊಹ್ಲಿ.

Profile Ramesh Kote May 17, 2025 8:30 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಪರ ಈಗಾಗಲೇ ಅನೇಕ ಸಾಲು-ಸಾಲು ದಾಖಲೆಗಳನ್ನು ಬರೆದಿರುವ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli), ಇದೀಗ ಬೆಂಗಳೂರು ಫ್ರಾಂಚೈಸಿ ಪರ ದೊಡ್ಡ ದಾಖಲೆಯ ಸನಿಹದಲ್ಲಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಆರಂಭವಾದ 2008 ರಿಂದ 2025ರವರೆಗೂ ಆರ್‌ಸಿಬಿ ಪರ ಆಡುತ್ತಿರುವ ಕಿಂಗ್‌ ಕೊಹ್ಲಿ, ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ರನ್‌ ಹೊಳೆ ಹರಿಸಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಆರ್‌ಸಿಬಿಗೆ ಇನ್ನೂ ಲೀಗ್‌ ಹಂತದಲ್ಲಿ ಮೂರು ಪಂದ್ಯಗಳಿವೆ. ಈ ಮೂರು ಪಂದ್ಯಗಳಿಂದ ಒಂದು ಅರ್ಧಶತಕ ಸಿಡಿಸಿದರೆ ಕೊಹ್ಲಿ ಆರ್‌ಸಿಬಿ ಪರ ವಿಶೇಷ ಮೈಲುಗಲ್ಲು ತಲುಪಲಿದ್ದಾರೆ.

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ನಡುವಣ 2025ರ ಐಪಿಎಲ್‌ ಟೂರ್ನಿಯ 58ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಆರ್‌ಸಿಬಿ ಇದುವರೆಗೂ ಆಡಿದ 11 ಪಂದ್ಯಗಳಿಂದ 16 ಅಂಕಗಳನ್ನು ಕಲೆ ಹಾಕಿದ್ದು, ಟೂರ್ನಿಯ ಪ್ಲೇಆಫ್ಸ್‌ಗೆ ಸನಿಹದಲ್ಲಿದೆ. ಕೆಕೆಆರ್‌ ವಿರುದ್ದದ ಪಂದ್ಯವನ್ನು ಗೆದ್ದರೆ ಬೆಂಗಳೂರು ತಂಡ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲಿದೆ. ಆದರೆ, ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಟೈಟನ್ಸ್‌ ನಡುವೆ ಹೈವೋಲ್ಟೇಜ್‌ ಕದನ!

ಕೋಲ್ಕತಾ ನೈಟ್‌ ರೈಡರ್ಸ್‌ ಅಥವಾ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ದ ಎರಡು ಪಂದ್ಯಗಳಿಂದ ವಿರಾಟ್‌ ಕೊಹ್ಲಿ 67 ರನ್‌ಗಳನ್ನು ಕಲೆ ಹಾಕಿದರೆ, ಆರ್‌ಸಿಬಿ ಪರ 9000 ರನ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ಆ ಮೂಲಕ ಐಪಿಎಲ್‌ ಫ್ರಾಂಚೈಸಿ ಪರ 9000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಕಿಂಗ್‌ ಕೊಹ್ಲಿ ಬರೆಯಲಿದ್ದಾರೆ. ಸದ್ಯ ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯಲ್ಲಿ 8509 ರನ್‌ಗಳನ್ನು ಕಲೆ ಹಾಕಿದ್ದರೆ, ಚಾಂಪಿಯನ್ಸ್‌ ಲೀಗ್‌ನಲ್ಲಿ 424 ರನ್‌ಗಳನ್ನು ಗಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್‌ ಕೊಹ್ಲಿಯ ಮೊದಲ ಸ್ಪರ್ಧಾತ್ಮಕ ಪಂದ್ಯ ಇದಾಗಿದೆ. ಒಂದು ದಶಕಕ್ಕೂ ಅವಧಿ ಆರ್‌ಸಿಬಿಯನ್ನು ಕೊಹ್ಲಿ ಮುನ್ನಡೆಸಿದ್ದಾರೆ. ಅವರು 2016ರಲ್ಲಿ ಅವರು ನಾಯಕತ್ವದಲ್ಲಿ ಆರ್‌ಸಿಬಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಇದಕ್ಕೂ 2011ರಲ್ಲಿ ನಡೆದಿದ್ದ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋತು ನಿರಾಶೆ ಅನುಭವಿಸಿತ್ತು.

IPL 2025: ಆರ್‌ಸಿಬಿಗೆ ಇನ್ನು ಗೆಲುವು ಬೇಕು? 7 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಪ್ಲೇಆಫ್ಸ್‌ ಸನಿಹದಲ್ಲಿ ಆರ್‌ಸಿಬಿ

ಕೋಲ್ಕತಾ ನೈಟ್‌ ರೈಡರ್ಸ್‌ ಬಳಿಕ ಆರ್‌ಸಿಬಿ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಕಾದಾಟ ನಡೆಸಲಿವೆ. ಸದ್ಯ 16 ಅಂಕಗಳೊಂದಿಗೆ +0.482 ರನ್‌ರೇಟ್‌ ಹೊಂದಿರುವ ಆರ್‌ಸಿಬಿ ಮುಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದರೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಲಿದೆ.