ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ಮಯಾಂಕ್‌ ಯಾದವ್‌, ಅಶೋಕ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸುನೀಲ್‌ ಜೋಶಿ!

ಯುವ ವೇಗದ ಬೌಲರ್‌ಗಳಾದ ಮಯಾಂಕ್ ಯಾದವ್ ಮತ್ತು ಅಶೋಕ್ ಶರ್ಮಾ ಅವರು ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಪ್ರಮುಖ ಸೇರ್ಪಡೆಗಳು ಎಂದು ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದ ಹಂಗಾಮಿ ಬೌಲಿಂಗ್ ಕೋಚ್ ಸುನಿಲ್ ಜೋಶಿ ಬಣ್ಣಿಸಿದ್ದಾರೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ದೃಷ್ಟಿಯಿಂದ ವೇಗದ ಬೌಲರ್‌ಗಳ ಹೆಚ್ಚಿನ ಆಯ್ಕೆಗಳನ್ನು ಹೊಂದುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಮಯಾಂಕ್‌ ಯಾದವ್‌, ಅಶೋಕ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದ ಜೋಶಿ!

ಮಯಾಂಕ್‌ ಯಾದವ್‌, ಅಶೋಕ್‌ ಶರ್ಮಾಗೆ ಸುನೀಲ್‌ ಜೋಶಿ ಮೆಚ್ಚುಗೆ. -

Profile
Ramesh Kote Jul 24, 2026 11:13 PM

ಹರಾರೆ: ಯುವ ವೇಗದ ಬೌಲರ್‌ಗಳಾದ ಮಯಾಂಕ್ ಯಾದವ್ (Mayank Yadav) ಮತ್ತು ಅಶೋಕ್ ಶರ್ಮಾ (Ashok Sharma) ಅವರು ಭಾರತದ ಬೆಳೆಯುತ್ತಿರುವ ವೇಗದ ಬೌಲಿಂಗ್ ಬಳಗಕ್ಕೆ ಅಮೂಲ್ಯ ಸೇರ್ಪಡೆಗಳು ಎಂದು ಭಾರತ ತಂಡದ ಹಂಗಾಮಿ ಬೌಲಿಂಗ್ ಕೋಚ್ ಸುನಿಲ್ ಜೋಶಿ(Sunil Joshi) ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಿಡುವಿಲ್ಲದ ವೇಳಾಪಟ್ಟಿಯ ಒತ್ತಡವನ್ನು ಎದುರಿಸಲು ಗುಣಮಟ್ಟದ ವೇಗದ ಬೌಲರ್‌ಗಳ ಸಂಖ್ಯೆ ಹೆಚ್ಚಾಗಿರುವುದು ತಂಡಕ್ಕೆ ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹರಾರೆಯಲ್ಲಿ ಶನಿವಾರ (ಜುಲೈ 25) ಜಿಂಬಾಬ್ವೆ ವಿರುದ್ಧ ನಡೆಯುವ ಎರಡನೇ ಟಿ20ಐ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಇಬ್ಬರು ಯುವ ವೇಗಿಗಳನ್ನು ಶ್ಲಾಘಿಸಿದರು. ನಿಯಮಿತ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ಅನುಪಸ್ಥಿತಿಯಲ್ಲಿ ಜೋಶಿ ಮೂರು ಪಂದ್ಯಗಳ ಸರಣಿಗೆ ಭಾರತದ ಬೌಲಿಂಗ್ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

"ಮಯಾಂಕ್ ಯಾದವ್‌ ಗಾಯದಿಂದ ಮರಳಿದ ಬಳಿಕ ಅತ್ಯಂತ ಬಲವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಅವರ ಲಯ ತುಂಬಾ ಉತ್ತಮವಾಗಿದೆ. ಅಶೋಕ್... ಶ್ರೀಲಂಕಾ ಪ್ರವಾಸದ ವೇಳೆ ಭಾರತ 'ಎ' ತಂಡದ ಪರ ಅವರು ಎಷ್ಟು ಪರಿಣಾಮಕಾರಿ ಎಂಬುದನ್ನು ನಾವು ನೋಡಿದ್ದೇವೆ," ಎಂದು ಸುನೀಲ್‌ ಜೋಶಿ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಬ್ಬರು ಹೊಸಬರಿಗೆ ಚೊಚ್ಚಲ ಸ್ಥಾನ? ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ!

"ಅವರಿಗೆ ಅವಕಾಶ ಸಿಕ್ಕಿದೆ. ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಇದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಬಳಿ ಹಲವು ವೇಗದ ಬೌಲರ್‌ಗಳಿದ್ದಾರೆ. ಅವಕಾಶ ಯಾವಾಗ ಬೇಕಾದರೂ ಬರಬಹುದು, ಆದ್ದರಿಂದ ಅವರನ್ನು ಸಿದ್ಧವಾಗಿಡುವುದು ನಮ್ಮ ಕೆಲಸ," ಎಂದು ಅವರು ಹೇಳಿದ್ದಾರೆ.

ತಂಡದಲ್ಲಿ ಬೌಲಿಂಗ್‌ ಡೆಪ್ತ್‌ ಹೆಚ್ಚಿಸುವುದು ಭಾರತದ ಗಮನ

ಇತ್ತೀಚಿನ ವರ್ಷಗಳಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗ ಬಹುತೇಕ ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಅನುಭವಿ ಆಟಗಾರರ ಮೇಲೆ ಅವಲಂಬಿತವಾಗಿತ್ತು. ಆದರೆ, ಈ ಇಬ್ಬರು ಹಿರಿಯ ವೇಗದ ಬೌಲರ್‌ಗಳು ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಡುತ್ತಿರುವುದರಿಂದ ಅವರ ಮೇಲಿನ ಕೆಲಸದ ಒತ್ತಡವನ್ನು ನಿರ್ವಹಿಸುವುದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಸವಾಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ಗುಣಮಟ್ಟದ ವೇಗದ ಬೌಲರ್‌ಗಳ ಬಳಗವನ್ನು ಬೆಳೆಸುವುದು ಭಾರತದ ಆದ್ಯತೆಯಾಗಿದೆ.

ಈ ಹಿನ್ನೆಲೆಯಲ್ಲಿ ಮಯಾಂಕ್ ಯಾದವ್ ಮತ್ತು ಅಶೋಕ್ ಶರ್ಮಾ ಅವರ ಆಗಮನ ಭಾರತ ತಂಡಕ್ಕೆ ದೊಡ್ಡ ಉತ್ತೇಜನವಾಗಿದೆ. ಇಬ್ಬರೂ ವಿಭಿನ್ನ ಪರಿಸ್ಥಿತಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಹಿರಿಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದರಿಂದ ಮೂರು ಮಾದರಿಗಳಲ್ಲೂ ವೇಗದ ಬೌಲಿಂಗ್ ಸಂಪನ್ಮೂಲಗಳನ್ನು ಅಗತ್ಯವಿದ್ದಾಗ ಬಳಸಲು ಭಾರತಕ್ಕೆ ಹೆಚ್ಚಿನ ಆಯ್ಕೆಗಳು ಲಭಿಸಿವೆ.

IND vs ZIM: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಹಾದಿಯ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್‌ ಯಾದವ್!

ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದ ಅಶೋಕ್‌ ಶರ್ಮಾ

ಗುಜರಾತ್ ಟೈಟನ್ಸ್ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಅಶೋಕ್ ಶರ್ಮಾ ಹರಾರೆಯಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ವೇಗದ ಮೂಲಕ ಬ್ಯಾಟರ್‌ಗಳಿಗೆ ನಿರಂತರವಾಗಿ ಸವಾಲು ಒಡ್ಡುವ ಸಾಮರ್ಥ್ಯದಿಂದ ಅವರು ಗಮನ ಸೆಳೆದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಆಡಿದ ಪಂದ್ಯದಲ್ಲಿ ಐಪಿಎಲ್ ಟೂರ್ನಿಯ ಅತಿ ವೇಗದ ಎಸೆತಗಳಲ್ಲಿ ಒಂದನ್ನು ಎಸೆದು ಅವರು ಗಮನ ಸೆಳೆದಿದ್ದರು.

ಮಯಾಂಕ್‌ ಯಾದವ್‌ ಕಮ್‌ಬ್ಯಾಕ್‌

ವೇಗದ ಬೌಲರ್ ಮಯಾಂಕ್ ಯಾದವ್ ಅವರ ಕಮ್‌ಬ್ಯಾಕ್‌ ಎಲ್ಲರ ಗಮನ ಸೆಳೆದಿದೆ. ಕಳೆದ ಎರಡು ಐಪಿಎಲ್ ಋತುಗಳಲ್ಲಿ ಗಾಯದ ಸಮಸ್ಯೆಯಿಂದಾಗಿ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗದಿದ್ದ ಮಯಾಂಕ್, ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರ ಈ ಸುಧಾರಿತ ಬೌಲಿಂಗ್ ಕೌಶಲ ಸ್ಪಷ್ಟವಾಗಿ ಗೋಚರಿಸಿತು. ಹೊಸ ಚೆಂಡಿನೊಂದಿಗೆ ಆರಂಭದಲ್ಲೇ ಪರಿಣಾಮಕಾರಿ ದಾಳಿ ನಡೆಸಿದ ಮಯಾಂಕ್, ಎದುರಾಳಿ ತಂಡದ ಅಗ್ರ ಕ್ರಮಾಂಕವನ್ನು ಕಂಗೆಡಿಸಿದರು ಮತ್ತು ಪವರ್‌ಪ್ಲೇ ಅವಧಿಯಲ್ಲೇ ಭಾರತಕ್ಕೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ತಂದುಕೊಟ್ಟರು. ಅವರು ಬೌಲ್‌ ಮಾಡಿದ 4 ಓವರ್‌ಗಳ ಸ್ಪೆಲ್‌ನಲ್ಲಿ 18 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.