IPL 2025: ಆರ್‌ಸಿಬಿ, ಸಿಎಸ್‌ಕೆ ಅಲ್ಲವೇ ಅಲ್ಲ! ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್!
Irfan Pathan picks his favourite IPL team: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ನೆಚ್ಚಿನ ತಂಡವನ್ನು ಆರಿಸಿದ್ದಾರೆ. ಆದರೆ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಮುಂಬೈ ಇಂಡಿಯನ್ಸ್ ತಂಡಗಳನ್ನು ಕಡೆಗಣಿಸಿದ್ದಾರೆ.

ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅವರು 2008ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿಯೇ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಇದೀಗ ಅವರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತನ್ನ ನೆಚ್ಚಿನ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ (Punjab Kings) ಎಂದು ಹೇಳಿದ ಪಠಾಣ್, ಇದಕ್ಕೆ ಬಲವಾದ ಕಾರಣವೇನೆಂಬುದನ್ನು ಕೂಡ ವಿವರಿಸಿದ್ದಾರೆ.
ಇರ್ಫಾನ್ ಪಠಾಣ್ ಅವರು 2008 ರಿಂದ 2017ರವರೆಗೆ ವಿವಿಧ ಫ್ರಾಂಚೈಸಿಗಳ ಪರ ಐಪಿಎಲ್ ಆಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಸನ್‌ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳ ಪರ ಎಡಗೈ ಆಲ್‌ರೌಂಡರ್ ಆಡಿದ್ದಾರೆ. ಇವರು 2008 ರಿಂದ 2010ರ ವರೆಗೆ ಪಂಜಾಬ್ ಕಿಂಗ್ಸ್ ಪರ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಅವರು ತನ್ನ ಆರಂಭಿಕ ಮೂರು ಸೀಸನ್‌ಗಳಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 603 ರನ್‌ಗಳನ್ನು ಸಿಡಿಸಿದ್ದಾರೆ. ಒಟ್ಟಾರೆ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಇರ್ಫಾನ್ ಪಠಾಣ್, 103 ಪಂದ್ಯಗಳಿಂದ 80 ವಿಕೆಟ್‌ಗಳು ಹಾಗೂ 1139 ರನ್‌ಗಳನ್ನು ಬಾರಿಸಿದ್ದಾರೆ.
IPL 2025: ʻಕೆಕೆಆರ್ ಪ್ರಶಸ್ತಿ ಗೆದ್ದರೂ ಶ್ರೇಯಸ್ ಅಯ್ಯರ್‌ಗೆ ಸಿಗದ ಶ್ರೇಯʼ-ಸುನೀಲ್ ಗವಾಸ್ಕರ್!
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದೆಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಆರಿಸಿದ್ದಾರೆ.
"ನನ್ನ ನೆಚ್ಚಿನ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್, ಏಕೆಂದರೆ ಐಪಿಎಲ್ ಟೂರ್ನಿಯಲ್ಲಿ ನಾನು ಪ್ರತಿನಿಧಿಸಿದ ಮೊದಲ ತಂಡ ಪಂಜಾಬ್ ಕಿಂಗ್ಸ್. ಪಂಜಾಬ್ ಕಿಂಗ್ಸ್ ಪರ ಆಡಿದ ನೆನಪುಗಳು ಇನ್ನೂ ನನ್ನಲ್ಲಿ ಇವೆ. ಈ ತಂಡದ ಓನರ್ ಪ್ರೀತಿ ಝಿಂಟಾ ಅವರು ಅಸಾಧಾರಣ ವ್ಯಕ್ತಿ ಹಾಗೂ ಇತರೆ ಓನರ್‌ಗಳು ಕೂಡ ಅದ್ಭುತವಾಗಿದ್ದರು. ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ ಆರಂಭಿಕ ಮೂರು ವರ್ಷಗಳು ಮೋಜಿನಿಂದ ಕೂಡಿದ್ದವು. ನಾಲ್ಕನೇ ಆವೃತ್ತಿಯಲ್ಲಿಯೂ ಅವರು ನನ್ನನ್ನು ಉಳಿಸಿಕೊಳ್ಳಲು ಬಯಸಿದ್ದರು. ಆದರೆ, ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯವರೆಗೂ ಬಿಡ್ ವಾರ್ ನಡೆಸಿ ನನ್ನನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ. ಈ ತಂಡವನ್ನು ನಾನು ತುಂಬಾ ಇಷ್ಟಪಡುತ್ತೇನೆ," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
IPL 2025: 27 ಕೋಟಿ ರೂ ಕೊಟ್ಟಿದ್ದೇಕೆ? 2 ರನ್‌ಗೆ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ವಿರುದ್ದ ಫ್ಯಾನ್ಸ್ ಗರಂ!
ಐಪಿಎಲ್ ಫ್ರಾಂಚೈಸಿಳಿಗೆ ಗೌರವ ನೀಡಿದ ಪಠಾಣ್
ಪಂಜಾಬ್ ಕಿಂಗ್ಸ್ ತಂಡದ ಜೊತೆಗೆ ಕೆಲ ಫ್ರಾಂಚೈಸಿಗಳಿಗೂ ಇರ್ಫಾನ್ ಪಠಾಣ್ ಗೌರವವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಅಭಿಮಾನಿ ಬಳಗ ಹಾಗೂ ಸಂಸ್ಕೃತಿಯನ್ನು ಕೂಡ ಮಾಜಿ ಆಲ್‌ರೌಂಡರ್ ಉಲ್ಲೇಖಿಸಿದ್ದಾರೆ.
"ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ನನಗೆ ದೊಡ್ಡ ಗೌರವವಿದೆ, ಏಕೆಂದರೆ ಆಟಗಾರರೊಂದಿಗೆ ಅವರು ಮಾಡುವ ಕೆಲಸ ಅದ್ಭುತವಾಗಿದೆ. ಗೆಲ್ಲಲಿ ಅಥವಾ ಸೋಲಲಿ ಈ ಸಂಸ್ಕೃತಿ ಮಾತ್ರ ಯಾವಾಗಲೂ ಮುಂದುವರಿಯುತ್ತದೆ. ಇನ್ನೊಂದು ತಂಡಕ್ಕೆ ಗೌರವ ಕೊಡುವುದಾದರೆ ಅದು ಮುಂಬೈ ಇಂಡಿಯನ್ಸ್, ಏಕೆಂದರೆ ಅವರು ಯುವ ಪ್ರತಿಭೆಗಳನ್ನು ಚೆನ್ನಾಗಿ ಪಳಗಿಸುತ್ತಾರೆ. ಇನ್ನು ಅಸಾಧಾರಣ ಅಭಿಮಾನಿಗಳ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ದೊಡ್ಡ ಗೌರವವನ್ನು ನೀಡುತ್ತೇನೆ. ಆರ್‌ಸಿಬಿಯನ್ನು ಬೆಂಬಲಿಸಲು ಅಭಿಮಾನಿಗಳು ಇದ್ದೇ ಇರುತ್ತಾರೆ. ನನ್ನ ಒಂದು ಕಾಮೆಂಟರಿ ಸಾಲೊಂದು ತುಂಬಾ ಖ್ಯಾತಿಯನ್ನು ಪಡೆದಿದೆ. ಅದೇನೆಂದರೆ, ಪ್ರಾಮಾಣಿಕ ಆರ್‌ಸಿಬಿ ಫ್ಯಾನ್ಸ್ ತರಹದ ಬೆಂಬಲ ನಿಮಗೆ ಸಿಕ್ಕರೆ, ಯಾವುದೇ ಹೋರಾಟವನ್ನು ಬೇಕಾದರೂ ಗೆಲ್ಲಬಹುದು," ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
IPL 2025 Points Table: ಸತತ 2 ಗೆಲುವು; ದ್ವಿತೀಯ ಸ್ಥಾನಕ್ಕೇರಿದ ಪಂಜಾಬ್
"ಕೆಕೆಆರ್ ತಂಡವನ್ನು ಕೂಡ ನಾನು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಸಹೋದರ ಯೂಸಫ್ ಪಠಾಣ್ ಇದ್ದರು. ಶಾರೂಖ್ ಖಾನ್ ಮಾಲೀಕತ್ವ ಮತ್ತು ಗೌತಮ್ ಗಂಭೀರ್ ನಾಯಕತ್ವದಲ್ಲಿ ನನ್ನ ಸಹೋದರ ಆಡಿದ್ದರು. ಈ 4 ರಿಂದ 5 ಫ್ರಾಂಚೈಸಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರ ಇವೆ," ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.