IPL 2025: 27 ಕೋಟಿ ರೂ ಕೊಟ್ಟಿದ್ದೇಕೆ? 2 ರನ್‌ಗೆ ವಿಕೆಟ್ ಒಪ್ಪಿಸಿದ ರಿಷಭ್ ಪಂತ್ ವಿರುದ್ದ ಫ್ಯಾನ್ಸ್ ಗರಂ!
Rishabh Pant again Failed in IPL 2025: ಪಂಜಾಬ್ ಕಿಂಗ್ಸ್ ವಿರುದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ತದಲ್ಲಿಯೂ ರಿಷಭ್ ಪಂತ್ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ರಿಷಭ್ ಪಂತ್ ವಿರುದ್ಧ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್ ಬ್ಯಾಟಿಂಗ್ ವೈಫಲ್ಯ

ಲಖನೌ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ರಿಷಭ್ ಪಂತ್ (Rishabh Pant) ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿದ್ದಾರೆ. ಮಂಗಳವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಲಖನೌ ಸೂಪರ್ ಜಯಂಟ್ಸ್ (LSG) ನಾಯಕ ವಿಫಲರಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್ 5 ಎಸೆತಗಳಲ್ಲಿ 2 ರನ್ ಗಳಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಯುಜ್ವೇಂದ್ರ ಚಹಲ್‌ಗೆ ಕ್ಯಾಚ್ ಕೊಟ್ಟರು. ಔಟ್ ಆದ ಬೆನ್ನಲ್ಲೆ ರಿಷಭ್ ಪಂತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಲಖನೌ ಫ್ರಾಂಚೈಸಿ 27 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಅವರು ತಮಗೆ ಸಿಕ್ಕಿರುವ ಹಣಕ್ಕೆ ಮೌಲ್ಯವನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ. ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಿಂದ ರಿಷಭ್ ಪಂತ್ ಗಳಿಸಿರುವುದು ಕೇವಲ 17 ರನ್‌ಗಳು ಮಾತ್ರ. ಮೊದಲನೇ ಪಂದ್ಯದಲ್ಲಿ 0, ಎರಡನೇ ಪಂದ್ಯದಲ್ಲಿ 15 ಹಾಗೂ ಮೂರನೇ ಪಂದ್ಯದಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
IPL 2025: ʻಪವರ್‌ಪ್ಲೇನಲ್ಲಿ ಅಶ್ವಿನ್‌ಗೆ ಬೌಲಿಂಗ್ ಕೊಡಬೇಡಿʼ-ಸಿಎಸ್‌ಕೆಗೆ ಶ್ರೀಕಾಂತ್ ಸಲಹೆ!
ಆರಂಭಿಕ ಮೂರೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಕಾರಣ ರಿಷಭ್ ಪಂತ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ರಿಷಭ್ ಪಂತ್ ತೋರುತ್ತಿರುವ ಪ್ರದರ್ಶನ ಹಾಗೂ ಅವರಿಗೆ ನೀಡಿರುವ ಮೊತ್ತಕ್ಕೆ ಸಂಬಧವಿಲ್ಲ ಎಂದು ದೂರುತ್ತಿದ್ದಾರೆ. ಅಲ್ಲದೆ ವಿಕೆಟ್ ಕೀಪರ್‌ಗೆ ಇಷ್ಟೊಂದು ದುಬಾರಿ ಮೊತ್ತ ನೀಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Dekhna Rishabh pant ka 1 run 1 crore ka padega ... Stupid stupid stupid....#LSGvsPBKS pic.twitter.com/dHJBP6PqvW
— ShivRaj Yadav (@shivaydv_) April 1, 2025
ರಿಷಭ್ ಪಂತ್ ಅವರ ಭಾರತ ತಂಡದ ಸಹ ಆಟಗಾರ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು 2025 ಅವರು ಮೆಗಾ ಹರಾಜಿನಲ್ಲಿ 26.75 ಕೋಟಿ ರೂ. ಗಳನ್ನು ನೀಡಲಾಗಿತ್ತು. ರಿಷಭ್ ಪಂತ್ ಬಳಿಕ ಐಪಿಎಲ್ ಟೂರ್ನಿಯ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಅದರಂತೆ ತಮಗೆ ಸಿಕ್ಕ ದುಬಾರಿ ಬೆಲೆಗೆ ಶ್ರೇಯಸ್ ಅಯ್ಯರ್ ನ್ಯಾಯವನ್ನು ಒದಗಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ದದ ತನ್ನ ಆರಂಭಿಕ ಪಂದ್ಯದಲ್ಲಿ ಅಜೇಯ 97 ರನ್‌ಗಳನ್ನು ಸಿಡಿಸಿದ್ದರು. ಇದೀಗ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಅವರ ನಡುವೆ ಹೋಲಿಕೆ ಮಾಡಲಾಗುತ್ತಿದೆ.
Goenka with Rishabh Pant in the dressing room #LSGvsPBKS pic.twitter.com/mHElHB49A4
— VAZY (@vazy_7011) April 1, 2025
ಈ ಹಿಂದೆ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದರು. ಆದರೆ, ಮೆಗಾ ಹರಾಜಿನಲ್ಲಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ತದ ನಂತರ ರಿಷಭ್ ಪಂತ್‌ಗೆ ಲಖನೌ ತಂಡದ ನಾಯಕತ್ವವನ್ನು ನೀಡಲಾಗಿದೆ. ಲಖನೌ ಆಡಿರುವುದು ಮೂರು ಪಂದ್ಯಗಳು ಮಾತ್ರ ಹಾಗೂ ಆಡುವುದು ಇನ್ನೂ 11 ಪಂದ್ಯಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಪಂತ್ ಫಾರ್ಮ್‌ಗೆ ಕಮ್‌ಬ್ಯಾಕ್ ಮಾಡಲು ಇನ್ನೂ ಸಾಕಷ್ಟು ಅವಕಾಶವಿದೆ.
His baniya buddhi is already calculating the per ball cost of buying Rishabh Pant pic.twitter.com/ubQpw8TQHP
— Sagar (@sagarcasm) April 1, 2025
171 ರನ್ ಕಲೆ ಹಾಕಿದ ಲಖನೌ
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಲಖನೌ ಸೂಪರ್ ಜಯಂಟ್ಸ್ ತಂಡ, ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಪಂಜಾಬ್ ಕಿಂಗ್ಸ್‌ಗೆ 172 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ.