ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rinku Singh: 9ನೇ ತರಗತಿ ಫೇಲ್‌ ಆದ ರಿಂಕುಗೆ ಶಿಕ್ಷಣಾಧಿಕಾರಿ ಹುದ್ದೆ; ಭಾರೀ ವಿರೋಧ

9ನೇ ತರಗತಿಯಲ್ಲಿ ಫೇಲಾದ, ಶಾಲೆ ಬಿಟ್ಟ ರಿಂಕು ಸಿಂಗ್‌ನನ್ನು ಉತ್ತರ ಪ್ರದೇಶದಲ್ಲಿ ಮೂಲ ಶಿಕ್ಷಣ ಅಧಿಕಾರಿಯನ್ನಾಗಿ ಮಾಡುವುದು ಪ್ರತಿಯೊಬ್ಬ ಪದವೀಧರನ ಮುಖಕ್ಕೆ ಹೊಡೆದಂತೆ. ಕ್ರೀಡೆ ಅಥವಾ ಯುವ ವ್ಯವಹಾರಗಳಲ್ಲಿ ಅವರನ್ನು ನೇಮಿಸಿ" ಎಂದು ನೆಟ್ಟಿಗರೊಬ್ಬರು ಯುಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

9ನೇ ತರಗತಿ ಫೇಲ್‌ ಆದ ರಿಂಕುಗೆ  ಶಿಕ್ಷಣಾಧಿಕಾರಿ ಹುದ್ದೆ; ಭಾರೀ ವಿರೋಧ

Profile Abhilash BC Jun 30, 2025 1:17 PM

ಲಕ್ನೋ: ಟೀಮ್‌ ಇಂಡಿಯಾದ ಕ್ರಿಕೆಟಿಗ ರಿಂಕು ಸಿಂಗ್(Rinku Singh) ಅವರನ್ನು ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಜಿಲ್ಲಾ ಮೂಲ ಶಿಕ್ಷಣಾಧಿಕಾರಿಯಾಗಿ(Basic Education Officer) ನೇಮಕ ಮಾಡಲಾಗಿತ್ತು. 9ನೇ ತರಗತಿ ಫೇಲ್‌ ಆಗಿದ್ದರೂ ರಿಂಕು ಅವರನ್ನು ಈ ಹುದ್ದಗೆ ನೇಮಕ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿಯಮಗಳ ಪ್ರಕಾರ, ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿಯಾಗಿ ನೇಮಕ ಆಗಬೇಕಾದರೇ, ಕನಿಷ್ಠ ವಿದ್ಯಾರ್ಹತೆ ಪದವಿ ಪಡೆದಿರಬೇಕು. 21 ವರ್ಷದಿಂದ 40 ವರ್ಷದ ಒಳಗಿನವರಾಗಿರಬೇಕು.

ನಿಯಮಗಳ ಪ್ರಕಾರ ರಿಂಕು ಸಿಂಗ್ ಯಾವುದೇ ಪದವಿಯನ್ನು ಪಡೆದಿಲ್ಲ, ಕನಿಷ್ಠ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ. ಹೀಗಿದ್ದರೂ ಅವರನ್ನು ಶಿಕ್ಷಣ ಅಧಿಕಾರಿಯಾಗಿ ನೇಮಿಸಿದ್ದು ಹೇಗೆ? ಇದು ಪದವೀಧರರಿಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಪದಕ ವಿಜೇತ ನೇರ ನೇಮಕಾತಿ ನಿಯಮಗಳು 2022 ರ ಅಡಿಯಲ್ಲಿ ರಿಂಕು ಅವರನ್ನು ಆಯ್ಕೆ ಮಾಡಲಾಗಿತ್ತು.

ಮೂಲಭೂತ ಶಿಕ್ಷಣ ಅಧಿಕಾರಿ (ಬಿಎಸ್ಎ) ಸರ್ಕಾರದ ಜಿಲ್ಲಾ ಮಟ್ಟದ ಪ್ರತಿನಿಧಿಯಾಗಿ ಮೂಲಭೂತ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಾರೆ. ರಾಜ್ಯ ನೀತಿಗಳ ಅನುಷ್ಠಾನವನ್ನು ಖಚಿತಪಡಿಸುತ್ತಾರೆ. ಮತ್ತು ಶಾಲೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದು ಗ್ರೂಪ್ ಬಿ (ಗೆಜೆಟೆಡ್) ಹುದ್ದೆಯಾಗಿದ್ದು ಸಾಮಾನ್ಯವಾಗಿ ರಾಜ್ಯ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗಳ ಮೂಲಕ ಭರ್ತಿ ಮಾಡಲ್ಪಡುತ್ತದೆ ಮತ್ತು ಕನಿಷ್ಠ ಪದವಿ ಪದವಿಯ ಅಗತ್ಯವಿರುತ್ತದೆ.

"ನಮ್ಮ ಉತ್ತರ ಪ್ರದೇಶದ ದುರದೃಷ್ಟವನ್ನು ನೋಡಿ, ಶಿಕ್ಷಣದೊಂದಿಗೆ ಯಾವುದೇ ಸಂಬಂಧವಿಲ್ಲದ ರಿಂಕು ಸಿಂಗ್ ಅವರನ್ನು ಮೂಲ ಶಿಕ್ಷಣ ಅಧಿಕಾರಿಯನ್ನಾಗಿ ಮಾಡಲಾಗುತ್ತಿದೆ. ಅವರನ್ನು ಗೌರವಿಸಲು ಬಯಸಿದರೆ, ಅವರು ಕ್ರೀಡಾ ಕ್ಷೇತ್ರದಲ್ಲಿ ಯಾವುದಾದದರು ಹುದ್ದೆ ನೀಡಬಹುದಿತ್ತು" ಎಂದು ನೆಟ್ಟಿಗರೊಬ್ಬರು ಮನವಿ ಮಾಡಿದ್ದಾರೆ.

"9ನೇ ತರಗತಿಯಲ್ಲಿ ಫೇಲಾದ, ಶಾಲೆ ಬಿಟ್ಟ ರಿಂಕು ಸಿಂಗ್‌ನನ್ನು ಉತ್ತರ ಪ್ರದೇಶದಲ್ಲಿ ಮೂಲ ಶಿಕ್ಷಣ ಅಧಿಕಾರಿಯನ್ನಾಗಿ ಮಾಡುವುದು ಪ್ರತಿಯೊಬ್ಬ ಪದವೀಧರನ ಮುಖಕ್ಕೆ ಹೊಡೆದಂತೆ. ಕ್ರೀಡೆ ಅಥವಾ ಯುವ ವ್ಯವಹಾರಗಳಲ್ಲಿ ಅವರನ್ನು ನೇಮಿಸಿ" ಎಂದು ಮತ್ತೊಬ್ಬರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ Rinku Singh Wedding: ರಿಂಕು ಸಿಂಗ್‌-ಪ್ರಿಯಾ ಸರೋಜ್ ಮದುವೆ ಮುಂದೂಡಿಕೆ!