IPL 2027 ಮಿನಿ ಹರಾಜಿಗೆ 1,220 ಆಟಗಾರರ ನೋಂದಣಿ: ಸ್ಟೋಕ್ಸ್, ವಾರ್ನರ್ ಸೇರಿ ಹಲವು ಸ್ಟಾರ್ಸ್ ಕಣಕ್ಕೆ!
ಐಪಿಎಲ್ 2027ರ ಮಿನಿ ಹರಾಜಿಗೆ ಬೆನ್ ಸ್ಟೋಕ್ಸ್, ಡೇವಿಡ್ ವಾರ್ನರ್ ಸೇರಿದಂತೆ ಒಟ್ಟು 1,220 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ 16ರಂದು ಗೋವಾದಲ್ಲಿ ಹರಾಜು ನಡೆಯಲಿದ್ದು, ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2027ರ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಯವೀರ್ ಸೆಹ್ವಾಗ್, ಡೇವಿಡ್ ವಾರ್ನರ್. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2027ರ (IPL 2027 Mini Auction) ಮಿನಿ ಹರಾಜಿಗೆ ಸಿದ್ಧತೆಗಳು ಆರಂಭವಾಗಿದ್ದು, ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಹಾಗೂ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ ಸೇರಿದಂತೆ ಒಟ್ಟು 1,220 ಆಟಗಾರರು ಆರಂಭಿಕ ಹರಾಜು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್ 16ರಂದು ಗೋವಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 10 ಫ್ರಾಂಚೈಸಿಗಳು ಗರಿಷ್ಠ 66 ಆಟಗಾರರ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ 25 ವಿದೇಶಿ ಆಟಗಾರರ ಸ್ಥಾನಗಳು ಸೇರಿವೆ.
ನೋಂದಾಯಿಸಿಕೊಂಡಿರುವ 1,220 ಆಟಗಾರರಲ್ಲಿ 939 ಭಾರತೀಯ ಆಟಗಾರರು ಹಾಗೂ 281 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ 170 ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಆಟಗಾರರು, ಅಸೋಸಿಯೇಟ್ ರಾಷ್ಟ್ರಗಳ 42 ಆಟಗಾರರು ಹಾಗೂ ಹಲವು ಅನ್ಕ್ಯಾಪ್ಡ್ ಭಾರತೀಯ ಮತ್ತು ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ.
IPL 2027: ಡಿಸೆಂಬರ್ 16ರ ಮಿನಿ ಹರಾಜಿನಲ್ಲಿ ಭಾಗವಹಿಸಲು ಬೆನ್ ಸ್ಟೋಕ್ಸ್ಗೆ ಬಿಸಿಸಿಐ ಅನುಮತಿ!
2 ಕೋಟಿ ರು. ಮೂಲ ಬೆಲೆಯ ಆಟಗಾರರ ಪಟ್ಟಿಯಲ್ಲಿ ಸ್ಟೋಕ್ಸ್, ವಾರ್ನರ್
ಬೆನ್ ಸ್ಟೋಕ್ಸ್ ಮತ್ತು ಡೇವಿಡ್ ವಾರ್ನರ್ ಇಬ್ಬರೂ ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರು.ಗೆ ನಿಗದಿಪಡಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ ಮತ್ತು ಟ್ರೆಂಟ್ ಬೌಲ್ಟ್ ಪ್ರಮುಖರಾಗಿದ್ದಾರೆ. ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಗರ್ಕ್, ಸ್ಪೆನ್ಸರ್ ಜಾನ್ಸನ್ ಮತ್ತು ಜೇ ರಿಚರ್ಡ್ಸನ್ ಕೂಡ 2 ಕೋಟಿ ರು. ಮೂಲ ಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಟಾಮ್ ಕರನ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಆವೇಶ್ ಖಾನ್, ದೀಪಕ್ ಚಹರ್ ಕೂಡ 2 ಕೋಟಿ ರು. ಮೂಲ ಬೆಲೆ
ಇತರ ಪ್ರಮುಖ ವಿದೇಶಿ ಆಟಗಾರರಲ್ಲಿ ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್, ರಹಮಾನುಲ್ಲಾ ಗುರ್ಬಾಜ್, ಎರ್ನಿಕ್ ನೋಕಿಯಾ, ಜೆರಾಲ್ಡ್ ಕೊಯೆಟ್ಜಿ, ಮಥೀಶ ಪತಿರಣ, ವಾನಿಂದು ಹಸರಂಗ, ಶೇಯ್ ಹೋಪ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸೇರಿದ್ದಾರೆ.
35ರ ವಯಸ್ಸಿನ ಬೆನ್ ಸ್ಟೋಕ್ಸ್ ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರು ಕೊನೆಯ ಬಾರಿ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡಿದ್ದರು. ಇದುವರೆಗೆ ರೈಸಿಂಗ್ ಪುಣೆ ಸೂಪರ್ಜಯಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಮೂರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ 45 ಪಂದ್ಯಗಳಿಂದ 935 ರನ್ ಗಳಿಸಿರುವ ಅವರು, 28 ವಿಕೆಟ್ಗಳನ್ನು ಪಡೆದಿದ್ದಾರೆ.
IPL 2027: ಲಖನೌ ಸೂಪರ್ ಜಯಂಟ್ಸ್ನ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದ ದಿಗ್ವೇಶ್ ರಾಠಿ!
ಇನ್ನು ಡೇವಿಡ್ ವಾರ್ನರ್ 2026ರ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ಉಳಿದಿದ್ದರು. ಇದೀಗ ಮತ್ತೊಮ್ಮೆ ಐಪಿಎಲ್ ಒಪ್ಪಂದ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ನಲ್ಲಿ ಅವಕಾಶ ಸಿಗದ ಬಳಿಕ ಪಾಕಿಸ್ತಾನ ಸೂಪರ್ ಲೀಗ್ನತ್ತ ಮುಖ ಮಾಡಿದ್ದ ವಾರ್ನರ್ ಅವರನ್ನು ಕರಾಚಿ ಕಿಂಗ್ಸ್ ತಂಡ 7.9 ಕೋಟಿ ಪಾಕಿಸ್ತಾನಿ ರೂಪಾಯಿಗೆ ಖರೀದಿಸಿತ್ತು.
ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ನೋಂದಣಿ
2027ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಯುವ ಭಾರತೀಯ ಆಟಗಾರರೂ ಗಮನ ಸೆಳೆದಿದ್ದಾರೆ. ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇತ್ತೀಚೆಗೆ ಒಮಾನ್ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಆರ್ಯವೀರ್ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಫೈನಲ್ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಿತ್ ಉಲ್ವಾ ಕೂಡ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂಡರ್-19 ಏಷ್ಯಾಕಪ್ ವಿಜೇತ ತಂಡದ ಮತ್ತೊಬ್ಬ ಆಟಗಾರ ಕಾವ್ಯನ್ ಪಟೇಲ್ ಕೂಡ ಪಟ್ಟಿಯಲ್ಲಿದ್ದಾರೆ. ಈ ಮೂವರು ಯುವ ಆಟಗಾರರು ತಮ್ಮ ಮೂಲ ಬೆಲೆಯನ್ನು ತಲಾ 30 ಲಕ್ಷ ರು.ಗೆ ನಿಗದಿಪಡಿಸಿಕೊಂಡಿದ್ದಾರೆ.
IPL 2027: ಮಿನಿ ಹರಾಜಿಗೆ ಬಿಡುಗಡೆಯಾದ ಟಾಪ್ 10 ಸ್ಟಾರ್ ಆಟಗಾರರ ವಿವರ!
2 ಕೋಟಿ ರು. ಮೂಲ ಬೆಲೆ ಆಟಗಾರರು
ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್, ರಹಮಾನುಲ್ಲಾ ಗುರ್ಬಾಜ್, ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಗರ್ಕ್, ಜೇ ರಿಚರ್ಡ್ಸನ್, ಮಹ್ಲಿ ಬಿಯರ್ಡ್ಮನ್, ಸ್ಪೆನ್ಸರ್ ಜಾನ್ಸನ್, ಬೆನ್ ಸ್ಟೋಕ್ಸ್, ಜಾನಿ ಬೈರ್ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಸನ್ನಿ ಬೇಕರ್, ಟಾಮ್ ಕರನ್, ಆವೇಶ್ ಖಾನ್, ದೀಪಕ್ ಚಹರ್, ಆಡಂ ಮಿಲ್ನೆ, ಬೆನ್ ಸಿಯರ್ಸ್, ಬೆವನ್-ಜಾನ್ ಜೇಕಬ್ಸ್, ಡ್ಯಾರಿಲ್ ಮಿಚೆಲ್, ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಟ್ರೆಂಟ್ ಬೌಲ್ಟ್, ವಿಲ್ ಓ'ರೂರ್ಕ್, ಎನ್ರಿಕ್ ನೋರ್ಕಿಯಾ , ಜೆರಾಲ್ಡ್ ಕೊಯೆಟ್ಜಿ, ಮಥೀಶ ಪತಿರಣ, ವಾನಿಂದು ಹಸರಂಗ, ಶೇಯ್ ಹೋಪ್, ಶಿಮ್ರಾನ್ ಹೆಟ್ಮೆಯರ್
1.50 ಕೋಟಿ ರು ಮೂಲ ಬೆಲೆಯ ಆಟಗಾರರು
ಅಲ್ಲಾ ಮೊಹಮ್ಮದ್ ಘಜನ್ಫರ್, ಡೇನಿಯಲ್ ಸ್ಯಾಮ್ಸ್, ರಿಲೆ ಮೆರೆಡಿತ್, ಡೇವಿಡ್ ವೀಸ್, ರಾಸಿ ವ್ಯಾನ್ ಡರ್ ಡಸ್ಸೆನ್, ಜೇಡನ್ ಸೀಲ್ಸ್, ಕೀಮೋ ಪಾಲ್.
1.25 ಕೋಟಿ ರು. ಮೂಲ ಬೆಲೆಯ ಆಟಗಾರರು
ಆಷ್ಟನ್ ಅಗರ್, ಬಿಲ್ಲಿ ಸ್ಟ್ಯಾನ್ಲೇಕ್, ಕೈಲ್ ಮೇಯರ್ಸ್, ಮ್ಯಾಥ್ಯೂ ಫೋರ್ಡ್.
1 ಕೋಟಿ ರೂ. ಮೂಲ ಬೆಲೆಯ ಆಟಗಾರರು
ಗುಲ್ಬದಿನ್ ನೈಬ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ಕ್ರಿಸ್ ಲಿನ್, ಮ್ಯಾಥ್ಯೂ ಕುಹ್ನೆಮನ್, ನಿಖಿಲ್ ಚೌಧರಿ, ಸ್ಕಾಟ್ ಬೋಲೆಂಡ್, ರಿಶಾದ್ ಹೊಸೈನ್, ಟೈಮಲ್ ಮಿಲ್ಸ್, ಆಕಾಶ್ ದೀಪ್, ಜಯದೇವ್ ಉನದ್ಕಟ್, ತುಷಾರ್ ದೇಶಪಾಂಡೆ, ಉಮೇಶ್ ಯಾದವ್, ಬ್ಲೇರ್ ಟಿಕ್ನರ್, ಮ್ಯಾಥ್ಯೂ ಫಿಶರ್, ನೇಥನ್ ಸ್ಮಿತ್, ಝಾಕ್ ಫೌಲ್ಕ್ಸ್, ಡುವಾನ್ ಜಾನ್ಸೆನ್, ಮಾರ್ಕಸ್ ಅಕರ್ಮನ್, ಮ್ಯಾಥ್ಯೂ ಬ್ರೆಟ್ಜ್ಕೆ, ಒಟ್ನೀಲ್ ಬಾರ್ಟ್ಮನ್, ಚರಿತ್ ಅಸಲಂಕ, ದುಷ್ಮಂತ ಚಮೀರ, ಕುಸಾಲ್ ಮೆಂಡಿಸ್, ಮಹೀಶ್ ತೀಕ್ಷಣ, ಸೋನಲ್ ದಿನೂಷ, ಆಂಡ್ರೆ ಫ್ಲೆಚರ್, ಜಾನ್ ಕ್ಯಾಂಪ್ಬೆಲ್, ನ್ಯೂಮನ್ ನ್ಯಾಮ್ಹುರಿ.