ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sanju Samson: ಅಭಿಮಾನಿಗೆ ದುಬಾರಿ ಬೆಲೆಯ ಮೊಬೈಲ್‌ ಉಡುಗೊರೆ ನೀಡಿದ ಸಂಜು ಸ್ಯಾಮ್ಸನ್

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿರುವ ಸಂಜು ಸ್ಯಾಮ್ಸನ್‌ ಆಡಿದ ಮೊದಲ ಮೂರು ಪಂದ್ಯಗಳಲ್ಲಿ 6, 7 ಮತ್ತು 9 ರನ್ ಗಳಿಸಿದ್ದಾರೆ. ಸತತ ಮೂರು ಸೋಲುಗಳ ನಂತರ ತಂಡವು ಈ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ಅಭಿಮಾನಿಗೆ ದುಬಾರಿ ಬೆಲೆಯ ಮೊಬೈಲ್‌‌ ಫೋನ್‌ ಉಡುಗೊರೆ ನೀಡಿದ ಸಂಜು

Sanju Samson (L) with a fan -

Abhilash BC
Abhilash BC Apr 10, 2026 11:27 AM

ಪಾಲಕ್ಕಾಡ್‌, ಎ.10: ಹಾಲಿ ಆವೃತ್ತಿಯ ಐಪಿಎಲ್‌(IPL 2026)ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕಾಣುತ್ತಿರುವ ಸಂಜು ಸ್ಯಾಮ್ಸನ್‌(Sanju Samson) ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಿ ಹೃದಯಗೆದ್ದಿದ್ದಾರೆ. ಸಂಜು ಅವರ ಈ ಸರಳ ವ್ಯಕ್ತಿತ್ವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವರದಿಯ ಪ್ರಕಾರ, ಸಂಜು ಕೋಯಿಕ್ಕೋಡ್ ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದಾಗ ಸಂಜೆ 5:15 ರ ಸುಮಾರಿಗೆ ಫೋನ್ ಕರೆ ಮಾಡುವ ಸಲುವಾಗಿ ತನ್ನ ಕಾರನ್ನು ನಿಲ್ಲಿಸಿದ್ದರು. ಅದೇ ಸಮಯದಲ್ಲಿ, ಶಬರೀಶ್ ತನ್ನ ಸ್ನೇಹಿತ ಮಣಿಕಂದನ್ ಜತೆಗೆ ಹತ್ತಿರದ ಮೈದಾನಕ್ಕೆ ಕ್ರಿಕೆಟ್ ಆಡಲು ಹೋಗುತ್ತಿದ್ದರು. ನಿಲ್ಲಿಸಿದ್ದ ಕಾರಿನೊಳಗೆ ಪರಿಚಿತ ವ್ಯಕ್ತಿಯೊಬ್ಬರು ಇರುವುದನ್ನು ಗಮನಿಸಿ ಕುತೂಹಲದಿಂದ, ಇಬ್ಬರೂ ಹತ್ತಿರದಿಂದ ನೋಡಲು ಹಿಂತಿರುಗಿದ್ದಾರೆ. ಈ ವೇಳೆ ಅದು ಸಂಜು ಸ್ಯಾಮ್ಸನ್ ಎಂದು ಅರಿತು‌ ಅಚ್ಚರಿಪಟ್ಟರು.

ಆ ಸಮಯದಲ್ಲಿ ವೀಡಿಯೊ ಕರೆಯಲ್ಲಿದ್ದ ಕ್ರಿಕೆಟಿಗ, ಅವರನ್ನು ಕಾಯುವಂತೆ ಸನ್ನೆ ಮಾಡಿದರು. ಕರೆ ಮುಗಿಸಿದ ನಂತರ, ಅವರು ಮಣಿಕಂದನ್ ಮತ್ತು ಶಬರೀಶ್ ಜತೆ ಸಂವಹನ ನಡೆಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು ಮತ್ತು ಫೋಟೋ ತೆಗೆದುಕೊಳ್ಳಲು ಸಹ ಮುಂದಾದರು. ಶಬರೀಷ್ ತಮ್ಮದೇ ಆದ ಫೋನ್ ಬಳಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಆ ಫೋನ್ ಹಾನಿಗೊಳಗಾಗಿತ್ತು. ಇದನ್ನು ಗಮನಿಸಿದ ಸಂಜು, ತಮ್ಮ ಕಾರಿನಲ್ಲಿದ್ದ ಸುಮಾರು 30,000 ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿದರು. ಸಂಜು ನೀಡಿದ ಈ ಅಚ್ಚರಿಯ ಉಡುಗೊರೆ ಕಂಡು ಶಬರೀಷ್‌ ದಿಗ್ಭ್ರಮೆಗೊಂಡರು. ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್‌ ಕೊಟ್ಟ ಸಂಜು, ಕ್ರಿಕೆಟ್ ಚೆನ್ನಾಗಿ ಆಡುವಂತೆ ಸಲಹೆ ನೀಡಿದರು. ಸಂಜು ನೀಡಿದ ಮೊಬೈಲ್‌ ಫೋನ್‌ನ ಫೋಟೊವನ್ನು ಶಬರೀಷ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.



KKR vs RR: ಫೀಲ್ಡಿಂಗ್‌ ಎಡವಟ್ಟು ಸೋಲಿಗೆ ಕಾರಣವಾಯಿತು ಎಂದ ರಹಾನೆ

ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿರುವ ಸಂಜು ಆಡಿದ ಮೊದಲ ಮೂರು ಪಂದ್ಯಗಳಲ್ಲಿ 6, 7 ಮತ್ತು 9 ರನ್ ಗಳಿಸಿದ್ದಾರೆ. ಸತತ ಮೂರು ಸೋಲುಗಳ ನಂತರ ತಂಡವು ಈ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದೆ.