ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೂಲನ್ ಗೋಸ್ವಾಮಿಯ ವಿಶ್ವ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ

Deepti Sharma: ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್‌ ಪಡೆ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಹೋರಾಟ ಮುಗಿಸಿತು. ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಶಫಾಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಮಾತ್ರವಲ್ಲದೆ 3.2 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು.

ಜೂಲನ್ ಗೋಸ್ವಾಮಿಯ ವಿಶ್ವ ದಾಖಲೆ ಸರಿಗಟ್ಟಿದ ದೀಪ್ತಿ ಶರ್ಮಾ

Deepti Sharma -

Abhilash BC
Abhilash BC Jun 18, 2026 10:43 AM

ಲೀಡ್ಸ್‌, ಜೂ.18: ಬುಧವಾರ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದಿದ್ದ ನೆದರ್ಲ್ಯಾಂಡ್ಸ್ ವಿರುದ್ಧ ಮಹಿಳಾ ಟಿ20 ವಿಶ್ವಕಪ್ ಗ್ರೂಪ್ ಎ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಅವರು ಡಚ್ ಆರಂಭಿಕ ಆಟಗಾರ್ತಿ ಫೆಬೆ ಮೊಲ್ಕೆನ್‌ಬೋಯರ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರ ವಿಕೆಟ್‌ ಸಂಖ್ಯೆಯನ್ನು ಸಮಬಲ ಗೊಳಿಸಿದರು. ಈಗ ಇಬ್ಬರೂ ಭಾರತೀಯ ಬೌಲರ್‌ಗಳು 355 ವಿಕೆಟ್‌ಗಳನ್ನು ಗಳಿಸಿದ್ದಾರೆ. ಜೂಲನ್‌ ನಿವೃತ್ತಿ ಹೊಂದಿರುವ ಕಾರಣ ದೀಪ್ತಿಗೆ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ಇದಕ್ಕೆ ಇನ್ನೊಂದು ವಿಕೆಟ್‌ ಅಗತ್ಯ.

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು

ದೀಪ್ತಿ ಶರ್ಮಾ (IND)- 355*

ಜೂಲನ್ ಗೋಸ್ವಾಮಿ (IND)- 355

ಕ್ಯಾಥರೀನ್-ಸ್ಕಿವರ್ ಬ್ರಂಟ್ (ENG)- 335

ಟಿ20 ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ, ಸ್ಮೃತಿ ಮಂಧಾನ

ತಂಡದ ಪ್ರದರ್ಶನಕ್ಕೆ ನಾಯಕಿ ಕೌರ್‌ ಮೆಚ್ಚುಗೆ

ಪಂದ್ಯದ ನಂತರ, ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡವು ಪಂದ್ಯದಲ್ಲಿ ತೋರಿದ ಪ್ರದರ್ಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ತಂಡವು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲಿ ಅಸಾಧಾರಣ ಪ್ರದರ್ಶನ ನೀಡಿತು ಎಂದು ಅಭಿಪ್ರಾಯಪಟ್ಟರು.

"ನಾವು ನಿಜವಾಗಿಯೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಸ್ಮೃತಿ ಮತ್ತು ಶಫಾಲಿ ಬ್ಯಾಟಿಂಗ್ ಮಾಡಿದ ರೀತಿ ನಮಗೆ ನಿಜವಾಗಿಯೂ ಉತ್ತಮ ವೇದಿಕೆಯನ್ನು ನೀಡಿತು. ಅವರಿಗೆ ಧನ್ಯವಾದಗಳು. ಶಫಾಲಿ ನಿಜವಾಗಿಯೂ ಬೌಲಿಂಗ್ ಮಾಡಲು ಉತ್ಸುಕರಾಗಿದ್ದಾರೆ. ತಂಡಕ್ಕೆ ಅಗತ್ಯವಿರುವಾಗ ಯಾವಾಗಲೂ ಸಿದ್ಧರಿರುತ್ತಾರೆ. ಭವಿಷ್ಯದಲ್ಲಿ ಅವರು ಉತ್ತಮ ಆಲ್ ರೌಂಡರ್ ಆಗುತ್ತಾರೆ ಎಂದು ಆಶಿಸುತ್ತೇನೆ. ಈ ಎರಡು ಪಂದ್ಯಗಳಲ್ಲಿ ನಾವು ಏನನ್ನು ಸಾಧಿಸಲು ಬಯಸುತ್ತೇವೆಯೋ ಅದನ್ನು ನಾವು ಮಾಡಿದ್ದೇವೆ ”ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದರು.

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್‌ ಪಡೆ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಹೋರಾಟ ಮುಗಿಸಿತು. ಪಂದ್ಯದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ ಶಫಾಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಮಾತ್ರವಲ್ಲದೆ 3.2 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಆದರೂ ಅವರಿಗೆ ಪಂದ್ಯಶ್ರೇಷ್ಠ ನೀಡದ್ದು ಅಚ್ಚರಿ ಎನಿಸಿದೆ. ಉಳಿದಂತೆ ಸ್ಪಿನ್ನರ್‌ ಶ್ರೀಚರಣಿ (19ಕ್ಕೆ 4) ಮತ್ತು ನಂದನಿ ಶರ್ಮಾ (22ಕ್ಕೆ 2) ನೆದರ್ಲೆಂಡ್ಸ್‌ ತಂಡಕ್ಕೆ ಕಡಿವಾಣ ಹಾಕಿದರು.