ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Exit: ಪ್ಲೇ ಆಫ್‌ನಿಂದ 5 ತಂಡ ಔಟ್‌; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್‌

ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೋಮವಾರದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯ ಗೆಲ್ಲುತ್ತಿದ್ದರೆ ಪ್ಲೇ ಆಫ್‌ ಅವಕಾಶ ಇತ್ತು. ಆದರೆ ಸೋಲು ಕಂಡ ಕಾರಣ ಟೂರ್ನಿಯಿಂದ ಹೊರಬಿತ್ತು. ಇನ್ನುಳಿದ ಎರಡು ಪಂದ್ಯಗಳು ಕೇವಲ ಔಪಚಾರಿಕ ಎನಿಸಿದೆ.

ಪ್ಲೇ ಆಫ್‌ನಿಂದ 5 ತಂಡ ಔಟ್‌; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್‌

Profile Abhilash BC May 20, 2025 10:00 AM

ಬೆಂಗಳೂರು: ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಅಧಿಕೃತವಾಗಿ ಐಪಿಎಲ್ 2025 ರ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಇನ್ನೊಂದಡೆ 5 ತಂಡಗಳಾದ ಚೆನ್ನೈ, ರಾಜಸ್ಥಾನ, ಹೈದರಾಬಾದ್‌, ಕೋಲ್ಕತಾ ಮತ್ತು ಲಕ್ನೋ ಅಧಿಕೃತವಾಗಿ ನಾಕೌಟ್‌ನಿಂದ(IPL 2025 Exit) ಹೊರಬಿದ್ದಿವೆ. ಇನ್ನುಳಿದ ಒಂದು ನಾಕೌಟ್‌ ಸ್ಥಾನಕ್ಕೆ ಮುಂಬೈ(mumbai indians) ಮತ್ತು ಡೆಲ್ಲಿ(delhi capitals) ನಡುವೆ ತೀವ್ರ ಪೈಪೋಟಿಯಿದೆ.

ಮುಂಬೈ ಇಂಡೊಯನ್ಸ್‌ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. 12 ಪಂದ್ಯಗಳನ್ನಾಡಿರುವ ಡೆಲ್ಲಿ ತಂಡ 13 ಅಂಕ ಹೊಂದಿದೆ. ಈ ಎರಡೂ ತಂಡಕ್ಕೆ ತಲಾ 2 ಪಂದ್ಯ ಬಾಕಿಯಿವೆ. ಇದರಲ್ಲಿ ಒಂದು ಪಂದ್ಯದಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಈ ಎರಡೂ ತಂಡಗಳಿಗೆ ಪಂಜಾಬ್‌ ಸವಾಲು ಎದುರಾಗಲಿವೆ.

ಪ್ಲೇ ಆಫ್‌ ಪ್ರವೇಶ ಪಡೆಯಬೇಕಿದ್ದರೆ ಉಭಯ ತಂಡಗಳಿಗೂ ಎರಡು ಗೆಲುವು ಅತ್ಯಗತ್ಯ. ಮುಂಬೈ ಎರಡು ಪಂದ್ಯಗಳಲ್ಲಿ ಒಂದು ಗೆದ್ದರೆ, ಡೆಲ್ಲಿ ಒಂದು ಪಂದ್ಯ ಸೋತರೆ ಮುಂಬೈ ನೇರವಾಗಿ ಪ್ಲೇ ಆಫ್‌ ಪ್ರವೇಶ ಪಡೆಯಲಿದೆ. ಏಕೆಂದರೆ ಮುಂಬೈಗೆ 16 ಅಂಕ ಆಗಲಿದೆ. ಡೆಲ್ಲಿ ಉಳಿದ ಒಂದು ಪಂದ್ಯ ಗೆದ್ದರೂ 15 ಅಂಕ ಮಾತ್ರ ಸಿಗಲಿದೆ. ಡೆಲ್ಲಿಗೆ ಎರಡು ಪಂದ್ಯ ಗೆಲ್ಲಲೇ ಬೇಕಾದ ಒತ್ತಡವಿದೆ. ಡೆಲ್ಲಿ ಮತ್ತು ಮುಂಬೈ ಬುಧವಾರ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.

ಇದನ್ನೂ ಓದಿ IPL 2025: ಲಸಿತ್ ಮಾಲಿಂಗ ದಾಖಲೆ ಮುರಿದ ಹರ್ಷಲ್‌ ಪಟೇಲ್‌

ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೋಮವಾರದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯ ಗೆಲ್ಲುತ್ತಿದ್ದರೆ ಪ್ಲೇ ಆಫ್‌ ಅವಕಾಶ ಇತ್ತು. ಆದರೆ ಸೋಲು ಕಂಡ ಕಾರಣ ಟೂರ್ನಿಯಿಂದ ಹೊರಬಿತ್ತು. ಇನ್ನುಳಿದ ಎರಡು ಪಂದ್ಯಗಳು ಕೇವಲ ಔಪಚಾರಿಕ ಎನಿಸಿದೆ.