ಕೊಹ್ಲಿಗೆ ಸೂರ್ಯವಂಶಿಯಿಂದ ಅವಮಾನ?; ವೈರಲ್ ವಿಡಿಯೊ ಬಗ್ಗೆ ಹರ್ಷ ಭೋಗ್ಲೆ ಸ್ಪಷ್ಟನೆ!
Vaibhav Sooryavanshi: ವಿಡಿಯೋ ವೈರಲ್ ಆದ ನಂತರ ಹರ್ಷ ಭೋಗ್ಲೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು, ತಾವು ಅಂತಹ ಪ್ರಶ್ನೆಯನ್ನು ಕೇಳಿಲ್ಲ ಅಥವಾ ವೈಭವ್ ಸೂರ್ಯವಂಶಿ ಆ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
Vaibhav Sooryavanshi -
ನವದೆಹಲಿ, ಜೂ. 3: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದಂತೆ, ರಾಜಸ್ಥಾನ್ ರಾಯಲ್ಸ್ (RR) ತಂಡದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರು ವಿರಾಟ್ ಕೊಹ್ಲಿಯ ದಾಖಲೆಯ ಬಗ್ಗೆ ಹೇಳಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ವಿಡಿಯೊದಲ್ಲಿ ಖ್ಯಾತ ಕ್ರಿಕೆಟ್ ನಿರೂಪಕ ಹರ್ಷ ಭೋಗ್ಲೆ ಅವರು ಕೊಹ್ಲಿಯಂತೆ 'ಕಿಂಗ್' ಆಗಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸೂರ್ಯವಂಶಿ ವಿರಾಟ್ ಕೊಹ್ಲಿ ಎಂದರೆ ನನಗೆ ತುಂಬಾ ಇಷ್ಟ. ಆದರೆ ಅವರು ನಿಧಾನಗತಿಯ ಬ್ಯಾಟಿಂಗ್ ಮತ್ತು 'ಸೆಲ್ಫಿಶ್' ಆಟ ನನಗೆ ಇಷ್ಟವಿಲ್ಲ ಎಂದು ಹೇಳಿದ ವೇಳೆ ವೇದಿಕೆ ಮುಂಭಾಗದಲ್ಲಿದ್ದ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಸೇರಿ ಹಲವು ಆಟಗಾರರು ನಗುತ್ತಿರುವುದನ್ನು ನೋಡಬಹುದು. ಆದರೆ ಇದು ನಕಲಿ ಎಐ ವಿಡಿಯೊವಾಗಿದೆ.
ವಿಡಿಯೋ ವೈರಲ್ ಆದ ನಂತರ ಹರ್ಷ ಭೋಗ್ಲೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು, ತಾವು ಅಂತಹ ಪ್ರಶ್ನೆಯನ್ನು ಕೇಳಿಲ್ಲ ಅಥವಾ ವೈಭವ್ ಸೂರ್ಯವಂಶಿ ಆ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಫ್ಘಾನ್ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್ ಅನುಮಾನ; ಔಕಿಬ್ ನಬಿ ತಂಡ ಸೇರ್ಪಡೆ ಸಾಧ್ಯತೆ
'ನಾನು ಮತ್ತು ವೈಭವ್ ಸೂರ್ಯವಂಶಿ ಇರುವ ನಕಲಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ವೈಭವ್ ಅಸಭ್ಯ ಮತ್ತು ದುರಹಂಕಾರಿ ಎಂದು ಚಿತ್ರಿಸಲಾಗಿದೆ. ಆ ಪ್ರಶ್ನೆಯನ್ನು ನಾನು ಅವರಿಗೆ ಕೇಳಿಲ್ಲ ಅಥವಾ ಅಂತಹ ಉತ್ತರವೂ ಅವರಿಂದ ಬಂದಿಲ್ಲ. ಇದು ಕ್ರೂರವಾದ ಕೆಲಸವಾಗಿದೆ, ವಿಶೇಷವಾಗಿ ತನ್ನ ಕೆಲವು ಮಾತುಕತೆಗಳಲ್ಲಿ ಬಹಳ ಗೌರವಯುತವಾಗಿ ವರ್ತಿಸಿದ ಚಿಕ್ಕ ಮಗುವಿನ ವಿರುದ್ಧ ಈ ರೀತಿಯ ವರ್ತನೆ ಸರಿಯಲ್ಲ' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
This is that video 😭😭😭😭😭 https://t.co/UVZaAle5Oz pic.twitter.com/3qZ7Q9jWI0
— Harshit (@knight_17_) June 2, 2026
ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡ ಸೂರ್ಯವಂಶಿ!
ಬ್ಯಾಟಿಂಗ್ ಪ್ರದರ್ಶನದ ಮೂಲಕ ಖ್ಯಾತಿ ಗಳಿಸುತ್ತಿದ್ದಂತೆ, ವೈಭವ್ ಸೂರ್ಯವಂಶಿ(Vaibhav Sooryavanshi) ತನ್ನ ಜಾಹೀರಾತು ಬ್ರ್ಯಾಂಡ್ ಮೌಲ್ಯವನ್ನು ಹಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. 2026 ರ ಐಪಿಎಲ್ ಪ್ರಾರಂಭವಾಗುವ ಮೊದಲು, ಅವರು ತಲಾ 1 ಕೋಟಿ ರೂ. ಪಡೆಯುತ್ತಿದ್ದ ಅವರು, ಅದ್ಭುತ ಪ್ರದರ್ಶನದ ಬಳಿಕ ಈಗ ಪ್ರತಿ ಒಪ್ಪಂದಕ್ಕೆ 1.5 ರಿಂದ 2 ಕೋಟಿ ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷ ಐಪಿಎಲ್ ಆಡದಿರಲು ನಿರ್ಧರಿಸಿದ ಪ್ಯಾಟ್ ಕಮಿನ್ಸ್!
ಉದ್ಯಮ ತಜ್ಞರೊಬ್ಬರು ಎನ್‌ಡಿಟಿವಿ(NDTV)ಗೆ ನೀಡಿದ ಮಾಹಿತಿ ಪ್ರಕಾರ, "ಐಪಿಎಲ್‌ಗೂ ಮುನ್ನ ಸೂರ್ಯವಂಶಿ ಕೆಲವು ಬ್ರ್ಯಾಂಡ್‌ಗಳೊಂದಿಗೆ 1 ಕೋಟಿ ರೂ. ಬೆಲೆಯ ಒಪ್ಪಂದ ಮಾಡಿಕೊಂಡಿದ್ದರು, ಆದರೆ ಈಗ ಅವರು 1.5 ರಿಂದ 2 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದಾರೆ. ಅವರು ಕಾಂಪ್ಲಾನ್ ಮತ್ತು ರೆಡ್ ಬುಲ್ ಜೊತೆ 1 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಈಗ ಅವರು 1.5 ರಿಂದ 2 ಕೋಟಿ ರೂ.ಗಳ ನಿರೀಕ್ಷೆಯಲ್ಲಿದ್ದಾರೆ" ಎಂದು ತಿಳಿಸಿದರು.