ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PKL Season 12: ಮತ್ತೊಮ್ಮೆ ಪ್ರತಿಷ್ಠಿತ ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸದಲ್ಲಿ ಬುಲ್ಸ್‌

ಎರಡು ಬಾರಿಯ ಪಿಕೆಎಲ್ ಪ್ರಶಸ್ತಿ ವಿಜೇತ ತರಬೇತುದಾರ, ಕನ್ನಡಿಗ ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ತಂಡ ಈ ಬಾರಿ ಕಣಕ್ಕಿಳಿಯಲಿದೆ. ಬಿ.ಸಿ. ರಮೇಶ್ 2018-19ರಲ್ಲಿ ಬುಲ್ಸ್ ಪ್ರಶಸ್ತಿ ವಿಜೇತ ಅಭಿಯಾನದ ಸಮಯದಲ್ಲಿ ಸಹಾಯಕ ತರಬೇತುದಾರರಾಗಿದ್ದರು. ಬೆಂಗಾಲ್ ವಾರಿಯರ್ಸ್ (ಸೀಸನ್ 7) ಮತ್ತು ಪುಣೇರಿ ಪಲ್ಟನ್ (ಸೀಸನ್ 10) ತಂಡಗಳನ್ನು ಚಾಂಪಿಯನ್‌ ಮಾಡಿದ ಕೀರ್ತಿ ಇವರಿಗಿದೆ.

ಕಳೆದುಹೋದ ವೈಭವವನ್ನು ಮರಳಿ ಪಡೆಯುವ ಗುರಿಯೊಂದಿಗೆ ಬುಲ್ಸ್ ಕಣಕ್ಕೆ

Abhilash BC Abhilash BC Aug 24, 2025 10:24 PM

ಬೆಂಗಳೂರು: ಪ್ರೊ ಕಬಡ್ಡಿ ಸೀಸನ್ 6ರ ಚಾಂಪಿಯನ್ ಬೆಂಗಳೂರು ಬುಲ್ಸ್(Bengaluru Bulls) ತಂಡ, ಕಳೆದ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿತ್ತು. ಈ ಬಾರಿಯ ಸೀಸನ್ 12ರ(PKL Season 12) ಆವೃತ್ತಿಯಲ್ಲಿ ಹೊಸ ಕೋಚ್‌ ಮತ್ತು ಆಟಗಾರರೊಂದಿಗೆ ಕಣಕ್ಕಿಳಿಯಲಿದ್ದು, ಮತ್ತೊಮ್ಮೆ ಪ್ರತಿಷ್ಠಿತ ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಪಿಕೆಎಲ್ ಸೀಸನ್ 12ಕ್ಕೂ ಮುನ್ನ, ಬುಲ್ಸ್ ತಂಡವು ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ಮುಖ್ಯ ಕೋಚ್ ಜವಾಬ್ದಾರಿಯಿಂದ ಬಿಡುಗಡೆ ಮಾಡಿತು. 11ನೇ ಆವೃತ್ತಿಯಲ್ಲಿ ತಂಡ ಆಡಿದ 22 ಪಂದ್ಯಗಳಲ್ಲಿ ಕೇವಲ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

ಎರಡು ಬಾರಿಯ ಪಿಕೆಎಲ್ ಪ್ರಶಸ್ತಿ ವಿಜೇತ ತರಬೇತುದಾರ, ಕನ್ನಡಿಗ ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ತಂಡ ಈ ಬಾರಿ ಕಣಕ್ಕಿಳಿಯಲಿದೆ. ಬಿ.ಸಿ. ರಮೇಶ್ 2018-19ರಲ್ಲಿ ಬುಲ್ಸ್ ಪ್ರಶಸ್ತಿ ವಿಜೇತ ಅಭಿಯಾನದ ಸಮಯದಲ್ಲಿ ಸಹಾಯಕ ತರಬೇತುದಾರರಾಗಿದ್ದರು. ಬೆಂಗಾಲ್ ವಾರಿಯರ್ಸ್ (ಸೀಸನ್ 7) ಮತ್ತು ಪುಣೇರಿ ಪಲ್ಟನ್ (ಸೀಸನ್ 10) ತಂಡಗಳನ್ನು ಚಾಂಪಿಯನ್‌ ಮಾಡಿದ ಕೀರ್ತಿ ಇವರಿಗಿದೆ.

ಕಳೆದ ಹರಾಜಿನಲ್ಲಿ ತಂಡ ಅನೇಕ ಯುವ ಆಟಗಾರರನ್ನು ಖರೀದಿಸಿ ಬಲಿಷ್ಠವಾಗಿ ರಚಿಸಿದೆ. ಬುಲ್ಸ್‌ ತಂಡ ತನ್ನ ಆ.29ರಂದು ಪುಣೇರಿ ಪಲ್ಟಾನ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಲೀಗ್ ಹಂತದಲ್ಲಿ 108 ಪಂದ್ಯಗಳನ್ನು ಒಳಗೊಂಡಿದ್ದು, ಪ್ರತಿ ತಂಡವು 18 ಪಂದ್ಯಗಳನ್ನು ಆಡಲಿದೆ. ಕಳೆದ ಆವೃತ್ತಿಯಲ್ಲಿ ಈ ಹಿಂದೆ ಲೀಗ್ ಹಂತದಲ್ಲಿ ಪ್ರತಿ ತಂಡ 22 ಪಂದ್ಯಗಳನ್ನು ಆಡುತ್ತಿತ್ತು. ಈ ಹಿಂದೆ ಪ್ಲೇಆಫ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಗೋಲ್ಡನ್ ರೈಡ್ ಸ್ವರೂಪ ಸೇರಿದಂತೆ ಸಮಗ್ರ ಟೈ-ಬ್ರೇಕರ್ ನಿಯಮ ವ್ಯವಸ್ಥೆಯನ್ನು ಎಲ್ಲಾ ಲೀಗ್ ಹಂತದ ಪಂದ್ಯಗಳಿಗೂ ಬಳಕೆ ಮಾಡಲಾಗುವುದು.

ಇದನ್ನೂ ಓದಿ PKL Season 2025: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹೊಸ ರೂಲ್ಸ್‌!

ಗೆಲ್ಲುವ ತಂಡಕ್ಕೆ 2, ಸೋಲುವ ತಂಡಕ್ಕೆ 0 ಅಂಕ. ಈ ಹಿಂದಿನ ಆವೃತ್ತಿಗಳಲ್ಲಿ 7 ಅಥವಾ ಅದಕ್ಕಿಂತ ಕಡಿಮೆ ಅಂಕಗಳಿಂದ ಸೋಲುವ ತಂಡಕ್ಕೆ 1 ಅಂಕ ಸಿಗುತ್ತಿತ್ತು. ಈ ನಿಯಮ ರದ್ದುಗೊಳಿಸಲಾಗಿದೆ. ಪಂದ್ಯ ಟೈ ಆದರೆ, 5 ನಿಮಿಷಗಳ ಟೈ ಬ್ರೇಕರ್ ಸುತ್ತು ಆಡಿಸಲಾಗುತ್ತದೆ. ಪ್ರತಿ ತಂಡ 7 ಆಟಗಾರರನ್ನಷ್ಟೇ ಬಳಸಬಹುದು.

ಐವರು ರೈಡರ್‌ಗಳು ತಮ್ಮ ಹೆಸರನ್ನು ಮೊದಲೇ ತಿಳಿಸಬೇಕು. ಪ್ರತಿ ರೈಡ್ ಕೂಡ ಡು ಆರ್ ಡೈ ರೈಡ್ ಆಗಿರಲಿದೆ. ಟೈ ಬ್ರೇಕರ್‌ನಲ್ಲೂ ಅಂಕಗಳು ಸಮಗೊಂಡರೆ, ಆಗ 'ಗೋಲ್ಡನ್ ರೈಡ್' ಚಾಲ್ತಿಗೆ ಬರಲಿದೆ. ಇಲ್ಲಿ ಪ್ರತಿ ತಂಡಕ್ಕೂ ತಲಾ ಒಂದು ರೈಡ್ ನೀಡಲಾಗುತ್ತದೆ. ಹೆಚ್ಚು ಅಂಕ ಗಳಿಸುವ ತಂಡಕ್ಕೆ ಜಯ. ಇಲ್ಲೂ ತಂಡಗಳು ಸಮಬಲ ಸಾಧಿಸಿದರೆ, ಟಾಸ್ ಮೂಲಕ ಫಲಿತಾಂಶ ನಿರ್ಧಾರವಾಗಲಿದೆ.