ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಧಾನಗತಿ ಓವರ್‌; ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 12 ಅಂಕ ಕಳೆದುಕೊಂಡ ಇಂಗ್ಲೆಂಡ್‌

WTC Points Table: 12 ಅಂಕ ಕಡಿತದ ನಂತರ ಇಂಗ್ಲೆಂಡ್‌ ಪ್ರಸ್ತುತ ವಿಶ್ವ ಟೆಸ್ಟ್‌ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಭಾರತ 6ನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 7 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 12 ಅಂಕ ಕಳೆದುಕೊಂಡ ಇಂಗ್ಲೆಂಡ್‌

England vs New Zealand 2nd Test -

Abhilash BC
Abhilash BC Jun 22, 2026 12:31 PM

ಲಂಡನ್‌, ಜೂ.22: ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್(England vs New Zealand 2nd Test) ವಿರುದ್ಧ ಸೋತ ನಂತರ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಓವಲ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬರೋಬ್ಬರಿ 12 ಅಂಕ(WTC Points Table)ಗಳನ್ನು ಕಡಿತಗೊಳಿಸಲಾಗಿದೆ ಮತ್ತು ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ.

WTC ಸರಣಿಯಲ್ಲಿ ಇಂಗ್ಲೆಂಡ್‌ನ ಕಳಪೆ ಪ್ರದರ್ಶನ ಮುಂದುವರೆದಿದ್ದು, 12 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತಿದೆ. ಕೇವಲ ನಾಲ್ಕು ಗೆಲುವುಗಳು ಮಾತ್ರ ಗಳಿಸಿದೆ. ಅಂಕಗಳಲ್ಲಿ ಕಡಿತಗೊಂಡಿರುವುದರಿಂದ ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

ಇದರೊಂದಿಗೆ ಇಂಗ್ಲೆಂಡ್‌ನ WTC ಅಂಕಗಳನ್ನು 50 ರಿಂದ 38 ಕ್ಕೆ ಇಳಿಸಲಾಯಿತು. ತಂಡ ನಿಧಾನಗತಿಯ ಓವರ್ ದರದಿಂದಾಗಿ ಅಂಕಗಳನ್ನು ಕಳೆದುಕೊಂಡ ಎರಡನೇ ನಿದರ್ಶನವಾಗಿದೆ. ಜುಲೈ 2025 ರಲ್ಲಿ ಭಾರತದ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಎರಡು ಅಂಕಗಳನ್ನು ಕಡಿತಗೊಳಿಸಲಾಗಿತ್ತು.

12 ಅಂಕ ಕಡಿತದ ನಂತರ ಇಂಗ್ಲೆಂಡ್‌ ಪ್ರಸ್ತುತ ವಿಶ್ವ ಟೆಸ್ಟ್‌ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಭಾರತ 6ನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 7 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ʼಬೇಕಾದರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆʼ; ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಕೊಹ್ಲಿ ಸ್ಪಷ್ಟನೆ

ನಾಟಿಂಗ್‌ಹ್ಯಾಮ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲು ಖಾಯಂ ನಾಯಕ ಬೆನ್ ಸ್ಟೋಕ್ಸ್ ಮರಳಲಿದ್ದಾರೆ. ಲಂಡನ್ ನೈಟ್‌ಕ್ಲಬ್‌ನಲ್ಲಿ ವಿವಾದದ ನಂತರ ಆಲ್‌ರೌಂಡರ್ ಸ್ಟೋಕ್ಸ್ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಎರಡನೇ ಟೆಸ್ಟ್‌ನಿಂದ ಅಮಾನತುಗೊಳಿಸಲಾಗಿತ್ತು.

“ನೈಟ್‌ಕ್ಲಬ್‌ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ಬಗ್ಗೆ ಆಟಗಾರರ ಮೇಲೆ ಯಾವುದೇ ಆರೋಪ ಹೊರಿಸಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಬೆನ್‌ ಸ್ಟೋಕ್ಸ್‌ ಈ ಘರ್ಷಣೆಯಲ್ಲಿ ಭಾಗಿಯಾಗಿರಲಿಲ್ಲ ಮತ್ತು ನಡೆದ ಯಾವುದೇ ಘಟನೆಯನ್ನು ನೇರವಾಗಿ ನೋಡಿರಲಿಲ್ಲ. ಹಾಗೆಯೇ, ಇಸಿಬಿ ಪರಿಶೀಲಿಸಿದ ಸಾಕ್ಷ್ಯಗಳ ಪ್ರಕಾರ ಗಸ್‌ ಅಟ್ಕಿನ್ಸನ್‌ ಯಾವುದೇ ಪ್ರಚೋದನೆಯಿಲ್ಲದೆ ನಡೆದ ದಾಳಿಗೆ ಬಲಿಯಾಗಿದ್ದರು. ಅಲ್ಲದೆ, ಎರಡೂ ಸಂದರ್ಭಗಳಲ್ಲಿ ಅವರು ಯಾವುದೇ ರೀತಿಯ ಪ್ರತಿದಾಳಿ ನಡೆಸಿಲ್ಲ ಎಂಬುದು ದೃಢಪಟ್ಟಿದೆ,” ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ

ಬೆನ್‌ ಸ್ಟೋಕ್ಸ್‌ (ನಾಯಕ), ರೆಹಾನ್‌ ಅಹ್ಮದ್‌, ಜೋಫ್ರಾ ಆರ್ಚರ್‌, ಗಸ್‌ ಅಟ್ಕಿನ್ಸನ್‌, ಹ್ಯಾರಿ ಬ್ರೂಕ್‌, ಜೋರ್ಡನ್‌ ಕಾಕ್ಸ್‌, ಬೆನ್‌ ಡಕೆಟ್‌, ಮ್ಯಾಥ್ಯೂ ಫಿಷರ್‌, ಎಮಿಲಿಯೊ, ಒಲ್ಲಿ ಜಾನ್ಸನ್‌, ಜೋ ರೂಟ್‌, ಜೇಮಿ ಸ್ಮಿತ್‌, ಜಾಶ್‌ ಟಾಂಗ್‌.