ಫಿಫಾ ವಿಶ್ವಕಪ್ ಗೆದ್ದ ಸ್ಪೇನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
Fifa World Cup final prize money: 106ನೇ ನಿಮಿಷದಲ್ಲಿ ಮಾರ್ಟಿನ್ ಜುಬಿಮೆಂಡಿ ನೀಡಿದ ಪಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡರ್ ಮೂಲಕ ಬಾಕ್ಸ್‌ನ ಮಧ್ಯಭಾಗಕ್ಕೆ ತಲುಪಿಸಿದರು. ಯಾವುದೇ ರಕ್ಷಣಾ ಆಟಗಾರರ ಕಣ್ಗಾವಲಿಲ್ಲದೆ ನಿಂತಿದ್ದ ಫೆರಾನ್ ಟೊರೆಸ್, ಮೊದಲ ಸ್ಪರ್ಶದಲ್ಲೇ ಅದ್ಭುತ ಫಿನಿಶಿಂಗ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ಸ್ಪೇನ್‌ಗೆ 1-0 ಮುನ್ನಡೆ ತಂದುಕೊಟ್ಟರು.
Spain lift the FIFA World Cup trophy -
ನ್ಯೂಜೆರ್ಸಿ, ಜು. 20: ಫಿಫಾ ವಿಶ್ವಕಪ್ ಫೈನಲ್(FIFA World Cup 2026 Final)ನಲ್ಲಿ ಅರ್ಜೆಂಟೀನಾ ವಿರುದ್ಧ ಗೆಲುವು ಸಾಧಿಸಿದ ಸ್ಪೇನ್ ತಂಡವು ಎರಡನೇ ಬಾರಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ. ಜತೆಗೆ ಭಾರೀ ಬಹುಮಾನ ಮೊತ್ತವನ್ನು ಪಡೆದುಕೊಂಡಿದೆ. ವಿಶ್ವಕಪ್ ಬಹುಮಾನ(Fifa World Cup final prize money) ಮೊತ್ತದ ವಿವರ ಹೀಗಿದೆ.
80,000ಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್ ತಂಡವು ಬರೋಬ್ಬರಿ 481 ಕೋಟಿ ರೂ. ನಗದು ಪುರಸ್ಕಾರ ತನ್ನದಾಗಿಸಿಕೊಂಡಿತು. ರನ್ನರ್ಸ್ ಅಪ್ ಅರ್ಜೆಂಟೀನಾ 318 ಕೋಟಿರೂ. ಬಹುಮಾನ ಗೆದ್ದುಕೊಂಡಿತು. ಫ್ರಾನ್ಸ್ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವು 279 ಕೋಟಿ, ನಾಲ್ಕನೇ ಸ್ಥಾನ ಪಡೆದ ಫ್ರಾನ್ಸ್ 259 ಕೋಟಿ ನಗದು ಪಡೆಯಿತು.
ಟೂರ್ನಿಯುದ್ಧಕ್ಕೂ ಸ್ಪೇನ್ ತಂಡವು ತನ್ನ ಬಲಿಷ್ಠ ರಕ್ಷಣಾತ್ಮಕ ಪ್ರದರ್ಶನದ ಮೂಲಕ ಗಮನಸೆಳೆದಿತ್ತು. ತಂಡವು ಇಡೀ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಗೋಲು ಬಿಟ್ಟುಕೊಟ್ಟಿತ್ತು. ಫೈನಲ್ ಪಂದ್ಯದಲ್ಲಿಯೂ ಅರ್ಜೆಂಟೀನಾ ತಂಡದ ಫಾರ್ವರ್ಡ್ ಆಟಗಾರರಿಗೆ ಭೇದಿಸಲು ಅಸಾಧ್ಯವಾದ 'ಚಕ್ರವ್ಯೂಹ'ವನ್ನು ರಚಿಸಿ ಪಂದ್ಯವನ್ನು ಗೆದ್ದು ಬೀಗಿತು.
Congratulations to Spain, @FIFAWorldCup 2026 winners! 👏🇪🇸 pic.twitter.com/YjMqpcndR0
— FIFA (@FIFAcom) July 19, 2026
ತಂಡದ ಗೋಲ್‌ಕೀಪರ್ ಉನೈ ಸಿಮೋನ್ ಅವರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಬಾರಿ ಒಂದೂ ಗೋಲು ಕೂಡ ಬಿಟ್ಟುಕೊಡದೆ 'ಗೋಲ್ಡನ್ ಗ್ಲೌವ್' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ, ಸತತವಾಗಿ ಟೂರ್ನಿಯಲ್ಲಿ ಸತತವಾಗಿ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಗಳಿಸಲು ಬಿಡದೆ ಸಾರ್ವಕಾಲಿಕ ವಿಶ್ವಕಪ್ ದಾಖಲೆ ಬರೆದರು.
106ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸ್ಪೇನ್‌ಗೆ ಫಿಫಾ ವಿಶ್ವಕಪ್ ಗೆದ್ದುಕೊಟ್ಟ ಫೆರಾನ್ ಟೊರೆಸ್ ಯಾರು?
106ನೇ ನಿಮಿಷದಲ್ಲಿ ಮಾರ್ಟಿನ್ ಜುಬಿಮೆಂಡಿ ನೀಡಿದ ಪಾಸ್ ಅನ್ನು ನಿಕೊ ವಿಲಿಯಮ್ಸ್ ಹೆಡರ್ ಮೂಲಕ ಬಾಕ್ಸ್‌ನ ಮಧ್ಯಭಾಗಕ್ಕೆ ತಲುಪಿಸಿದರು. ಯಾವುದೇ ರಕ್ಷಣಾ ಆಟಗಾರರ ಕಣ್ಗಾವಲಿಲ್ಲದೆ ನಿಂತಿದ್ದ ಫೆರಾನ್ ಟೊರೆಸ್, ಮೊದಲ ಸ್ಪರ್ಶದಲ್ಲೇ ಅದ್ಭುತ ಫಿನಿಶಿಂಗ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ಸ್ಪೇನ್‌ಗೆ 1-0 ಮುನ್ನಡೆ ತಂದುಕೊಟ್ಟರು.
ವಿಶೇಷವೆಂದರೆ, ಫಿಫಾ ವಿಶ್ವಕಪ್ 2026ರಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ಇದು ಮೊದಲ ಗೋಲಾಗಿತ್ತು. ಆದರೆ ಇದೇ ಗೋಲು ಸ್ಪೇನ್‌ಗೆ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟ ಕಾರಣ, ಫುಟ್ಬಾಲ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ದಾಖಲಾಗುವಂತಾಯಿತು.
ಪ್ರಶಸ್ತಿ ಮೊತ್ತದ ಮಾಹಿತಿ
ಚಾಂಪಿಯನ್ಸ್ ಸ್ಪೇನ್: ₹481 ಕೋಟಿ
ರನ್ನರ್ಸ್-ಅಪ್ ಅರ್ಜೆಂಟೀನಾ: ₹318 ಕೋಟಿ
ಮೂರನೇ ಸ್ಥಾನ ಇಂಗ್ಲೆಂಡ್: ₹279 ಕೋಟಿ
ನಾಲ್ಕನೇ ಸ್ಥಾನ ಫ್ರಾನ್ಸ್: 259 ಕೋಟಿ