ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Finn Allen: ವಿಸ್ಫೋಟಕ ಬ್ಯಾಟಿಂಗ್‌ ನಡೆಸಿ ವಿಶ್ವ ದಾಖಲೆ ಬರೆದ ಆರ್‌ಸಿಬಿ ಮಾಜಿ ಆಟಗಾರ

ಎಂಎಲ್​ಸಿ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಫಿನ್​ ಅಲೆನ್ ಕೇವಲ​ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್​ ಸಹಿತ 151 ರನ್​ ಸಿಡಿಸಿದರು. ಈ ಮೂಲಕ 5 ವಿಕೆಟ್​ಗೆ 269 ರನ್​ ಕಲೆಹಾಕಿದ ಸ್ಯಾನ್​ ಫ್ರಾನ್ಸಿಸ್ಕೋ ತಂಡ ವಾಷಿಂಗ್ಟನ್​ ಫ್ರೀಡಂ ವಿರುದ್ಧ 123 ರನ್​ಗಳಿಂದ ಗೆದ್ದು ಬೀಗಿತು.

ವಿಸ್ಫೋಟಕ ಬ್ಯಾಟಿಂಗ್‌ ನಡೆಸಿ ವಿಶ್ವ ದಾಖಲೆ ಬರೆದ ಆರ್‌ಸಿಬಿ ಮಾಜಿ ಆಟಗಾರ

Profile Abhilash BC Jun 13, 2025 10:29 PM

ಓಕ್​ಲ್ಯಾಂಡ್​: ನ್ಯೂಜಿಲೆಂಡ್​ನ ಫಿನ್​ ಅಲೆನ್ ಅವರು​ ಅಮೆರಿಕದ ಮೇಜರ್​ ಲೀಗ್​ ಕ್ರಿಕೆಟ್(MLC 2025)​ (ಎಂಎಲ್​ಸಿ) ಟಿ20 ಲೀಗ್​ನಲ್ಲಿ ಸ್ಯಾನ್​ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್​ ತಂಡದ ಪರ ಒಂದೇ ಇನಿಂಗ್ಸ್​ನಲ್ಲಿ 19 ಸಿಕ್ಸರ್​ ಸಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಫಿನ್​ ಅಲೆನ್​ ಅವರನ್ನು 2022ರ ಐಪಿಎಲ್ ಮಿನಿ ಹರಾಜಿನಲ್ಲಿ 80 ಲಕ್ಷ ರೂಪಾಯಿ ನೀಡಿ ಆರ್​ಸಿಬಿ ತಂಡ ಖರೀದಿಸಿತ್ತು. ಆದರೆ ಐಪಿಎಲ್ 2 ಆವೃತ್ತಿಗಳಲ್ಲಿ ಪದಾರ್ಪಣೆಯ ಅವಕಾಶವೇ ದೊರೆಯಲಿಲ್ಲ. ಇದೀಗ ಟಿ20 ಲೀಗ್‌ನಲ್ಲಿ ತಮ್ಮ ಬ್ಯಾಟಿಂಗ್‌ ಪ್ರತಾಪ ತೋರಿಸಿರುವ ಅವರಿಗೆ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ.

ಎಂಎಲ್​ಸಿ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಫಿನ್​ ಅಲೆನ್ ಕೇವಲ​ 51 ಎಸೆತಗಳಲ್ಲಿ 5 ಬೌಂಡರಿ, 19 ಸಿಕ್ಸರ್​ ಸಹಿತ 151 ರನ್​ ಸಿಡಿಸಿದರು. ಈ ಮೂಲಕ 5 ವಿಕೆಟ್​ಗೆ 269 ರನ್​ ಕಲೆಹಾಕಿದ ಸ್ಯಾನ್​ ಫ್ರಾನ್ಸಿಸ್ಕೋ ತಂಡ ವಾಷಿಂಗ್ಟನ್​ ಫ್ರೀಡಂ ವಿರುದ್ಧ 123 ರನ್​ಗಳಿಂದ ಗೆದ್ದು ಬೀಗಿತು.

ಇದನ್ನೂ ಓದಿ IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

49 ಎಸೆತಗಳಲ್ಲೇ 150 ರನ್​ ಪೂರೈಸಿದ ಅಲೆನ್‌ ಟಿ20ಯಲ್ಲಿ ಅತಿವೇಗದ 150 ರನ್​ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಡಿವಾಲ್ಡ್​ ಬ್ರೆವಿಸ್​ ಹೆಸರಿನಲ್ಲಿತ್ತು. ಬ್ರೆವಿಸ್‌ 2022ರಲ್ಲಿ 52 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.