ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ-ಎಂಎಸ್‌ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟರ್‌ ಆರಿಸಿದ ದಿನೇಶ್‌ ಕಾರ್ತಿಕ್‌!

Dinesh karthik on MS Dhini-Virat Kohli: ಪ್ರಸ್ತುತ 2025ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ನಡೆಯುತ್ತಿದೆ. ಇದರ ನಡುವರೆ ಕ್ರಿಕ್‌ಬಝ್‌ ಜತೆಗಿನ ಸಂಭಾಷಣೆಯಲ್ಲಿ ಭಾಗವಹಿಸಿದ್ದ ದಿನೇಶ್‌ ಕಾರ್ತಿಕ್‌, ವಿರಾಟ್‌ ಕೊಹ್ಲಿ ಹಾಗೂ ಎಂಎಸ್‌ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟ್ಸ್‌ಮನ್‌ ಅನ್ನು ಆರಿಸಿ ಎಂದು ಕೇಳಲಾಯಿತು. ಇದಕ್ಕೆ ಪ್ರತಕ್ರಿಯಿಸಿದ ದಿನೇಶ್‌ ಕಾರ್ತಿಕ್‌, ವಿರಾಟ್‌ ಕೊಹ್ಲಿಯನ್ನು ಆರಿಸಿದ್ದಾರೆ.

ಧೋನಿ-ಕೊಹ್ಲಿ ನಡುವೆ ಉತ್ತಮ ಟಿ20ಐ ಬ್ಯಾಟರ್‌ ಆರಿಸಿದ ಕಾರ್ತಿಕ್‌!

ವಿರಾಟ್‌ ಕೊಹ್ಲಿ-ಎಂಎಸ್‌ ಧೋನಿ ನಡುವೆ ಶ್ರೇಷ್ಠ ಟಿ20 ಬ್ಯಾಟರ್‌ ಆರಿಸಿದ ಡಿ.ಕೆ. -

Profile Ramesh Kote Sep 16, 2025 4:54 PM

ನವದೆಹಲಿ: ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ (Dinesh Karthgik) ಅವರು ಸಾರ್ವಕಾಲಿಕ ಶ್ರೇಷ್ಠ ಟಿ20ಐ ಬ್ಯಾಟ್ಸ್‌ಮನ್‌ ಆಗಿ ವಿರಾಟ್‌ ಕೊಹ್ಲಿಯನ್ನು ಆರಿಸಿದ್ದಾರೆ. ಕ್ರಿಕ್‌ಬಝ್‌ ಸಂಭಾಷಣೆಯಲ್ಲಿ ಭಾಗವಹಿಸಿದ್ದ ದಿನೇಶ್‌ ಕಾರ್ತಿಕ್‌ಗೆ (Dinesh karthik) ವಿರಾಟ್‌ ಕೊಹ್ಲಿ ಹಾಗೂ ಎಂಎಸ್‌ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟ್ಸ್‌ಮನ್‌ ಅನ್ನು ಆರಿಸಲು ಕೇಳಲಾಯಿತು. ಇದಕ್ಕೆ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌, ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ ಯನ್ನು ಆರಿಸಿ ಮಾಜಿ ನಾಯಕ ಎಂಎಸ್‌ ಧೋನಿಯನ್ನು (MS Dhoni) ಕಡೆಗಣಿಸಿದ್ದಾರೆ.

ಮೂರನೇ ಸುತ್ತಿನಲ್ಲಿ ದಿನೇಶ್‌ ಕಾರ್ತಿಕ್‌ ಅವರಿಗೆ ಉತ್ತಮ ಟಿ20ಐ ಬ್ಯಾಟ್ಸ್‌ಮನ್‌ ಅನ್ನು ಆರಿಸಲು ನಾಲ್ವರು ಆಟಗಾರರನ್ನು ನೀಡಲಾಯಿತು. ಈ ವೇಳೆ ಎಂಎಸ್‌ ಧೋನಿ ಬದಲಿಗೆ ವಿರಾಟ್‌ ಕೊಹ್ಲಿ ಮತ್ತು ಕ್ರಿಸ್‌ ಗೇಲ್‌ ಬದಲಿಗೆ ಎಬಿ ಡಿವಿಲಿಯರ್ಸ್‌ ಅವರನ್ನು ದಿನೇಶ್‌ ಕಾರ್ತಿಕ್‌ ಆಯ್ಕೆ ಮಾಡಿದ್ದಾರೆ. ಇನ್ನು ಅಂತಿಮ ಸುತ್ತಿನಲ್ಲಿ ಆರ್‌ಸಿಬಿ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಅವರ ಬದಲು ವಿರಾಟ್‌ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ವಿರಾಟ್‌ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಟಿ20ಐ ಬ್ಯಾಟ್ಸ್‌ಮನ್‌ ಆಗಿ ಆರಿಸಿದ್ದಾರೆ.

Asia Cup 2025: ಭಾರತ ಸೂಪರ್‌-4ಗೆ ಎಂಟ್ರಿ; ಪಾಕ್‌ ಲೆಕ್ಕಾಚಾರ ಹೇಗಿದೆ?

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಹಿತ 76 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಭಾರತ ತಂಡ, ಗೆದ್ದು ಎರಡನೇ ಬಾರಿ ಟಿ20 ವಿಶ್ವಕಪ್‌ ಅನ್ನು ಗೆದ್ದುಕೊಂಡಿತ್ತು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರು 125 ಪಂದ್ಯಗಳಿಂದ 48.69ರ ಸರಾಸರಿ ಹಾಗೂ 137.04ರ ಸ್ಟ್ರೈಕ್‌ ರೇಟ್‌ನಲ್ಲಿ 4188 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 36ರ ಪ್ರಾಯದ ಬ್ಯಾಟ್ಸ್‌ಮನ್‌ ಒಂದು ಶತಕ ಹಾಗೂ 38 ಅರ್ಧಶತಕಗಳನ್ನು ಬಾರಿಸಿದ್ದಾರೆ. 2022ರ ಏಷ್ಯಾ ಕಪ್‌ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್‌ಗಳನ್ನು ಕಲೆ ಹಾಕಿದ್ದು, ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

Asia Cup 2025: ಮ್ಯಾಚ್ ರೆಫರಿ ಬದಲಾವಣೆ; ಪಿಸಿಬಿ ಬೇಡಿಕೆ ತಿರಸ್ಕರಿಸಿದ ಐಸಿಸಿ

ವಿರಾಟ್ ಕೊಹ್ಲಿಯನ್ನು ದಿನೇಶ್ ಕಾರ್ತಿಕ್ ಶ್ರೇಷ್ಠ ಟಿ20ಐ ಬ್ಯಾಟ್ಸ್‌ಮನ್ ಎಂದು ಹೆಸರಿಸಿದ್ದರೂ, ಭಾರತದ ಮಾಜಿ ನಾಯಕ ಫ್ರಾಂಚೈಸಿ ಕ್ರಿಕೆಟ್‌ನಲ್ಲಿಯೂ ಅವರು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತರಾಗಿದ್ದರೂ, ಕೊಹ್ಲಿ 2025ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಚೊಚ್ಚಲ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಕಳೆದ ಸೀಸನ್‌ನಲ್ಲಿ ವಿರಾಟ್‌ ಕೊಹ್ಲಿ 15 ಇನಿಂಗ್ಸ್‌ಗಳಲ್ಲಿ 54.75ರ ಸರಾಸರಿ ಮತ್ತು 144.71ರ ಸ್ಟ್ರೈಕ್ ರೇಟ್‌ನಲ್ಲಿ 657 ರನ್ ಗಳಿಸಿದ್ದರು. ಇದರಲ್ಲಿ ಎಂಟು ಅರ್ಧಶತಕಗಳು ಸೇರಿವೆ. ಒಟ್ಟಾರೆಯಾಗಿ, ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರು 267 ಪಂದ್ಯಗಳಲ್ಲಿ 39.54ರ ಸರಾಸರಿ ಮತ್ತು 132.85 ಸ್ಟ್ರೈಕ್ ರೇಟ್‌ನಲ್ಲಿ 8,661 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 63 ಅರ್ಧಶತಕಗಳು ಮತ್ತು ಎಂಟು ಶತಕಗಳನ್ನು ಬಾರಿಸಿದ್ದಾರೆ.