ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ: ಕೋಚ್ ಗೌತಮ್ ಗಂಭೀರ್ ಹೇಳಿಕೆ
hardik pandya fitness update: ಅಕ್ಟೋಬರ್ 6 ರಿಂದ 11 ರವರೆಗೆ ಪುದುಚೇರಿಯಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ, ಫಿಟ್‌ನೆಸ್ ಅನುಮೋದನೆಗೆ ಒಳಪಟ್ಟು ಹಾರ್ದಿಕ್ ಅವರನ್ನು ಭಾರತದ 'ಎ' ತಂಡದಲ್ಲಿ ಸೇರಿಸಲಾಗಿದೆ.
Hardik Pandya -
ನವದೆಹಲಿ, ಸೆ.18: ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದರೂ ಏಕದಿನ ಮಾದರಿಯಲ್ಲಿ ತಮ್ಮ ಹತ್ತು ಓವರ್‌ಗಳ ಬೌಲಿಂಗ್ ಕೋಟಾವನ್ನು ಪೂರೈಸಲು ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಗುರುವಾರ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನರಾಗಮನ ಮಾಡುವ ಮುನ್ನ ಹೆಚ್ಚಿನ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು. ಮಾತ್ರವಲ್ಲದೆ 2027ರ ಏಕದಿನ ವಿಶ್ವಕಪ್‌ಗಾಗಿ ತಂಡದ ಯೋಜನೆಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಬೆಳವಣಿಗೆಯೂ ಒಂದು ಪ್ರಮುಖ ಭಾಗವಾಗಿದೆ ಎಂದು ಹೇಳಿದರು.
ಸೀಮಿತ ಓವರ್‌ಗಳ ತಂಡದ ಪ್ರಮುಖ ಆಟಗಾರರಾಗಿರುವ ಪಾಂಡ್ಯ ಅವರ ಫಿಟ್‌ನೆಸ್ ಮತ್ತು ಕಾರ್ಯಭಾರದ ಭಾಗವಾಗಿ ಅವರ ಮೇಲೆ ನಿಗಾ ಇಡಲಾಗಿದೆ. ಅವರನ್ನು ಆತುರದಿಂದ ತಂಡಕ್ಕೆ ಮರಳಿ ಕರೆ ತರುವುದಿಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದರು.
"ಕೆಲವೊಮ್ಮೆ ನಾವು ಆಡುವ ಹನ್ನೊಂದರ ಬಳಗದಲ್ಲಿ ಅವರಿಬ್ಬರನ್ನೂ ಆಡಿಸಬಹುದು. ಆದರೆ, ಸದ್ಯಕ್ಕೆ ಹಾರ್ದಿಕ್‌ಗೆ 10 ಓವರ್‌ಗಳ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಮತ್ತು ಐಪಿಎಲ್ ನಂತರ ಅವರು ಹೆಚ್ಚು ಕ್ರಿಕೆಟ್ ಆಡಿಲ್ಲ," ಎಂದು ಗಂಭೀರ್ ಹೇಳಿದರು.
ಕೀರನ್ ಪೊಲಾರ್ಡ್ ದಾಖಲೆ ಮುರಿದ ಜೋಸ್ ಬಟ್ಲರ್
"ನಾವು ಪಾಂಡ್ಯರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತರಾತುರಿಯಲ್ಲಿ ತಳ್ಳಲು ಬಯಸುವುದಿಲ್ಲ, ಏಕೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರನ ದೇಹದ ಮೇಲೆ ವಿಪರೀತ ಒತ್ತಡವನ್ನು ಹೇರಬಲ್ಲದು. ಹೀಗಾಗಿ, ಅವರು 'ಇಂಡಿಯಾ ಎ' ಸರಣಿಗಳಲ್ಲಿ ಆಡಿದರೆ, ಸಹಜವಾಗಿಯೇ ಅವನಿಗೆ ಆಟದ ಅಭ್ಯಾಸವೂ ಸಿಗುತ್ತದೆ," ಎಂದು ಗಂಭೀರ್ ಹೇಳಿದರು.
ಪಾಂಡ್ಯ ಸಂಪೂರ್ಣ ಫಿಟ್‌ನೆಸ್ ಪಡೆಯದ ಕಾರಣ 2027ರ ವೇಳೆಗೆ ತಂಡದಲ್ಲಿ ಮತೋರ್ವ ಆಲ್‌ರೌಂಡರ್ ಸಿದ್ಧ ಪಡಿಸುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ರೆಡ್ಡಿಯನ್ನು ಏಷ್ಯನ್ ಗೇಮ್ಸ್ ತಂಡದಿಂದ ಕೈಬಿಟ್ಟು ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಸೇರಿಸಿಕೊಂಡಂತಿದೆ.
ಅಕ್ಟೋಬರ್ 6 ರಿಂದ 11 ರವರೆಗೆ ಪುದುಚೇರಿಯಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ, ಫಿಟ್‌ನೆಸ್ ಅನುಮೋದನೆಗೆ ಒಳಪಟ್ಟು ಹಾರ್ದಿಕ್ ಅವರನ್ನು ಭಾರತದ 'ಎ' ತಂಡದಲ್ಲಿ ಸೇರಿಸಲಾಗಿದೆ. 50 ಓವರ್‌ಗಳ ಕ್ರಿಕೆಟ್‌ಗೆ ಅನುಗುಣವಾಗಿ ಅವರ ಕೆಲಸದೊತ್ತಡವನ್ನು ನಿರ್ವಹಿಸುವ ಪ್ರಕ್ರಿಯೆಯ ಭಾಗವಾಗಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಭಾರತದ ಏಕದಿನ ತಂಡದಿಂದ ಅವರನ್ನು ಕೈಬಿಡಲಾಗಿತ್ತು.