ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೆಳತಿಯ ಹುಟ್ಟುಹಬ್ಬದಂದು ರೋಮ್ಯಾಂಟಿಕ್ ಪೋಸ್ಟ್‌ ಹಂಚಿಕೊಂಡ ಪಾಂಡ್ಯ

Hardik Pandya girlfriend birthday post: ಪ್ರೇಮಿಗಳ ದಿನದಂದು ಪಾಂಡ್ಯ ತನ್ನ ಗೆಳತಿ ಮಹೀಕಾಯ ನೆನಪಿಗಾಗಿ ತನ್ನ ಕುತ್ತಿಗೆಯ ಹಿಂಭಾಗದಲ್ಲಿ ಎರಡು ಚಿರತೆಗಳ ಜತೆಗೆ 'M' ಅಕ್ಷರವನ್ನು ಹೊಂದಿರುವ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಈ ಚಿತ್ರಣವು ಅವರ ಪ್ರೀತಿ ಮನಸ್ಥಿತಿ ಮತ್ತು ಪರಸ್ಪರ ಅವಲಂಬನೆಯನ್ನು ಪ್ರತಿಬಿಂಬಿಸುತ್ತದೆ.

ಗೆಳತಿಯ ಹುಟ್ಟುಹಬ್ಬದಂದು ರೋಮ್ಯಾಂಟಿಕ್ ಪೋಸ್ಟ್‌ ಹಂಚಿಕೊಂಡ ಪಾಂಡ್ಯ

Hardik Pandya and Maheika Sharma -

Abhilash BC
Abhilash BC Feb 19, 2026 3:23 PM

ಮುಂಬಯಿ, ಫೆ.19: ಟೀಮ್‌ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹೀಕಾ ಶರ್ಮಾ ಅವರ ಹುಟ್ಟುಹಬ್ಬದಂದು ಆತ್ಮೀಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರ ಫೋಟೊ ಹಂಚಿಕೊಂಡು "ಜನ್ಮದಿನದ ಶುಭಾಶಯಗಳು ನನ್ನ ರಾಜಕುಮಾರಿ" ಎಂಬ ಸರಳ ಸಂದೇಶದೊಂದಿಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ಫೋಟೊ ಭಾರೀ ವೈರಲ್‌ ಆಗಿದೆ.

ಜುಲೈ 2024 ರಲ್ಲಿ ನತಾಸಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ, ಅಕ್ಟೋಬರ್ 2025 ರಲ್ಲಿ ಪಾಂಡ್ಯ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದರು. ಇತ್ತೀಚಿನ ರಜಾದಿನದ ಫೋಟೊಗಳ ಸರಣಿಯೊಂದಿಗೆ ಅವರು ಮಹೀಕಾ ಜತೆಗಿನ ಸಂಬಂಧವನ್ನು ದೃಢಪಡಿಸಿದರು. ಅಂದಿನಿಂದ ಈ ಜೋಡಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಹೀಕಾ ಪಾಂಡ್ಯ ಅವರ ಮಗ ಅಗಸ್ತ್ಯ ಅವರೊಂದಿಗೆ ಸಮಯ ಕಳೆಯುತ್ತಿರುವುದು ಸಹ ಕಂಡುಬಂದಿದೆ.

ಪ್ರೇಮಿಗಳ ದಿನದಂದು ಪಾಂಡ್ಯ ತನ್ನ ಗೆಳತಿ ಮಹೀಕಾಯ ನೆನಪಿಗಾಗಿ ತನ್ನ ಕುತ್ತಿಗೆಯ ಹಿಂಭಾಗದಲ್ಲಿ ಎರಡು ಚಿರತೆಗಳ ಜತೆಗೆ 'M' ಅಕ್ಷರವನ್ನು ಹೊಂದಿರುವ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಈ ಚಿತ್ರಣವು ಅವರ ಪ್ರೀತಿ ಮನಸ್ಥಿತಿ ಮತ್ತು ಪರಸ್ಪರ ಅವಲಂಬನೆಯನ್ನು ಪ್ರತಿಬಿಂಬಿಸುತ್ತದೆ.

ಹೊಸ ಹುಡುಗಿ ಜೊತೆ ಮತ್ತೆ ಎಂಗೇಜ್‌ಮೆಂಟ್‌ ಮಾಡಿಕೊಂಡ್ರಾ ಹಾರ್ದಿಕ್‌ ಪಾಂಡ್ಯ?

ಇತ್ತೀಚೆಗೆ ನಡೆದಿದ್ದ ಜಿಯೋಹಾಟ್‌ಸ್ಟಾರ್‌ ಸಂದರ್ಶನವೊಂದರಲ್ಲಿ ಹಾರ್ದಿಕ್‌ ಪಾಂಡ್ಯ ಅವರು, ತಮ್ಮ ಜೀವನದಲ್ಲಿ ಮಹೀಕಾ ಯಾವ ರೀತಿಯ ಪ್ರಭಾವ ಬೀರಿದರು ಎನ್ನುವುದನ್ನು ಮುಕ್ತವಾಗಿ ಹೇಳಿಕೊಂಡಿದ್ದರು. "ನನ್ನ ಬ್ಯಾಟಿಂಗ್ ಸಾಮರ್ಥ್ಯದ ಶೇಕಡಾ 40 ಕ್ಕಿಂತ ಹೆಚ್ಚು ಬಳಸಿಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಆಗ ಮಹೀಕಾ ನನ್ನ ಜೀವನದಲ್ಲಿ ಬಂದಳು. ನಾವು ಕ್ರೀಡೆಯ ಬಗ್ಗೆ ಮತ್ತು ನನ್ನ ಮಗ ಅಗಸ್ತ್ಯನನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಮಾತನಾಡಲು ಪ್ರಾರಂಭಿಸಿದೆವು. ನಾನು ಯಾವಾಗಲೂ ಹೊಂದಿದ್ದ ಆಟದ ಉತ್ಸಾಹವನ್ನು ಮರುಶೋಧಿಸಲು ಮಹೀಕಾ ನನಗೆ ಸಹಾಯ ಮಾಡಿದಳು" ಎಂದು ಪಾಂಡ್ಯ ತಿಳಿಸಿದ್ದರು.

ಮಹೀಕಾ ಶರ್ಮಾ ಮಾಡೆಲ್ ಮತ್ತು ಯೋಗ ಟ್ರೈನರ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಕೂಡ ಆಗಿದ್ದಾರೆ. ಮಹೀಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ.