ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಹಿಳೆಯನ್ನು ಮಂತ್ರವಾದಿ ಎಂದು ಆರೋಪಿಸಿ ಮಗು ಸಮೇತ ಸುಟ್ಟು ಹಾಕಿದ ಗ್ರಾಮಸ್ಥರು; ಕೂದಲೆಳೆ ಅಂತರದಲ್ಲಿ ಪತಿ ಪಾರು

ಮಹಿಳೆಯನ್ನು ಮಂತ್ರವಾದಿ ಎಂದು ಹೇಳಿ ಮಗು ಸಮೇತ ಸೀಮೆಎಣ್ಣೆ ಹಾಕಿ ಸುಟ್ಟು ಕೊಂದು ಹಾಕಿದ ಘಟನೆ ಜಾರ್ಖಂಡ್‌ನಲ್ಲಿ ಮಂಗಳವಾರ ನಡೆದಿದೆ. ಆಕೆಯ ಪತಿಯನ್ನು ಕೂಡ ಗುಂಪು ಕೊಲ್ಲಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಆತ ತಪ್ಪಿಸಿಕೊಂಡಿದ್ದಾನೆ. ಈ ಕುರಿತು ಕುಮಾರ್‌ಡುಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ಮಹಿಳೆ, ಮಗುವನ್ನು ಸುಟ್ಟು ಕೊಂದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ -

ಜಾರ್ಖಂಡ್: ಮಂತ್ರವಾದಿ (Magician) ಎಂದು ಹೇಳಿ ಮಹಿಳೆಯನ್ನು ಒಂದು ವರ್ಷದ ಮಗುವಿನೊಂದಿಗೆ ಸುಟ್ಟು (Burn) ಹಾಕಿರುವ ಘಟನೆ ಜಾರ್ಖಂಡ್‌ನಲ್ಲಿ (Jharkhand) ಮಂಗಳವಾರ ನಡೆದಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಕುಮಾರ್‌ಡುಂಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗುವನ್ನು ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿದ್ದಾರೆ.

ಕುಮಾರಡುಂಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಮಂಗಳವಾರ ತಡರಾತ್ರಿ ಮಹಿಳೆ ಮತ್ತು ಮಗುವನ್ನು ಸುಟ್ಟು ಹಾಕಿ ಕೊಲ್ಲಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಪತಿ ಕೂಡ ಗಾಯಗೊಂಡಿದ್ದು, ಆದರೆ ಆತ ದಾಳಿಕೋರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ರಾತ್ರಿ ಸಂಬಂಧಿಕರ ಮನೆಯಲ್ಲಿ ಕಳೆದ ಆತ ಬುಧವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ತಾಂತ್ರಿಕ ದೋಷ: ಮುಂಬೈ, ದೆಹಲಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ

ಕೆಲವು ಜನರು ತನಗೆ ಮತ್ತು ತನ್ನ ಹೆಂಡತಿಗೆ ಕರೆ ಮಾಡುತ್ತಿದ್ದಾರೆ ಎಂದು ಕೇಳಿ ಮಧ್ಯರಾತ್ರಿ ಎಚ್ಚರವಾಗಿದೆ. ಹೊರಗೆ ಹೋದಾಗ ಪತ್ನಿ ಮಾಟಮಂತ್ರ ಮಾಡುತ್ತಾಳೆ ಎಂದು ಆರೋಪಿಸಿ ಸುಮಾರು ೧೨ಕ್ಕೂ ಹೆಚ್ಚು ಮಂದಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗುಂಪೊಂದು ತನ್ನ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ. ಆಕೆಯ ಕೈಯಲ್ಲಿ ಒಂದು ವರ್ಷದ ಮಗು ಕೂಡ ಇದ್ದು ಅವರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಕೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಗನ್ನಾಥಪುರ ಎಸ್‌ಡಿಪಿಒ ರಾಫೆಲ್ ಮುರ್ಮು, ಮಹಿಳೆಯ ಪತಿ ದೂರು ನೀಡಿದ ಬಳಿಕ ಆತನನ್ನು ಕುಮಾರ್‌ಡುಂಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೂರಿನಲ್ಲಿ ಹೆಸರಿಸಲಾದ ನಾಲ್ವರನ್ನು ಬಂಧಿಸಿದ್ದೇವೆ. ಮೂಢನಂಬಿಕೆಯ ಆರೋಪ ಮಾಡುತ್ತಿರುವ ಮಹಿಳೆಯರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಛೀಮಾರಿ!

ಗ್ರಾಮದಲ್ಲಿ ವಾಸಿಸುತ್ತಿದ್ದ ಪತಿಯ ಸಂಬಂಧಿಯೊಬ್ಬರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಇದಕ್ಕೂ ಕೂಡ ಮಹಿಳೆಯೇ ಕಾರಣ ಎಂದು ದೂರಲಾಗಿದೆ. ಈ ಕುರಿತು ಕೂಡ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಾಫ್ಟ್‌ವೇರ್ ಎಂಜಿನಿಯರ್‌ ಮಹಿಳೆಯನ್ನು ಹತ್ಯೆಗೈದ ಮಾಜಿ ಪತಿ

ಸಾಫ್ಟ್‌ವೇರ್ ಎಂಜಿನಿಯರ್‌ ಮಹಿಳೆಯನ್ನು ಆಕೆಯ ಮಾಜಿ ಪತಿಯೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುನೀತಾ ಎಂಬಾಕೆಯನ್ನು ಗ್ರೀನ್ ಸಿಟಿ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಆಕೆಯ ಮಾಜಿ ಪತಿ ಹತ್ಯೆಗೈದಿದ್ದಾನೆ.

ಆರೋಪಿ ಮಹೇಶ್ ನಿಂದ ಇತ್ತೀಚೆಗೆ ಸುನೀತಾ ವಿಚ್ಛೇದನ ಪಡೆದಿದ್ದರು. ಇದರ ಬಳಿಕ ಸುನೀತಾ ಮತ್ತೊಂದು ಮದುವೆಯಾಗಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಮಹೇಶ್ ಆಕೆಯ ಮೇಲೆ ತೀವ್ರ ದ್ವೇಷ ಹೊಂದಿದ್ದ ಎನ್ನಲಾಗಿದೆ.

ಮಹೇಶ್ ಎರಡು ಚಾಕು ಮತ್ತು ಪೆಟ್ರೋಲ್ ಕ್ಯಾನ್‌ನೊಂದಿಗೆ ಸುನೀತಾ ಮನೆಗೆ ಹೋಗಿ ಜಗಳ ಮಾಡಿ ಬಳಿಕ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದು, ತಲೆಗೆ ಫ್ಲವರ್ ಪಾಟ್‌ನಿಂದ ಹೊಡೆದಿದ್ದಾನೆ. ಇದರಿಂದ ಸುನೀತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.