ಪಾಕ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಲು ಹರ್ಮನ್‌ಪ್ರೀತ್ ಕೌರ್ ಸಜ್ಜು
Harmanpreet Kaur: ಇತ್ತೀಚೆಗೆ ನಡೆದ ಮಹಿಳಾ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಹಾಂಗ್ ಕಾಂಗ್ ವಿರುದ್ಧ ಆಡಿದಾಗ, ಕೌರ್ ಪಂದ್ಯದ ಸಕಾರಾತ್ಮಕ ಅಂಶಗಳತ್ತ ಗಮನಹರಿಸುವಲ್ಲಿ ಯಶಸ್ವಿಯಾದರು. ಪಂದ್ಯಾವಳಿಯಲ್ಲಿ ಸತತ ಎರಡನೇ ಜಯ ದಾಖಲಿಸಿದ ಮಹಿಳಾ ತಂಡ ನೀಡಿದ ಪ್ರದರ್ಶನವನ್ನು ಶ್ಲಾಘಿಸಿದ್ದರು.
Harmanpreet Kaur -
ದುಬೈ, ಸೆ. 5: ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ.ಇಂದು ದುಬೈನಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಸ್ಮರಣೀಯ ಪಂದ್ಯವಾಗಿದೆ. ನಾಯಕಿಯಾಗಿ ಅವರಿಗೆ 150 ನೇ ಟಿ20ಐ ಪಂದ್ಯವಾಗಿದೆ.
ಈಗಾಗಲೇ ಪುರುಷ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಬಾರಿ ಭಾರತ ತಂಡವನ್ನು ಮುನ್ನಡೆಸಿರುವ ದಾಖಲೆ ಹೊಂದಿರುವ ಹರ್ಮನ್‌ಪ್ರೀತ್ ಕೌರ್, ಟಿ20ಐಗಳಲ್ಲಿ 150 ಬಾರಿ ತಮ್ಮ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಭಾರತ ತಂಡವು ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದೆ ಮತ್ತು ವುಮೆನ್ ಇನ್ ಬ್ಲೂ ತಂಡವು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವಾಗ ಮತ್ತೊಂದು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
ಮಹಿಳಾ ಏಷ್ಯಾಕಪ್ ಟಿ20: ಇಂದು ಭಾರತ-ಪಾಕಿಸ್ತಾನ ಮುಖಾಮುಖಿ
ಇತ್ತೀಚೆಗೆ ನಡೆದ ಮಹಿಳಾ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಹಾಂಗ್ ಕಾಂಗ್ ವಿರುದ್ಧ ಆಡಿದಾಗ, ಕೌರ್ ಪಂದ್ಯದ ಸಕಾರಾತ್ಮಕ ಅಂಶಗಳತ್ತ ಗಮನಹರಿಸುವಲ್ಲಿ ಯಶಸ್ವಿಯಾದರು. ಪಂದ್ಯಾವಳಿಯಲ್ಲಿ ಸತತ ಎರಡನೇ ಜಯ ದಾಖಲಿಸಿದ ಮಹಿಳಾ ತಂಡ ನೀಡಿದ ಪ್ರದರ್ಶನವನ್ನು ಶ್ಲಾಘಿಸಿದ್ದರು.
ಪಾಕ್ ತಂಡವು ಅಷ್ಟೇನೂ ಬಲಿಷ್ಠವಾಗಿಲ್ಲ. ಅಷ್ಟಕ್ಕೂ ಏಷ್ಯಾದಲ್ಲಿ ಭಾರತವೇ ಹೆಚ್ಚು ಬಲಾಢ್ಯವಾಗಿದೆ. ಆದ್ದರಿಂದ ಪ್ರಶಸ್ತಿ ಗೆಲುವಿನ ನೆಚ್ಚಿನ ತಂಡವಾಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಥಾಯ್ಲೆಂಡ್ ಮತ್ತು ಹಾಂಗ್‌ಕಾಂಗ್ ವಿರುದ್ಧ ಭಾರತ ತಂಡವು ಸುಲಭ ಜಯ ಸಾಧಿಸಿತ್ತು. ಕಳೆದ ಪಂದ್ಯದಲ್ಲಿ ಸ್ಮೃತಿ ಮಂದಾನ ಅಮೋಘ ಶತಕ ದಾಖಲಿಸಿದ್ದರು. ಆದರೆ ಅನುಭವಿಗಳಾಗಿರುವ ಪ್ರತೀಕಾ ರಾವಲ್, ರಿಚಾ ಘೋಷ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಇನ್ನೂ ಬ್ಯಾಟಿಂಗ್ ಫಾರ್ಮ್‌ಗೆ ಮರಳದಿರುವುದು ಚಿಂತೆಯಾಗಿದೆ.
ಬ್ಯಾಟಿಂಗ್‌ಗಿಂತ ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ವೇಗಿ ಕ್ರಾಂತಿ ಗೌಡ್, ನಂದನಿ ಶರ್ಮಾ, ಸ್ಪಿನ್ನರ್ ದೀಪ್ತಿ ಶರ್ಮಾ, ಶ್ರೀಚರಣಿ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ್ತಿಯರಾಗಿದ್ದಾರೆ.
ಸಂಭಾವ್ಯ ಆಡುವ ಬಳಗ
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪ್ರತೀಕಾ ರಾವಲ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿ.ಕೀ.), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್, ಕ್ರಾಂತಿ ಗೌಡ್, ಎನ್ ಶ್ರೀ ಚರಣಿ, ನಂದನಿ ಶರ್ಮಾ.
ಪಾಕಿಸ್ತಾನ: ಮುನೀಬಾ ಅಲಿ (ವಿ.ಕೀ.), ಶಾವಾಲ್ ಜುಲ್ಫಿಕರ್, ಗುಲ್ ಫಿರೋಜಾ, ಆಯೇಶಾ ಜಾಫರ್, ಸದಾಫ್ ಶಮಾಸ್, ಫಾತಿಮಾ ಸನಾ (ನಾಯಕಿ), ಉಮ್-ಎ-ಹನಿ, ಎಮನ್ ಫಾತಿಮಾ, ತುಬಾ ಹಸನ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.