ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉರುಗ್ವೆ ವಿರುದ್ಧ ಡ್ರಾ ಸಾಧಿಸಿ ನಾಕೌಟ್‌ ಆಸೆ ಜೀವಂತವಿರಿಸಿದ ಕೇಪ್ ವರ್ಡೆ!

FIFA World Cup 2026: ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ದ್ವೀಪ ರಾಷ್ಟ್ರದ(ಕೇಪ್‌ ವರ್ಡೆ) ವಿಶ್ವಕಪ್ ನಾಕೌಟ್ ಪ್ರವೇಶಕ್ಕೆ ಒಂದು ಅವಕಾಶ ಸಿಕ್ಕಿದೆ. ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸಿ ಗ್ರೂಪ್ H ನಲ್ಲಿ ಮೂರನೇ ಸ್ಥಾನದಲ್ಲಿದೆ. ಅವರು ತಮ್ಮ ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಎದುರಿಸಲಿದ್ದಾರೆ. ಉರುಗ್ವೆ ತಂಡವು ಎರಡನೇ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಸ್ಪ್ಯಾನಿಷ್ ತಂಡವನ್ನು ಎದುರಿಸಲಿದೆ.

ಉರುಗ್ವೆ ವಿರುದ್ಧ ಡ್ರಾ ಸಾಧಿಸಿ ನಾಕೌಟ್‌ ಆಸೆ ಜೀವಂತವಿರಿಸಿದ ಕೇಪ್ ವರ್ಡೆ!

Cape Verde -

Abhilash BC
Abhilash BC Jun 22, 2026 3:46 PM

ಡಲ್ಲಾಸ್‌, ಜೂ.22: ಫಿಫಾ ವಿಶ್ವಕಪ್‌(FIFA World Cup 2026)ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಮಾಜಿ ಚಾಂಪಿಯನ್‌ ಸ್ಪೇನ್‌ಗೆ ಶಾಕ್‌ ನೀಡಿದ್ದ ಆಫ್ರಿಕನ್ ರಾಷ್ಟ್ರವಾದ ಕೇಪ್‌ ವರ್ಡೆ(Cape Verde), ಮತ್ತೊಂದು ಅಸಾಧಾರಣ ಪ್ರದರ್ಶನ ನೀಡಿದೆ. ಸೋಮವಾರ ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಉರುಗ್ವೆ ತಂಡವನ್ನು 2-2 ಗೋಲುಗಳಿಂದ ಡ್ರಾ ಸಾಧಿಸಿದೆ. ಈ ಪ್ರದರ್ಶನದ ಮೂಲಕ ನಾಕೌಟ್‌ಗೆ ಅಚ್ಚರಿಯ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ.

ಪಂದ್ಯದ ಆರಂಭದಲ್ಲೇ ಕೇಪ್‌ ವರ್ಡೆ ತಂಡ ಗೋಲಿನ ಖಾತೆ ತೆರೆಯಿತು. 21ನೇ ನಿಮಿಷದಲ್ಲಿ ಕೆವಿನ್ ಪಿನಾ ಗೋಲು ಬಾರಿಸಿದರು. ಈ ಮೂಲಕ ಕೇಪ್ ವರ್ಡೆ ಪರ ವಿಶ್ವಕಪ್‌ನಲ್ಲಿ ಮೊದಲ ಗೋಲು ಗಳಿಸಿದ ಆಟಗಾರ ಎನಿಸಿದರು. ಮೊದಲಾರ್ಧದ ಕೊನೆಯಲ್ಲಿ ಉರುಗ್ವೆ ಒಂದು ನಿಮಿಷದ ಅಂತರದಲ್ಲಿ ಎರಡು ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಮ್ಯಾಕ್ಸಿ ಅರೌಜೊ ಮತ್ತು ಅಗಸ್ಟಿನ್ ಕ್ಯಾನೊಬಿಯೊ ಈ ಗೋಲು ಬಾರಿಸಿದರು.

ದ್ವಿತಿಯಾರ್ಥದ ಮೊದಲ 15 ನಿಮಿಷ ಉರುಗ್ವೆ ಹಿಡಿತ ಸಾಧಿಸಿತು. ಆದರೆ 61ನೇ ನಿಮಿಷದಲ್ಲಿ ಮಥಿಯಾಸ್ ಒಲಿವೆರಾ ನೀಡಿದ ಪಾಸ್‌ ಅನ್ನು ಹೆಲಿಯೊ ವಾರೆಲಾ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಪಂದ್ಯವನ್ನು 2-2 ಅಂತರದಿಂದ ಸಮಬಲಕ್ಕೆ ತಂದರು. ಆ ಬಳಿಕ ಎರಡೂ ತಂಡಗಳ ರಕ್ಷಣ ಪಡೆಯೂ ಬಲಿಷ್ಠಗೊಂಡಿತು. 40 ವರ್ಷದ ವೊಜಿನ್ಹಾ ಗೋಲು ಪೆಟ್ಟಿಗೆಯ ಮುಂದೆ ಬಂಡೆಯಂತೆ ನಿಂತು ಉರುಗ್ವೆಯ ಹೊಡೆತಗಳನ್ನು ತಡೆದರು.

ಲಾಸ್ ಏಂಜಲೀಸ್ ಲಾಕರ್ ಕೋಣೆಯಲ್ಲಿ ಭಾವನಾತ್ಮಕ ಕೈಬರಹ ಬರೆದಿಟ್ಟ ಇರಾನ್‌ ತಂಡ

ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ದ್ವೀಪ ರಾಷ್ಟ್ರದ(ಕೇಪ್‌ ವರ್ಡೆ) ವಿಶ್ವಕಪ್ ನಾಕೌಟ್ ಪ್ರವೇಶಕ್ಕೆ ಒಂದು ಅವಕಾಶ ಸಿಕ್ಕಿದೆ. ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸಿ ಗ್ರೂಪ್ H ನಲ್ಲಿ ಮೂರನೇ ಸ್ಥಾನದಲ್ಲಿದೆ. ಅವರು ತಮ್ಮ ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಎದುರಿಸಲಿದ್ದಾರೆ. ಉರುಗ್ವೆ ತಂಡವು ಎರಡನೇ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಸ್ಪ್ಯಾನಿಷ್ ತಂಡವನ್ನು ಎದುರಿಸಲಿದೆ. ಸೌದಿ ಅರೇಬಿಯಾ ವಿರುದ್ಧ ಕೇಪ್‌ ವರ್ಡೆ ಗೆಲುವು ಸಾಧಿಸಿದರೆ ನಾಕೌಟ್‌ ಪ್ರವೇಶದ ಮೂಕಲ ತನ್ನ ದೇಶದ ಫುಟ್ಬಾಲ್‌ ಇತಿಹಾಸದಲ್ಲಿ ಚಾರಿತ್ರಿಕ ಸಾಧನೆ ಮಾಡಲಿದೆ.

ಈ ವಿಶ್ವಕಪ್‌ನ ಫಿಫಾ ನಿಯಮಗಳ ಪ್ರಕಾರ, ಒಂದೇ ಗುಂಪಿನಲ್ಲಿರುವ ತಂಡಗಳ ನಡುವಿನ ಟೈಬ್ರೇಕರ್‌ಗಳನ್ನು ಹೆಡ್-ಟು-ಹೆಡ್ ದಾಖಲೆಯಿಂದ ನಿರ್ಧರಿಸಲಾಗುತ್ತದೆ. ಗೋಲು ವ್ಯತ್ಯಾಸವು ಹಿಂದಿನ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ತಂಡಗಳ ನಡುವಿನ ಹೆಡ್-ಟು-ಹೆಡ್ ಫಲಿತಾಂಶವು ಆದ್ಯತೆಯನ್ನು ಪಡೆಯುತ್ತದೆ.