IND vs NZ final: ಫೈನಲ್‌ಗೆ ಕ್ಷಣಗಣನೆ; ಗೆದ್ದು ಬಾ ಭಾರತ
IND vs NZ final: ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆದಿದ್ದ ಪಿಚ್‌ನಲ್ಲಿಯೇ ಫೈನಲ್ ಆಯೋಜನೆಗೊಳ್ಳಲಿದೆ. ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಉಭಯ ತಂಡಗಳಲ್ಲಿಯೂ ನುರಿತ ಸ್ಪಿನ್ನರ್‌ಗಳಿದ್ದಾರೆ.


ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 9ನೇ ಆವೃತ್ತಿಯ ಫೈನಲ್(ICC Champions Trophy 2025 final) ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇಂದು(ಭಾನುವಾರ) ನಡೆಯಲಿರುವ ಈ ಪ್ರಶಸ್ತಿ ಹೋರಾಟದಲ್ಲಿ ಅಜೇಯ ಭಾರತ(IND vs NZ final) ತಂಡ ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ ಪಟ್ಟಕ್ಕೇರಲು ಹೋರಾಡಲಿದೆ. ಕಳೆದ ವರ್ಷವಷ್ಟೇ ಟಿ20 ವಿಶ್ವಕಪ್ ಗೆಲುವಿನೊಂದಿಗೆ ದಶಕದ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದ್ದ ರೋಹಿತ್ ಶರ್ಮ(rohit sharma) ಪಡೆ, ಇದೀಗ ಎಂಟು ತಿಂಗಳ ಅಂತರದಲ್ಲೇ ಎರಡನೇ ಐಸಿಸಿ ಟ್ರೋಫಿ ಗೆಲುವಿನ ವಿಶೇಷ ಸಾಧನೆಯ ತವಕದಲ್ಲಿದೆ.
ಟೂರ್ನಿಯಲ್ಲಿ ಪ್ರಸಕ್ತ ಭರ್ಜರಿ ಫಾರ್ಮ್ನಲ್ಲಿರುವ ಮತ್ತು ದುಬೈ ವಾತಾವರಣವನ್ನು ಅತ್ಯುತ್ತಮವಾಗಿ ಬಳಸಿಕೊಂಡಿರುವ ಭಾರತ ತಂಡ ಫೈನಲ್ ಪಂದ್ಯದಲ್ಲೂ ಫೇವರಿಟ್ ಆಗಿದೆ. ಹಾಗಂತ ಪ್ರಶಸ್ತಿ ಕಾದಾಟದಲ್ಲಿ ಕಿವೀಸ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಯಾಕೆಂದರೆ ಕಿವೀಸ್ ಕೂಡ ಭಾರತದಂತೆ ಬ್ಯಾಟಿಂಗ್-ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಮತ್ತು ಪ್ರಶಸ್ತಿ ಸುತ್ತಿನಲ್ಲಿ ಕಿವೀಸ್ ಭಾರತ ವಿರುದ್ಧ ಸೋತಿಲ್ಲ. ಹೀಗಾಗಿ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವುದು ನಿಶ್ಚಿತ.
ಭಾರತ-ಪಾಕ್ ಪಂದ್ಯದ ಪಿಚ್!
ಗುಂಪು ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆದಿದ್ದ ಪಿಚ್‌ನಲ್ಲಿಯೇ ಫೈನಲ್ ಆಯೋಜನೆಗೊಳ್ಳಲಿದೆ. ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಉಭಯ ತಂಡಗಳಲ್ಲಿಯೂ ನುರಿತ ಸ್ಪಿನ್ನರ್‌ಗಳಿದ್ದಾರೆ.
Tell us your predictions for Sunday's #ChampionsTrophy Final 🏆
— ICC (@ICC) March 9, 2025
How to watch ➡️ https://t.co/S0poKnwS4p pic.twitter.com/MZ2yz4NeuN
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕಳೆದ 27 ವರ್ಷಗಳಿಂದ ಅಜೇಯ ದಾಖಲೆ ಹೊಂದಿದೆ. 1998ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ಆ ಬಳಿಕ ಸೆಮಿಫೈನಲ್‌ಗೇರಿದ ಪ್ರತಿ ಬಾರಿಯೂ ತಂಡ ಫೈನಲ್ ಪ್ರವೇಶಿಸಿದೆ. 2004, 2006, 2009ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು.
ನ್ಯೂಜಿಲೆಂಡ್ 16 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿವೆ. 2009ರಲ್ಲಿ ಫೈನಲ್‌ಗೇರಿದ್ದ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಮಳೆ ಭೀತಿ ಇಲ್ಲ
ಫೈನಲ್ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಕಾಳೆ ತಿಳಿಸಿದೆ. ಸಂಜೆ ವೇಳೆ ತಾಪಮಾನವು ಕಡಿಮೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಧ್ಯಾಹ್ನ 3 ಗಂಟೆಯಿಂದ ದುಬೈನಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಒಟ್ಟು ಮುಖಾಮುಖಿ: 119
ಭಾರತ ಗೆಲುವು: 50
ನ್ಯೂಜಿಲ್ಯಾಂಡ್ ಗೆಲುವು: 61
7 ಪಂದ್ಯ ಫಲಿತಾಂಶವಿಲ್ಲ. ಒಂದು ಪಂದ್ಯ ಟೈ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ