ಮ್ಯಾಟ್ ಬಾಯ್ಲ್ ಶತಕ; ಭಾರತ 'ಎ' ವಿರುದ್ಧ ನ್ಯೂಜಿಲೆಂಡ್ ದಿಟ್ಟ ಹೋರಾಟ
IND-A Vs NZ-A 2nd Unofficial Test: ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ತೋರಿದ ವೇಗಿ ಆಕಾಶ್ದೀಪ್ ಸಿಂಗ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಅವರು 116 ಎಸೆತಗಳಿಂದ 68 ರನ್ ಗಳಿಸಿದರು. ಈ ಇನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.
India-A vs New Zealand-A -
ಕ್ರೈಸ್ಟ್ಚರ್ಚ್, ನ.1: ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡದ ಬೃಹತ್ ಮೊತ್ತದ ಸವಾಲು ಬೆನ್ನಟ್ಟುತ್ತಿರುವ ನ್ಯೂಜಿಲೆಂಡ್ 'ಎ' ತಂಡ ದಿಟ್ಟ ಬ್ಯಾಟಿಂಗ್ ನಡೆಸುತ್ತಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ಗೆ 218 ರನ್ ಗಳಿಸಿ ಕೇವಲ 128 ರನ್ ಹಿನ್ನಡೆಯಲ್ಲಿದೆ. ಮ್ಯಾಟ್ ಬಾಯ್ಲ್(107*) ಮತ್ತು ಡೀನ್ ಫಾಕ್ಸ್ಕ್ರಾಫ್ಟ್ (ಔಟಾಗದೆ 80) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅವರ ಅರ್ಧಶತಕದ ಪರಿಣಾಮವಾಗಿ ಭಾರತ 'ಎ' ತಂಡದ ವಿರುದ್ಧ ದ್ವಿತೀಯ ದಿನವಾದ ಭಾನುವಾರ 291 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ಧ್ರುವ್ ಜುರೇಲ್ ಅವರ ಆಕರ್ಷಕ ಶತಕದ ನೆರವಿನಿಂದ 346 ರನ್ ಬಾರಿಸಿ ಆಲೌಟ್ ಆಯಿತು. ಶನಿವಾರ ದಿನದಾಟದ ಅಂತ್ಯಕ್ಕೆ 99 ರನ್ ಗಳಿಸಿದ್ದ ಜುರೇಲ್ ಎರಡನೇ ದಿನ ಶತಕ ಬಾರಿಸಿ ಸಂಭ್ರಮಿಸಿದರು. ಆದರೆ ಅವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. 105 ರನ್ಗೆ ಕೊನೆಗೊಂಡಿತು.
ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ತೋರಿದ ವೇಗಿ ಆಕಾಶ್ದೀಪ್ ಸಿಂಗ್ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಅವರು 116 ಎಸೆತಗಳಿಂದ 68 ರನ್ ಗಳಿಸಿದರು. ಈ ಇನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.
ನ್ಯೂಜಿಲೆಂಡ್-ಎ ವಿರುದ್ಧದ ಮೂರನೇ ಅನಧಿಕೃತ ಟೆಸ್ಟ್ ನಿಂದ ರಿಷಭ್ ಪಂತ್ ಔಟ್
ಕರ್ನಾಟಕದ ಎಡಗೈ ಬ್ಯಾಟರ್ ಸ್ಮರಣ್ ರವಿಚಂದ್ರನ್ ಗೋಲ್ಡನ್ ಡಕ್ ಸಂಕಷ್ಟ ಎದುರಿಸಿದರೆ, ಅನುಭವಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್(8) ಕೂಡ ವಿಫಲರಾದರು. ಮಾನವ್ ಸುತಾರ್ 22 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಫ್ರೇಸರ್ ಶೀಟ್ 63 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು. ಉಳಿದಂತೆ ಬ್ರೆಟ್ ರಾಂಡೆಲ್ ಮತ್ತು ಜಾರೋಡ್ ಮೆಕಾಯ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟುತ್ತಿರುವ ನ್ಯೂಜಿಲೆಂಡ್ಗೆ ಮುಖೇಶ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತವಿಕ್ಕಿದರು. ನ್ಯೂಜಿಲೆಂಡ್ 13 ರನ್ಗೆ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಕ್ರೀಸ್ಗಿಳಿದ ಮ್ಯಾಟ್ ಬಾಯ್ಲ್ ಮತ್ತು ಡೀನ್ ಫಾಕ್ಸ್ಕ್ರಾಫ್ಟ್ ಕ್ರೀಸ್ನಲ್ಲಿ ಬೇರೂರಿ ಭಾರತೀಯ ಬೌಲರ್ಗಳ ತಾಳ್ಮೆ ಪರೀಕ್ಷಿಸಿದರು. ಉಭಯ ಆಟಗಾರರು ಮುರಿಯದ ನಾಲ್ಕನೇ ವಿಕೆಟ್ಗೆ 205 ಜತೆಯಾಟ ನಡೆಸಿದರು.