IND vs AUS 5th T20I: ಇಂದಿನ ಭಾರತ-ಆಸೀಸ್ ಅಂತಿಮ ಟಿ20ಗೆ ಭಾರೀ ಮಳೆ ಮುನ್ಸೂಚನೆ
Brisbane Weather forecast: ಬ್ರಿಸ್ಬೇನ್ ನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಬಹುದು, ಆದರೆ ಸಂಜೆಯ ವೇಳೆಗೆ ಈ ಸಾಧ್ಯತೆಗಳು ಶೇ. 23 ಕ್ಕೆ ಇಳಿಯುತ್ತವೆ. ಅಭಿಮಾನಿಗಳು ತೀವ್ರವಾದ ಟಿ20 ಯುದ್ಧಕ್ಕೆ ಸಜ್ಜಾಗುತ್ತಿರುವಾಗ, ಮಳೆ ಮತ್ತೊಮ್ಮೆ ನಿರ್ಣಾಯಕ ಅಂಶವನ್ನು ವಹಿಸಬಹುದು. ಮಳೆ ಬಂದು ಪಂದ್ಯ ರದ್ದಾರೆ ಸರಣಿ ಭಾರತದ ಪಾಲಾಗಲಿದೆ.
ಭಾರತ-ಆಸೀಸ್ ಅಂತಿಮ ಟಿ20ಗೆ ಭಾರೀ ಮಳೆ ಮುನ್ಸೂಚನೆ -
ಬ್ರಿಸ್ಬೇನ್: ಇಂದು(ಶನಿವಾರ) ಬ್ರಿಸ್ಬೇನ್‌ನ ಪ್ರಸಿದ್ಧ ಗಬ್ಬಾ(Gabba)ದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ(IND vs AUS 5th T20I) ತಂಡಗಳು ಸರಣಿಯ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ರೋಮಾಂಚಕ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ನಾಲ್ಕನೇ ಟಿ20ಯಲ್ಲಿ 48 ರನ್‌ಗಳ ಪ್ರಬಲ ಜಯ ಸಾಧಿಸಿದ ನಂತರ ಭಾರತ 2-1 ಮುನ್ನಡೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಅಜೇಯ ಟಿ20ಐ ಸರಣಿಯ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಅಂತಿಮ ಪಂದ್ಯವನ್ನು ಗೆದ್ದು ಸರಣಿ ಕೈ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ಆದರೆ ಪಂದ್ಯಕ್ಕೆ ಭಾರೀ ಮಳೆ(Brisbane Weather forecast) ಭೀತಿ ಎದುರಾಗಿದೆ.
ಕ್ಯಾನ್‌ಬೆರಾದಲ್ಲಿ ನಡೆದ ಮೊದಲ T20I ಮಳೆಯಿಂದ ರದ್ದಾದ ನಂತರ, ಕ್ರಿಕೆಟ್ ಅಭಿಮಾನಿಗಳು ಗಬ್ಬಾದಲ್ಲಿ ಪೂರ್ಣ ಪ್ರಮಾಣದ ಪಂದ್ಯಕ್ಕಾಗಿ ಹತಾಶರಾಗಿದ್ದಾರೆ. ಅಕ್ಯೂವೆದರ್ ವರದಿ ಪ್ರಕಾರ, 79% ಮಳೆಯಾಗುವ ಸಾಧ್ಯತೆ ಮತ್ತು 99% ಸಂಪೂರ್ಣ ಮೋಡ ಕವಿದಿರುತ್ತದೆ. ತಾಪಮಾನವು 21°C ಮತ್ತು 28°C ನಡುವೆ ಇರುತ್ತದೆ. ಆರ್ದ್ರತೆಯು 60% ಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಗಂಟೆಯ 10 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದದೆ.
ನಗರದ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಬಹುದು, ಆದರೆ ಸಂಜೆಯ ವೇಳೆಗೆ ಈ ಸಾಧ್ಯತೆಗಳು ಶೇ. 23 ಕ್ಕೆ ಇಳಿಯುತ್ತವೆ. ಅಭಿಮಾನಿಗಳು ತೀವ್ರವಾದ ಟಿ20 ಯುದ್ಧಕ್ಕೆ ಸಜ್ಜಾಗುತ್ತಿರುವಾಗ, ಮಳೆ ಮತ್ತೊಮ್ಮೆ ನಿರ್ಣಾಯಕ ಅಂಶವನ್ನು ವಹಿಸಬಹುದು. ಮಳೆ ಬಂದು ಪಂದ್ಯ ರದ್ದಾರೆ ಸರಣಿ ಭಾರತದ ಪಾಲಾಗಲಿದೆ.
ಸಂಭಾವ್ಯ ತಂಡಗಳು
ಆಸ್ಟ್ರೇಲಿಯಾ: ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಬೆನ್ ಮೆಕ್‌ಡರ್ಮೊಟ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಮಿಚೆಲ್ ಓವನ್.
ಇದನ್ನೂ ಓದಿ Pratika Rawal: ಜಯ್ ಶಾ ಮಧ್ಯಪ್ರವೇಶ; ಪ್ರತೀಕಾ ರಾವಲ್‌ಗೆ ವಿಶ್ವಕಪ್ ವಿಜೇತ ಪದಕ ಶೀಘ್ರದಲ್ಲೇ ಹಸ್ತಾಂತರ
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿ.ಕೀ.), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್. ಲೈವ್ ಸ್ಟ್ರೀಮಿಂಗ್; ಜಿಯೋ ಹಾಟ್ಸ್ಟಾರ್.
ಪಂದ್ಯ ಆರಂಭ: ಭಾರತೀಯ ಕಾಲಮಾನ ಮಧ್ಯಾಹ್ನ 1:45