IND vs NAM: ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದಿಂದ ನಮೀಬಿಯಾ ಎದುರು ಗೆದ್ದ ಭಾರತ!
India vs Namibia Match Highlights: ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನದ ಸಹಾಯದಿಂದ ಭಾರತ ತಂಡ, ನಮೀಬಿಯಾ ಎದುರು 93 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.
ನಮೀಬಿಯಾ ಎದುರು ಭಾರತ ತಂಡಕ್ಕೆ 93 ರನ್ ಜಯ. -
ನವದೆಹಲಿ: ಹಾರ್ದಿಕ್ ಪಾಂಡ್ಯ (Hardik Pandya) ಅವರ ಆಲ್‌ರೌಂಡ್ ಪ್ರದರ್ಶನದ ಸಹಾಯದಿಂದ ಭಾರತ ತಂಡ, ನಮೀಬಿಯಾ ವಿರುದ್ಧದ ಪಂದ್ಯದಲ್ಲಿ 93 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದರೊಂದಿಗೆ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2206) ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು ಹಾಗೂ ʻಎʼ ಗುಂಪಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇನ್ನು ಎರಡನೇ ಸೋಲು ಅನುಭವಿಸಿದ ನಮೀಬಿಯಾ ತಂಡ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿಯಿತು. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಹಾಗೂ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುರುವಾರ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡ, ಉತ್ತಮ ಆರಂಭ ಪಡೆದ ಹೊರತಾಗಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು ಹಾಗೂ 18.2 ಓವರ್‌ಗಳಿಗೆ 116 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ವರುಣ್ ಚಕ್ರವರ್ತಿ ಕೇವಲ ಎರಡು ಓವರ್ ಬೌಲ್ ಮಾಡಿದರೂ ಕೇವಲ 7 ರನ್ ನೀಡಿ 3 ವಿಕೆಟ್ ಕಿತ್ತರು. ಮೂರು ಓವರ್ ಬೌಲ್ ಮಾಡಿದ ಅಕ್ಷರ್ 20 ರನ್ ನೀಡಿದರೂ 2 ವಿಕೆಟ್ ಕಿತ್ತರು.
T20 World Cup: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ!
ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡಕ್ಕೆ ಆರಂಭಿಕರಾದ ಲಾರೆನ್ ಸ್ಟೀನ್‌ಕಾಂಪ್ (29) ಹಾಗೂ ಜ್ಯಾನ್ ಫ್ರೀನ್‌ಲಿಂಕ್ (22) ಉತ್ತ, ಆರಂಭ ತಂದುಕೊಟ್ಟಿದ್ದರು. ಜಾನ್ ನಿಕೋಲ್ ಲಾಫ್ಟಿ (13) ಹಾಗೂ ಗೆರ್ಹಾರ್ಡ್ ಎರಾಸ್ಮಸ್ ಅವರು 18 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ಬೇಗ ಔಟ್ ಆದರು. ಅಂದ ಹಾಗೆ ನಮೀಬಿಯಾ ಬ್ಯಾಟ್ಸ್‌ಮನ್‌ಗಳು ಆರಂಭಿಕ 10 ಓವರ್‌ಗಳವರೆಗೂ ಪ್ರತಿರೋಧ ತೋರಿದ್ದರು. ಆದರೆ, ನಂತರ ಅವರು 30 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು.
Biggest win margin for #TeamIndia by runs in ICC Men's #T20WorldCup 💪
— BCCI (@BCCI) February 12, 2026
The #MenInBlue beat Namibia by 9️⃣3️⃣ runs to make it 2️⃣ victories in a row!
Scorecard ▶️ https://t.co/SQLoaZjq98#INDvNAM pic.twitter.com/b0PL2LLSbI
209 ರನ್ ಕಲೆ ಹಾಕಿದ್ದ ಭಾರತ ತಂಡ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳನ್ನು ಕಲೆ ಹಾಕಿತ್ತು. ಟೀಮ್ ಇಂಡಿಯಾ ಪರ ಇಶಾನ್ ಕಿಶನ್ 61 ರನ್, ಹಾರ್ದಿಕ್ ಪಾಂಡ್ಯ 52 ರನ್‌ಗಳನ್ನು ಬಾರಿಸಿದ್ದರು. ನಮೀಬಿಯಾ ಪರ ನಾಯಕ ಗೆರ್ಹಾರ್ಡ್ 4 ಓವರ್‌ಗಳಿಗೆ 20 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು.ಆ ಮೂಲಕ ಎದುರಾಳಿ ತಂಡದ ಪರ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.
Innings Break!
— BCCI (@BCCI) February 12, 2026
On the back of a powerful batting show, #TeamIndia set a target of 2⃣1⃣0⃣ 🎯
Over to our bowlers 👉
Scorecard ▶️ https://t.co/SQLoaZjq98#T20WorldCup | #MenInBlue | #INDvNAM pic.twitter.com/uDOZ70cUvP
ಇಶಾನ್ ಕಿಶನ್ ಸ್ಪೋಟಕ ಅರ್ಧಶತಕ
ಅಭಿಷೇಕ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್, 8 ಎಸೆತಗಳಲ್ಲಿ ಮೂರು ಸಿಕ್ಸರ್ ಸೇರಿ 22 ರನ್‌ಗಳನ್ನು ಬಾರಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅವರು ತಪ್ಪು ಹೊಡೆತಕ್ಕೆ ಕೈ ಕ್ಯಾಚ್ ಕೊಟ್ಟರು. ಆದರೆ, ಐದನೇ ಓವರ್‌ವರೆಗೂ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ್ದ ಇಶಾನ್ ಕಿಶನ್, ಪವರ್‌ಪ್ಲೇನ ಕೊನೆಯ ಓವರ್‌ನಲ್ಲಿ ತಮ್ಮ ಆಕ್ರಮಣಕಾರಿ ಆಟವನ್ನು ತೋರಿದ್ದರು. ಆ ಮೂಲಕ ಅವರು ಕೇವಲ 20 ಎಸೆತಗಳಲ್ಲಿಯೇ ಅರ್ಧಶತಕವನ್ನು ಬಾರಿಸಿದರು. ಅಂತಿಮವಾಗಿ ಅವರು 24 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 61 ರನ್ ಗಳಿಸಿ ಔಟ್ ಆಗಿದ್ದರು.
A blistering knock! 🔥
— BCCI (@BCCI) February 12, 2026
Ishan Kishan got to his half-century in style en route to 6️⃣1️⃣(24) 💪
Updates ▶️ https://t.co/SQLoaZjq98#TeamIndia | #T20WorldCup | #MenInBlue | #INDvNAM | @ishankishan51 pic.twitter.com/H2mLWp1SQD
ಹಾರ್ದಿಕ್ ಪಾಂಡ್ಯ ಅಬ್ಬರ
ತಿಲಕ್ ವರ್ಮಾ (25) ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 12 ರನ್‌ಗೆ ಸೀಮಿತರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 52 ರನ್‌ಗಳನ್ನು ಚಚ್ಚಿದರು. ಕೊನೆಯಲ್ಲಿ ಶಿವಂ ದುಬೆ 23 ರನ್‌ಗಳ ಕೊಡುಗೆಯನ್ನು ನೀಡಿದರು.
IND vs NAM: 8 ಎಸೆತಗಳಲ್ಲಿ 22 ರನ್ ಸಿಡಿಸಿದರೂ ಗೋಲ್ಡನ್ ಚಾನ್ಸ್ ಕಳೆದುಕೊಂಡು ಸಂಜು ಸ್ಯಾಮ್ಸನ್!
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 209-9 (ಇಶಾನ್ ಕಿಶನ್ 61, ಹಾರ್ದಿಕ್ ಪಾಂಡ್ಯ 52; ಗೆರ್ಹಾರ್ಡ್ ಎರಾಸ್ಮಸ್ 20ಕ್ಕೆ 4)
ನಮೀಬಿಯಾ: 18.2 ಓವರ್‌ಗಳಿಗೆ 116-10 (ಲಾರೆನ್ ಸ್ಕೀನ್‌ಕಾಂಪ್ 29, ಜಾನ್ ಫ್ರೈಲಿಂಕ್ 22; ವರುಣ್ ಚಕ್ರವರ್ತಿ 7ಕ್ಕೆ 3, ಹಾರ್ದಿಕ್ ಪಾಂಡ್ಯ 21 ಕ್ಕೆ 2, ಅಕ್ಷರ್ ಪಟೇಲ್ 20ಕ್ಕ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಹಾರ್ದಿಕ್ ಪಾಂಡ್ಯ