IND vs ENG: ಓವಲ್‌ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
ಭಾರತ-ಇಂಗ್ಲೆಂಡ್ ನಡುವೆ ಓವಲ್‌ನಲ್ಲಿ 14 ಟೆಸ್ಟ್ ಆಡಲಾಗಿದೆ. ಭಾರತ ಎರಡರಲ್ಲಿ ಜಯ ಸಾಧಿಸಿದರೆ, 5 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದ 7 ಟೆಸ್ಟ್ ಡ್ರಾಗೊಂಡಿವೆ. ಆಸ್ಟ್ರೇಲಿಯ ವಿರುದ್ಧ ಇಲ್ಲೇ ಆಡಲಾಗಿದ್ದ ದ್ವಿತೀಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಭಾರತ ಸೋಲನುಭವಿಸಿತ್ತು.


ಲಂಡನ್: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ಟೆಸ್ಟ್ ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಗುರುವಾರ ಆರಂಭವಾಗಲಿದೆ. ಸರಣಿಯನ್ನು 2-2 ಸಮಬಲಕ್ಕೆ ತರಬೇಕಾದರೆ ಇದು ಭಾರತಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು ಗೆಲುವು ಕಾಣಲೇಬೇಕಿದೆ. ಇದಕ್ಕೂ ಮುನ್ನ ಭಾರತ ಓವಲ್‌ನಲ್ಲಿ ಎಷ್ಟು ಟೆಸ್ಟ್ ಆಡಿದೆ? ಗೆಲುವು ಮತ್ತು ಸೋಲುಗಳ ಒಂದು ಹಿನ್ನೋಟ(kennington oval india records) ಇಲ್ಲಿದೆ.
14 ಟೆಸ್ಟ್
ಭಾರತ-ಇಂಗ್ಲೆಂಡ್ ನಡುವೆ ಓವಲ್‌ನಲ್ಲಿ 14 ಟೆಸ್ಟ್ ಆಡಲಾಗಿದೆ. ಭಾರತ ಎರಡರಲ್ಲಿ ಜಯ ಸಾಧಿಸಿದರೆ, 5 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದ 7 ಟೆಸ್ಟ್ ಡ್ರಾಗೊಂಡಿವೆ. ಆಸ್ಟ್ರೇಲಿಯ ವಿರುದ್ಧ ಇಲ್ಲೇ ಆಡಲಾಗಿದ್ದ ದ್ವಿತೀಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಭಾರತ ಸೋಲನುಭವಿಸಿತ್ತು.
1971ರಲ್ಲಿ ಮೊದಲ ಗೆಲುವು
ಓವಲ್‌ನಲ್ಲಿ ಭಾರತದ ಮೊದಲ ಗೆಲುವು ದಾಖಲಿಸಿದ್ದು 1971ರಲ್ಲಿ. ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ಅವರ ಬೌಲಿಂಗ್ ಪರಾಕ್ರಮ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಭಾರತ ಪಂದ್ಯವನ್ನು 4 ವಿಕೆಟ್‌ಗಳಿಂದ ಜಯಿಸಿ ಸರಣಿಯನ್ನು 1-0 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದು ಇಂಗ್ಲೆಂಡ್ ನೆಲದಲ್ಲಿ ಭಾರತಕ್ಕೆ ಒಲಿದ ಮೊದಲ ಸರಣಿ ಜಯವಾಗಿತ್ತು. ಚಂದ್ರಶೇಖರ್ ಅವರು 38 ರನ್ನಿಗೆ 6 ವಿಕೆಟ್ ಕಿತ್ತು ಆಂಗ್ಲರ ಸೊಕ್ಕಡಗಿಸಿದ್ದರು.
2021ರಲ್ಲಿ 2ನೇ ಗೆಲುವು
ಭಾರತ ಓವಲ್‌ನಲ್ಲಿ ಮತ್ತೂಂದು ಗೆಲುವು ಕಾಣಲು ಭರ್ತಿ 50 ವರ್ಷ ಕಾಯಬೇಕಾಯಿತು. ವಿರಾಟ್ ಕೊಹ್ಲಿ ನಾಯಕತ್ವದ ತಂಡ 2021ರಲ್ಲಿ ಈ ಗೆಲುವು ಸಾಧಿಸಿತ್ತು. ಸರಣಿಯ 4ನೇ ಪಂದ್ಯವನ್ನು ಭಾರತ 157 ರನ್ನುಗಳಿಂದ ಜಯಿಸಿತ್ತು.
99 ರನ್ ಹಿನ್ನಡೆಗೆ ಸಿಲುಕಿದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 466 ರನ್ ಬಾರಿಸಿತು. ರೋಹಿತ್ ಶರ್ಮ 127 ಹೊಡೆದರೆ, ಪೂಜಾರ (61), ಪಂತ್ (50), ಠಾಕೂರ್ (60) ಅರ್ಧ ಶತಕ ಬಾರಿಸಿದ್ದರು. 368 ರನ್ ಗುರಿ ಪಡೆದ ಇಂಗ್ಲೆಂಡ್ 210ಕ್ಕೆ ಕುಸಿಯಿತು. ಉಮೇಶ್ ಯಾದವ್ 3, ಬುಮ್ರಾ, ಜಡೇಜ ಮತ್ತು ಠಾಕೂರ್ ತಲಾ 2 ವಿಕೆಟ್ ಉರುಳಿಸಿ ಭಾರತದ ಗೆಲುವು ತಂದುಕೊಟ್ಟರು.