ಇಂದಿನ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?
IND vs PAK Pitch Report: ಅಭಿಷೇಕ್ ಶರ್ಮ ಮತ್ತು ಶುಭಮನ್ ಲಿಗ್ ಬೀಸು ಆಟದ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಆದರೆ ಎಲ್ಲ ಪಂದ್ಯಗಳಿಗೂ ಇವರನ್ನೇ ನಂಬಿ ಕುಳಿತರೆ ಆಗದು. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಲಯ ಕಂಡುಕೊಳ್ಳಬೇಕು. ಕಳೆದ ಪಂದ್ಯದಲ್ಲಿ ಒಂದಂಕಿಗೆ ಸೀಮಿತರಾಗಿದ್ದರು.

-

ದುಬೈ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವೆ ಇಂದು ನಡೆಯುವ ಏಷ್ಯಾಕಪ್ ಟಿ20(Asia Cup 2025) ಸೂಪರ್-4 ಹೈವೋಲ್ಟೇಜ್ ಪಂದ್ಯ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಪಂದ್ಯಕ್ಕೂ ಮುನ್ನ ದುಬೈ ಪಿಚ್ ಹೇಗಿದೆ?, ಯಾರಿಗೆ(IND vs PAK pitch report) ಸಹಕಾರಿ ಎಂಬ ಮಾಹಿತಿ ಇಲ್ಲಿದೆ.
ಬ್ಯಾಟರ್‌ಗಳಿಗೆ ಸವಾಲಿನ ಪಿಚ್
ಈ ಬಾರಿಯ ಏಷ್ಯಾಕಪ್‌ನಲ್ಲಿ ದುಬೈ ಅಂಗಳದಲ್ಲಿ ಒಟ್ಟು 6 ಪಂದ್ಯಗಳು ನಡೆದಿವೆ. ಎಲ್ಲ ಪಂದ್ಯಗಳು ಸಾಧಾರಣ ಮೊತ್ತಕ್ಕೆ ಸೀಮಿತವಾಗಿತ್ತು. ಬೌಲರ್‌ಗಳೇ ಇಲ್ಲಿ ಮೇಲುಗೈ ಸಾಧಿಸಿದ್ದರು. ಅದರಲ್ಲೂ ಸ್ಪಿನ್ನರ್‌ಗಳು. ಹೀಗಾಗಿ ಇತ್ತಂಡಗಳು ಸ್ಪಿನ್ನರ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು. ಇಲ್ಲಿನ ಮೊದಲ ನಿಂಗ್ಸ್ ಸರಾಸರಿ ಸ್ಕೋರ್ 128. ಚೇಸಿಂಗ್ ನಡೆಸುವ ತಂಡಕ್ಕೆ ಈ ಪಿಚ್ ಹೆಚ್ಚು ಸಹಕಾರಿಯಾದ ಕಾರಣ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಂಡರೆ ಉತ್ತಮ.
ದುಬೈನಲ್ಲಿ ಒಟ್ಟಾರೆ ಟಿ20 ಪಂದ್ಯಗಳ ದಾಖಲೆ ನೋಡುವುದಾದರೆ, ಇದುವರೆಗೆ 116 ಪಂದ್ಯಗಳು ನಡೆದಿದ್ದು, ಈ ಪೈಕಿ 62 ಪಂದ್ಯಗಳಲ್ಲಿ ಚೇಸಿಂಗ್ ನಡೆಸಿದ ತಂಡಗಳು ಗೆದ್ದಿದೆ. 53 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಿಸಿದೆ.
ಉಭಯ ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಇದನ್ನೂ ಓದಿ IND vs PAK: ಪಾಕ್ ವಿರೋಧದ ಮಧ್ಯೆಯೂ ಸೂಪರ್ 4 ಪಂದ್ಯಕ್ಕೆ ಪೈಕ್ರಾಫ್ಟ್ ಮ್ಯಾಚ್ ರೆಫರಿ
ಪಾಕಿಸ್ತಾನ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿ.ಕೀ.), ಫಖರ್ ಜಮಾನ್, ಸಲ್ಮಾನ್ ಅಘಾ (ನಾಯಕ), ಖುಶ್ದಿಲ್ ಶಾ, ಹಸನ್ ನವಾಜ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.