IND vs PAK: ಇನ್ನು ಮುಂದೆ ವಿಶ್ವಕಪ್ ಗ್ರೂಪ್ ಹಂತದಲ್ಲಿ ಭಾರತ-ಪಾಕ್ ಪಂದ್ಯ ನಡೆಯುವುದು ಅನುಮಾನ!
Pahalgam Terrorist Attack: ಮುಂಬರುವ ವಿಶ್ವಕಪ್ ಕೂಟದಲ್ಲಿ ಭಾರತ ಪಾಕಿಸ್ಥಾನ ಪಂದ್ಯಗಳ ಮೇಲೆ ಪಹಲ್ಗಾಮ್‌ನ ಉಗ್ರರ ದಾಳಿಯ ಕರಿನೆರಳು ಬಿದ್ದಿದ್ದು, ಈ ಸಂಬಂಧವಾಗಿ, ಬಿಸಿಸಿಐ ಮತ್ತು ಭಾರತ ಸರಕಾರ ಯಾವ ನಿಲುವನ್ನು ತಳೆಯಲಿದೆ ಎಂಬ ಕುತೂಹಲ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.


ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್(Pahalgam Terrorist Attack)ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಮಾರಣಾಂತಿಕ ಉಗ್ರರ ಗುಂಡಿನ ದಾಳಿಯ ಬಳಿಕ ಭಾರತವು ಹಲವು ರಾಜತಾಂತ್ರಿಕ ನಿರ್ಧಾರ ಕೈಗೊಂಡಿದೆ. ಪರಿಸ್ಥಿತಿ ಹೀಗಿರುವಾಗ ಮುಂಬರುವ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತ-ಪಾಕಿಸ್ತಾನ(IND vs PAK) ಪಂದ್ಯಗಳ ಕುರಿತಾಗಿಯೂ ಅಪಸ್ವರ ಎದ್ದಿದೆ. ಭವಿಷ್ಯದ ಐಸಿಸಿ ಟೂರ್ನಿಯಲ್ಲಿ ಭಾರತ ಮತ್ತು-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ(IND vs PAK World Cup Group Stage) ಇರುವುದು ಬೇಡ ಎಂದು ಬಿಸಿಸಿಐ(BCCI) ಐಸಿಸಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ತಾನದ ವಿರುದ್ಧ ಭಾರತ ಯಾವುದೇ ಕಾರಣಕ್ಕೂ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಸರ್ಕಾರ ಏನು ಹೇಳಿದರೂ ಅದನ್ನು ಮಾಡುತ್ತೇವೆ. ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ ಎಂದಿದ್ದರು.
ಇತ್ತೀಚೆಗೆ ಪಾಕ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಪಂದ್ಯವನ್ನು ವೀಕ್ಷಿಸಲು ಬಿಸಿಸಿಐ ಕಡೆಯಿಂದ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಪಾಕ್ ಕ್ರಿಕೆಟ್ ಮಂಡಳಿ ಉಭಯ ತಂಡಗಳ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಬಗ್ಗೆ ಚರ್ಚೆ ನಡೆಸಿತ್ತು. ತಟಸ್ಥ ತಾಣದಲ್ಲಿ ಸರಣಿ ನಡೆಸುವಂತೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ಮತ್ತೆ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆರಂಭವಾಗುವ ಸಾಧ್ಯತೆಯೊಂದು ಕಂಡು ಬಂದಿತ್ತು. ಆದರೆ ಇದೀಗ ರಾಜೀವ್ ಶುಕ್ಲಾ ಭಾರತ ತಂಡ ಪಾಕ್ ಜತೆ ದ್ವಿಪಕ್ಷೀಯ ಸರಣಿ ಆಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ Indian Airlines: ವಾಯುಮಾರ್ಗ ಮುಚ್ಚಿದ ಪಾಕ್; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್
ಮುಂಬರುವ ವಿಶ್ವಕಪ್ ಕೂಟದಲ್ಲಿ ಭಾರತ ಪಾಕಿಸ್ಥಾನ ಪಂದ್ಯಗಳ ಮೇಲೆ ಪಹಲ್ಗಾಮ್‌ನ ಉಗ್ರರ ದಾಳಿಯ ಕರಿನೆರಳು ಬಿದ್ದಿದ್ದು, ಈ ಸಂಬಂಧವಾಗಿ, ಬಿಸಿಸಿಐ ಮತ್ತು ಭಾರತ ಸರಕಾರ ಯಾವ ನಿಲುವನ್ನು ತಳೆಯಲಿದೆ ಎಂಬ ಕುತೂಹಲ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.