ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Airlines: ವಾಯುಮಾರ್ಗ ಮುಚ್ಚಿದ ಪಾಕ್‌; ಏರ್‌ಇಂಡಿಯಾ, ಇಂಡಿಗೋ ವಿಮಾನಗಳು ಡೈವರ್ಟ್‌

ಪಹಲ್ಗಾಮ್‌ ದುರಂತ (Pahalgam attack) ನಂತರ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಪ್ರಯಾಣಿಕರಿಗೆ ತಿಳಿಸಿದೆ. ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ "ಪರ್ಯಾಯ ವಿಸ್ತೃತ ಮಾರ್ಗ" ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ಮುಚ್ಚಿದ ಪಾಕ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (jammu and kashmir) ಪಹಲ್ಗಾಮ್‌ನಲ್ಲಿ(Pahalgam) ನಡೆದ ಭಯೋತ್ಪಾದಕ ದಾಳಿಯ (Terror Attack) ಅನಂತರ ಭಾರತ ಸರ್ಕಾರ (Indian Govt) ಪಾಕಿಸ್ತಾನದ (pakistan) ವಿರುದ್ಧ ಕೈಗೊಂಡ ಕ್ರಮಗಳಿಗೆ ಪ್ರತಿಕಾರವಾಗಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ( Pak Airspace) ಭಾರತದ ವಿಮಾನಗಳಿಗೆ (Indian airlines) ಮುಚ್ಚಿದೆ. ಇದು ಭಾರತಕ್ಕೆ ಹೊರದೇಶಗಳಿಂದ ಬರುವ ಇಲ್ಲಿಂದ ಹೊರದೇಶಗಳಿಗೆ ಹೋಗುವ ವಿಮಾನಗಳ ಸೇವೆಯಲ್ಲಿ ವ್ಯತ್ಯಯವನ್ನು ಉಂಟು ಮಾಡಲಿದೆ. ಹೀಗಾಗಿ ವಿಮಾನ ಪ್ರಯಾಣಿಕರು ವಿಮಾನದ ಸಮಯ ಮತ್ತು ವೇಳಾ ಪಟ್ಟಿಯನ್ನು ಪರಿಶೀಲಿಸಿ ಹೋರಾಡುವಂತೆ ಏರ್ ಇಂಡಿಯಾ ಮತ್ತು ಇಂಡಿಗೋ ಪ್ರಕಟಣೆ ತಿಳಿಸಿದೆ.

ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿದ್ದರಿಂದ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಏರ್ ಇಂಡಿಯಾ ಮತ್ತು ಇಂಡಿಗೋ ಎಚ್ಚರಿಕೆ ನೀಡಿವೆ. ಈ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಎರಡೂ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ.

ಪಹಲ್ಗಾಮ್‌ ದುರಂತಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಸಾಮಾಜಿಕ ಜಾಲತಾಣವಾದ ಎಕ್ಸ್ ಮೂಲಕ ಪ್ರಯಾಣಿಕರಿಗೆ ತಿಳಿಸಿದೆ.

ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ "ಪರ್ಯಾಯ ವಿಸ್ತೃತ ಮಾರ್ಗ" ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಇದು ಅಮೆರಿಕ, ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕೆ ತೆರಳುವ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ ಹೇಳಿದೆ.

ಇದರಿಂದ ಪ್ರಯಾಣಿಕರಿಗೆ ಆಗುವ ಅನನುಕೂಲತೆಗೆ ವಿಷಾದಿಸುತ್ತೇವೆ. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣಿಕರು ವಿಮಾನ ಸಮಯ ಮತ್ತು ವೇಳಾಪಟ್ಟಿಯನ್ನು ಎರಡು ಬಾರಿ ಪರಿಶೀಲಿಸುವಂತೆ ಎರಡೂ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.



ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರದ ಮೊದಲ ಭಾಗವಾಗಿ ಭಾರತವು ಪಾಕಿಸ್ತಾನಿಯರ ವೀಸಾ ಅಮಾನತು, ಸಿಂಧೂ ಜಲ ಒಪ್ಪಂದವನ್ನು ರದ್ದು ಸೇರಿದಂತೆ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡ ಕೆಲವು ಗಂಟೆಗಳ ಬಳಿಕ ಪಾಕಿಸ್ತಾನವು ಭಾರತೀಯ ಒಡೆತನದ ಅಥವಾ ನಿರ್ವಹಿಸುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.

ನದಿ ನೀರು ಸರಬರಾಜಿನಲ್ಲಿ ಶೇ. 80ರಷ್ಟು ಪಡೆಯುವ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದನ್ನು ತನ್ನ ಹಕ್ಕುಗಳನ್ನು ಕಬಳಿಸುವ ಪ್ರಯತ್ನ ಎಂದಿರುವ ಪಾಕಿಸ್ತಾನ ಇದನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ದಾಳಿಯಲ್ಲಿ ನಾಗರಿಕರು ಮತ್ತು ಪ್ರವಾಸಿಗರು ಸೇರಿದಂತೆ ಇಪ್ಪತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಇದು ಕಳೆದ ಹಲವಾರು ವರ್ಷಗಳ ಬಳಿಕ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.



2019ರ ಫೆಬ್ರವರಿಯ ಬಳಿಕ ಭಾರತದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. 2019ರ ದಾಳಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದ್ದು, ಇದರಲ್ಲಿ 40 ಸಿಆರ್‌ಪಿಎಫ್ ಅಥವಾ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದರು.

ಪಹಲ್ಗಾಮ್‌ ನ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಸಾಬೀತುಪಡಿಸಲು ತಮ್ಮ ಬಳಿ ಪುರಾವೆಗಳಿವೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಹೇಳಿವೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಅಮೆರಿಕ, ಯುರೋಪ್, ಕತಾರ್, ಜಪಾನ್, ರಷ್ಯಾ ಮತ್ತು ಚೀನಾದ ರಾಜತಾಂತ್ರಿಕರಿಗೆ ಮಾಹಿತಿ ನೀಡಿದ್ದು, ಅವರೆಲ್ಲರೂ ಈ ದಾಳಿಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Pahalgam Attack: ಎಲ್‌ಇಟಿಯ ತರಬೇತಿ ಶಿಬಿರಗಳು ಎಲ್ಲಿವೆ? ಅವುಗಳನ್ನು ನಾಶ ಮಾಡಲು ಭಾರತಕ್ಕೆ ಸಾಧ್ಯವೇ?

ಈ ದಾಳಿಗೆ ಮಿಲಿಟರಿ ಮಟ್ಟದ ತರಬೇತಿಯ ಅಗತ್ಯವಿದೆ. ಹೀಗಾಗಿ ಇದರಲ್ಲಿ ಐಎಸ್ಐ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಭಾರತೀಯ ರಕ್ಷಣಾ ತಜ್ಞ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಯಶ್ ಮೋರ್ ಹೇಳಿದ್ದಾರೆ. ಪಾಕ್ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾಕ್ಕೆ ಸಂಬಂಧಿಸಿದ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಗುಪ್ತಚರ ಅಧಿಕಾರಿಗಳು ಕೆಲವು ಬಂದೂಕುಧಾರಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇವರಿಗಾಗಿ ಕಳೆದ 48 ಗಂಟೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ.