ಶ್ರೀಲಂಕಾ ಇಲೆವನ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ಭಾರತ
Sri Lanka Cricket XI vs India: ನಾಯಕ ಶುಭಮನ್ ಗಿಲ್ ಅಂತಿಮ ದಿನದಾಟದ ವೇಳೆ ಬ್ಯಾಟಿಂಗ್ ನಡೆಸಿ 44 ರನ್ ಗಳಿಸಿದರು. ತರಬೇತಿಯ ಸಮಯದಲ್ಲಿ ಬಲಗೈ ಬೆರಳಿನ ಗಾಯಕ್ಕೆ ತುತ್ತಾದ ಕಾರಣ ಮೊದಲ ಎರಡು ದಿನ ಪಂದ್ಯ ತಪ್ಪಿಸಿಕೊಂಡಿದ್ದರು. ಗಿಲ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು.
Shubman Gill and Yashasvi Jaiswal -
ಕೊಲಂಬೊ, ಆ.9: ಶ್ರೀಲಂಕಾ ಇಲೆವನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಅಂತರದ ಗೆಲುವು ಸಾಧಿಸಿ ಟೆಸ್ಟ್ ಸರಣಿಗೆ ಉತ್ತಮ ಸಿದ್ಧತೆ ಪೂರ್ಣಗೊಳಿಸಿದೆ. ಅಂತಿಮ ದಿನದಾಟದಲ್ಲಿ 207 ರನ್ ಬೆನ್ನಟ್ಟಿದ ಭಾರತ 4 ವಿಕೆಟ್‌ಗೆ 214 ರನ್ ಗಳಿಸಿ ಗೆಲುವು ಸಾಧಿಸಿತು.
ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೆಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 363 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ದಿನವಾದ ಶನಿವಾರ ಆಟ ಆರಂಭಿಸಿದ ಭಾರತ ತಂಡವು ದೇವದತ್ತ (ಬ್ಯಾಟಿಂಗ್ 142) ಅವರ ಅಮೋಘ ಬ್ಯಾಟಿಂಗ್ ಬಲದಿಂದ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 357 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ರವೀಂದ್ರ ಜಡೇಜ (63 ರನ್) ಅರ್ಧಶತಕ ಗಳಿಸಿದರು.
ಭಾನುವಾರ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಇಲೆವೆನ್ 6 ವಿಕೆಟ್‌ಗೆ 200 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಗುರಿ ಬೆನ್ನಟ್ಟಿದ ಭಾರತ ಯಶಸ್ವಿ ಜೈಸ್ವಾಲ್ ಅರ್ಧಶತಕದ ನೆರವಿನಿಂದ ಸುಲಭವಾಗಿ ಗುರಿ ತಲುಪಿತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಜೈಸ್ವಾಲ್ ಎರಡನೇ ಇನಿಂಗ್ಸ್‌ನಲ್ಲಿ 61 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸಿರಾಜ್ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿ ಭಾರತದ ಗೆಲುವು ಸಾರಿದರು. 15 ಎಸೆತಗಳಿಂದ ನಾಲ್ಕು ಸಿಕ್ಸರ್ ನೆರವಿನಿಂದ ಅಜೇಯ 32 ರನ್ ಬಾರಿಸಿದರು.
Mohammed Siraj with the winning runs 🔥🔥
— BCCI (@BCCI) August 9, 2026
A successful chase in Colombo for #TeamIndia against SLC XI 👏👏
Scorecard ▶️ https://t.co/g7rdlUUjY2 pic.twitter.com/4rAFzHXWXN
ನಾಯಕ ಶುಭಮನ್ ಗಿಲ್ ಅಂತಿಮ ದಿನದಾಟದ ವೇಳೆ ಬ್ಯಾಟಿಂಗ್ ನಡೆಸಿ 44 ರನ್ ಗಳಿಸಿದರು. ತರಬೇತಿಯ ಸಮಯದಲ್ಲಿ ಬಲಗೈ ಬೆರಳಿನ ಗಾಯಕ್ಕೆ ತುತ್ತಾದ ಕಾರಣ ಮೊದಲ ಎರಡು ದಿನ ಪಂದ್ಯ ತಪ್ಪಿಸಿಕೊಂಡಿದ್ದರು. ಗಿಲ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು.
ಗಾಯದ ಭೀತಿಯಿಂದ ಹೊರಬಂದ ಶುಭಮನ್ ಗಿಲ್; ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್
ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ ಗಳಿಸಿದ್ದ ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ನಾಯಕ ಕೆ.ಎಲ್ ರಾಹುಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಲಿಲ್ಲ. ವಿಕೆಟ್‌ಕೀಪರ್ ಬ್ಯಾಟರ್‌ಗಳಾದ ರಿಷಭ್ ಪಂತ್ ಮತ್ತು ಧ್ರುವ ಜುರೇಲ್ ಮತ್ತೆ ವಿಫಲರಾದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಶ್ರೀಲಂಕಾ ಇಲೆವನ್: 90 ಓವರ್‌ಗಳಲ್ಲಿ 8ಕ್ಕೆ363 ಡಿಕ್ಲೇರ್ಡ್. ಭಾರತ: 90 ಓವರ್‌ಗಳಲ್ಲಿ 6ಕ್ಕೆ357 (ಕೆ.ಎಲ್. ರಾಹುಲ್ 40, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 142, ರವೀಂದ್ರ ಜಡೇಜಾ 63, ಮಾನವ ಸುತಾರ್ 41, ಸಾರಾಂಶ್ ಜೈನ್ 22, ಗುರ್ನೂರ್ ಬ್ರಾರ್ ಬ್ಯಾಟಿಂಗ್ 36, ರಮೇಶ್ ಮೆಂಡಿಸ್ 77ಕ್ಕೆ2, ಅಸಾಂಕಾ ಮನೋಜ್ 32ಕ್ಕೆ 2)
ದ್ವಿತೀಯ ಇನಿಂಗ್ಸ್: ಶ್ರೀಲಂಕಾ ಇಲೆವನ್: 6ಕ್ಕೆ 200 ಡಿಕ್ಲೇರ್(ನಿಶಾನ್ ಮದುಷ್ಕಾ 63*, ನಿಪುನ್ ಧನಂಜಯ 46, ಗುರ್ನೂರ್ ಬ್ರಾರ್ 37ಕ್ಕೆ 2, ರವೀಂದ್ರ ಜಡೇಜಾ 33 ಕ್ಕೆ 2). ಭಾರತ; 4ಕ್ಕೆ 214 ರನ್(ಜೈಸ್ವಾಲ್ 61, ಶುಭಮನ್ ಗಿಲ್ 44, ರಿಷಭ್ ಪಂತ್ 28, ಕೇಶರ ನುವಂಥ 57ಕ್ಕೆ 2).